Advertisement

ರಸ್ತೆ ತುಂಬಾ ಧೂಳು, ಕೇಳ್ಳೋರಿಲ್ಲ ವಾಹನ ಸವಾರರ ಗೋಳು 

02:31 PM May 25, 2022 | Team Udayavani |

ದೇವನಹಳ್ಳಿ: ತಾಲೂಕಿನ ಚಪ್ಪರಕಲ್ಲು ಸರ್ಕಲ್‌ ನಿಂದ ತಿಂಡ್ಲು ಮಾರ್ಗವಾಗಿ ನಡೆಯುತ್ತಿರುವರಸ್ತೆ ಅಗಲೀಕರಣ ಮತ್ತು ಡಾಂಬರೀಕರಣಕಾಮಗಾರಿ ಕುಂಠಿತ ಆಗಿದ್ದು, ರಸ್ತೆಯುದ್ದಕ್ಕೂ ಜೆಲ್ಲಿ ಪೌಡರ್‌ ಹಾಕಿರುವುದರಿಂದ ಭಾರೀವಾಹನಗಳು ಹೋಗುವುದರಿಂದಧೂಳಿನಲ್ಲಿಯೇ ದ್ವಿಚಕ್ರ ವಾಹನ ಸವಾರರು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಹೇಳಿ, ಕೇಳಿ ರಸ್ತೆಯು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿಯೇ ಹಾದು ಹೋಗುವ ರಸ್ತೆಯಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ದಿನನಿತ್ಯ ಸಂಚರಿಸುತ್ತಲೇ ಇರುತ್ತವೆ. ಅಕ್ಕಪಕ್ಕದಲ್ಲಿ ತೋಟಗಳು, ಮನೆಗಳುಇರುವುದರಿಂದ ಧೂಳು ಮನೆಗಳಿಗೆ ಮತ್ತುತೋಟಗಳಿಗೆ ಆವರಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಮಧ್ಯಾಹ್ನದ ವೇಳೆಯಲ್ಲಂತೂ ಈ ರಸ್ತೆಯಲ್ಲಿ ಓಡಾಡುವುದೇ ಕಷ್ಟಸಾಧ್ಯವಾಗುತ್ತದೆ.ಡಾಂಬರೀಕರಣ ಆಗದಿರುವುದರಿಂದ ಜೆಲ್ಲಿಪೌಡರ್‌ ಹಾಗೆಯೇ ಉಳಿಸಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ಬಹುಬೇಗನೆಮುಗಿಸುವಂತೆ ಆಗಬೇಕು ಎಂದು ಸ್ಥಳೀಯಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮಸ್ಥರ ಒತ್ತಾಯ: ಧೂಳಿನಿಂದ ರೋಗರುಜಿನಗಳಿಗೆ ತುತ್ತಾಗಬೇಕಾಗುತ್ತದೆ. ಲಾರಿಗಳು ಹೋಗುವುದರಿಂದ ಹಿಂಬದಿಯಿಂದ ಬರುವಕಾರು, ದ್ವಿಚಕ್ರ ವಾಹನಗಳ ಸವಾರರು ಧೂಳಿನಲ್ಲಿಯೇ ಸಂಚರಿಸಬೇಕು. ಆಯತಪ್ಪಿ ಏನಾದರೂ ಬಿದ್ದರೆ ಆಸ್ಪತ್ರೆ ಸೇರುವುದು ಖಚಿತ.ಲೋಕೋಪಯೋಗಿ ಇಲಾಖೆ ಅಧಿಕಾರಿಗಳುಕೂಡಲೇ ಈ ರಸ್ತೆಗಳಿಗೆ ಡಾಂಬರೀಕರಣ ಮಾಡಿಸುಗಮ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಡಾಂಬರೀಕರಣ ಆಗಿಲ್ಲ: ರಸ್ತೆ ತುಂಬಾ ಧೂಳು ತುಂಬಿಕೊಂಡಿದ್ದು, ವಾಹನ ಸವಾರರು ಧೂಳಿನಸ್ನಾನ ಮಾಡಿಕೊಂಡು ಸಂಚರಿಸುವಂತೆ ಆಗಿದೆ.ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣಕಾಮಗಾರಿಗೆ ಉದ್ಘಾಟನೆಯಾಗಿ ವರ್ಷ ಕಳೆದರೂ, ಚಪ್ಪರಕಲ್ಲು ಸರ್ಕಲ್‌ನಿಂದ ಕುಂದಾಣಸರ್ಕಲ್‌ವರೆಗೆ ಮಾತ್ರ ಡಾಂಬರೀಕರಣವಾಗಿದ್ದು,ಅಲ್ಲಿಂದ ಸುಮಾರು 5-6 ಕಿ.ಮೀ. ರಸ್ತೆ ಡಾಂಬರು ಕಿತ್ತು, ಜೆಲ್ಲಿ ಕಲ್ಲಿನ ದೂಳು ರಸ್ತೆಯನ್ನಾಗಿಸಲಾಗಿದೆ. ಬೇಸಿಗೆಯಾಗಿರುವುದರಿಂದ ಬೃಹತ್‌ ವಾಹನಗ‌ಳು ಈ ರಸ್ತೆಯಲ್ಲಿ ಸಂಚರಿಸಿದರೆ, ಮುಂಬರುವ ಯಾವುದೇ ವಾಹನ ಕಾಣಿಸದೆ, ಧೂಳಿನಿಂದ ರಸ್ತೆ ಸಂಪೂರ್ಣವಾಗಿ ಆವರಿಸಿರುವುದು ಕಂಡುಬರುತ್ತದೆ.

Advertisement

ಜಿಲ್ಲಾಧಿಕಾರಿ ಕಚೇರಿ ಕೂಗಳತೆ ದೂರದಲ್ಲಿದ್ದರೂ, ರಸ್ತೆಡಾಂಬರೀಕರಣ ಆಗದೇ ಧೂಳಿನಲ್ಲೇಜನ ಸಂಚರಿಸುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಅಧಿಕಾರಿಗಳು ಕೂಡಲೇಗಮನಹರಿಸಿ ಜನರಿಗೆ ಧೂಳಿನಿಂದ ಆಗುತ್ತಿರುವ ಸಮಸ್ಯೆ ಬಗೆಹರಿಸಬೇಕು. – ನಾರಾಯಣಸ್ವಾಮಿ, ಗ್ರಾಮಸ್ಥ

 

Advertisement

Udayavani is now on Telegram. Click here to join our channel and stay updated with the latest news.

Next