Advertisement

ಧೂಳಿನ ನಿಯಂತ್ರಣ ಪ್ಯೂರಿಫೈಯರ್‌ನಿಂದ ಅಸಾಧ್ಯ

01:33 AM May 06, 2019 | Lakshmi GovindaRaj |

ಬೆಂಗಳೂರು: ನಗರದಲ್ಲಿ ಧೂಳಿನ ಕಣಗಳು ಪ್ರಮಾಣ ದುಷ್ಪರಿಣಾಮ ಬೀರುವ ಹಂತ ತಲುಪಿದ್ದು, ಇದನ್ನು ತಡೆಯಲು ಬಿಬಿಎಂಪಿ ಏರ್‌ಪ್ಯೂರಿಫೈಯರ್‌ (ವಾಯು ಶುದ್ಧೀಕರಣ) ಸಾಧನ ಅಳವಡಿಸಲು ಮುಂದಾಗಿದೆ. ಆದರೆ, ಅದರಿಂದ ನಿರೀಕ್ಷಿತ ಮಟ್ಟದಲ್ಲಿ ಧೂಳಿನ ಕಣ ತಡೆಗಟ್ಟಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

Advertisement

ಏಕೆಂದರೆ, ನಗರದಲ್ಲೆಲ್ಲಾ ಏರ್‌ ಪ್ಯೂರಿಫೈರ್‌ಗಳನ್ನು ಅಳವಡಿಸಿದರೂ ಧೂಳಿನ ಸಮಸ್ಯೆ ನಿಯಂತ್ರಣ ಅಸಾಧ್ಯವೆಂದು ತಜ್ಞರು ವಿಶ್ಲೇಷಿಸಿದ್ದಾರೆ. ನಗರದ ಧೂಳಿನ ಸಮಸ್ಯೆ ಮೊದಲೆಲ್ಲ ಕೆಮ್ಮು, ಅಸ್ತಮಾಗೆ ಸೀಮಿತವಾಗಿತ್ತು. ಆದರೆ, ಇಂದು ಮಾರಣಾಂತಿಕ ಹಂತಕ್ಕೆ ಬಂದು ತಲುಪಿದೆ.

ಏರ್‌ಪ್ಯೂರಿಫೈಯರ್‌ ಅಳವಡಿಕೆಗೆ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಕಾಯ್ದಿರಿಸಿ ಈಗಾಗಲೇ ಹಡ್ಸನ್‌ ವೃತ್ತದಲ್ಲಿ ಖಾಸಗಿ ಕಂಪನಿಯೊಂದು ಪ್ರಯೋಗಿಕವಾಗಿ ಏರ್‌ಪ್ಯೂರಿಫೈಯರ್‌ ಸಾಧನ ಅಳವಡಿಸಿದೆ. ಆದರೆ, ನಗರದಲ್ಲಿರುವ ಧೂಳಿನ ಪ್ರಮಾಣವನ್ನು ಕಡಿಮೆ ಮಾಡಲು ಬಿಬಿಎಂಪಿ, ಪೂರ್ಣ ಪ್ರಮಾಣದಲ್ಲಿ ಪರಿಹಾರ ಕಂಡುಕೊಳ್ಳುತ್ತಿಲ್ಲ ಎನ್ನುತ್ತಾರೆ ತಜ್ಞರು.

ನಗರದ ಧೂಳಿನ ಪ್ರಮಾಣ ಹಾಗೂ ಅದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ “ಕ್ಲೈ ಮೇಟ್‌ ಟ್ರೆಂಡ್ಸ್‌’ ಎನ್ನುವ ಸಂಸ್ಥೆಯ ವರದಿ ಎಚ್ಚರಿಸಿತ್ತು. 2015ರಲ್ಲಿ “ಹರ್ಬನ್‌ ಎಮಿಷನ್‌’ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ನಗರದಲ್ಲಿ 21, 300 ಟನ್‌ ಧೂಳಿನ ಕಣಗಳಿರುವುದು ಪತ್ತೆಯಾಗಿತ್ತು. ಅದು ಈಗ ಮತ್ತಷ್ಟು ಹೆಚ್ಚಿರುವ ಸಾಧ್ಯತೆಗಳಿವೆ.

ಬಿಬಿಎಂಪಿ ಅಳವಡಿಸಶಿಸಿರುವ ಏಲು ಉದ್ದೇರ್‌ಪ್ಯೂರಿಫೈರ್‌ನಲ್ಲಿ 20 ದಿನಗಳಿಗೆ ಅಂದಾಜು 2.5 ಕೆ.ಜಿ. ಯಷ್ಟು ಧೂಳಿನ ಕಣವನ್ನು ಸಂಗ್ರಹಿಸಬಹುದು. ಅಂದರೆ ವರ್ಷಕ್ಕೆ 45.6 ಕೆ.ಜಿ.ಯಷ್ಟು ಧೂಳು ಮಾತ್ರ ಸಂಗ್ರಹವಾಗುತ್ತದೆ.

Advertisement

ಆದರೆ, ನಗರದಲ್ಲಿ ಇರುವ ಧೂಳಿನ ಕಣಗಳನ್ನು ಸಂಗ್ರಹಿಸಲು 4,67,105 ಏರ್‌ಪ್ಯೂರಿಫೈಯರ್‌ ಸಾಧನಗಳು ಬೇಕು. ಆ ಪ್ರಮಾಣದ ಸಾಧನಗಳಿಗೆ ಕೋಟ್ಯಂತರ ರೂ.ಗಳು ಬೇಕಾಗುತ್ತದೆ. ಒಂದು ಏರ್‌ಪ್ಯೂರಿಫೈಯರ್‌ಗೆ 2 ರಿಂದ 3 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದ್ದು, ಬಿಬಿಎಂಪಿ ಮೀಸಲಿಟ್ಟಿರುವ 5 ಕೋಟಿಯಲ್ಲಿ 200 ರಿಂದ 210 ಏರ್‌ಪ್ಯೂರಿಫೈಯರ್‌ ಮಾತ್ರ ಖರೀದಿಸಬಹುದು. ಇದು ನಗರದ ಯಾವ ಮೂಲೆಗೂ ಸಾಲದು ಎನ್ನುತ್ತಾರೆ ತಜ್ಞರು.

ಏರ್‌ಪ್ಯೂರಿಫೈಯರ್‌ ಎಸಿ ರೀತಿಯಲ್ಲಿ ಕೆಲಸ ಮಾಡುತ್ತದೆ. ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ಇದು ಕಾರ್ಯ ನಿರ್ವಹಿಸುತ್ತದೆ. ಇದರ ಮುಂದೆ ಇರುವ ವ್ಯಕ್ತಿಗೆ ಕೆಲವು ನಿಮಿಷಗಳ ಮಟ್ಟಿಗೆ ಮಾತ್ರ ಇದರಿಂದ ಉಪಯೋಗವಾಗಲಿದೆ. ಅದು ಸಹ ಅದರ ಮುಂದೆ ಇದ್ದಾಗ ಮಾತ್ರ ಎನ್ನುತ್ತಾರೆ ಕ್ಲೀನ್‌ ಏರ್‌ಪ್ಲ್ರಾಟ್‌ ಫಾರ್ಮ್ನ ಸಂಸ್ಥಾಪಕ ಯೋಗೇಶ್‌ ರಂಗನಾಥ್‌.

“ಧೂಳಿನ ಕಣ (ಪಿ.ಎಮ್‌ 2.5) ಬೆಂಗಳೂರಿನ ಜನರ ದೇಹದ ಒಳಗೆ ಸೇರಿಕೊಳ್ಳುತ್ತಿದೆ. ಇದು ಕಣ್ಣಿಗೆ ಕಾಣದ ರೀತಿಯಲ್ಲಿ ಉಸಿರಾಟದ ಮೂಲಕ ಶ್ವಾಸಕೋಶವನ್ನು ಸೇರಿಕೊಳ್ಳುತ್ತಿದ್ದು, ದೇಹದ ಹಲವು ಅಂಗಾಂಗಗಳಿಗೆ ಸಮಸ್ಯೆ ಉಂಟುಮಾಡುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಇದರ ಪ್ರಮಾಣ ಒಂದು ದಿನಕ್ಕೆ 60 ಮೈಕ್ರೊ ಗ್ರಾಂ ಫಾರ್‌ ಕ್ಯೂಬಿಕ್‌ ಮೀಟರ್‌ ಇರಬೇಕು ಆದರೆ, ಇದರ ಪ್ರಮಾಣ 100 ರಿಂದ 120 ದಾಟುತ್ತಿದೆ. ಅದರ ಸಾಮಾನ್ಯ ಪ್ರಮಾಣಕ್ಕಿಂತ ದುಪ್ಪಟ್ಟಾಗಿದೆ’ ಎನ್ನುತ್ತಾರೆ.

ಏನಿದು ಏರ್‌ಪ್ಯೂರಿಫೈಯರ್‌?: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ಅದನ್ನು ಕಡಿಮೆ ಮಾಡಲು ಹುಟ್ಟಿಕೊಂಡ ಹೊಸ ಸಾಧನವಿದು. ಇದು ಮನೆಯ ವ್ಯಾಕ್ಯೂಮ್‌ ಕ್ಲೀನರ್‌ನ ರೀತಿಯಲ್ಲಿ ಕೆಲಸಮಾಡುತ್ತದೆ.

ಧೂಳನ್ನು ಹೀರಿಕೊಳ್ಳುತ್ತದೆ. ಉಳಿದ ಗಾಳಿ ಹೊರ ಬರುತ್ತದೆ. ದೆಹಲಿ ವಾಯುಮಾಲಿನ್ಯದ ತವರು ಎನ್ನುವಷ್ಟು ವಾಯುಮಾಲಿನ್ಯಕ್ಕೆ ಹೆಸರಾಗಿದೆ. ಮುಂಬೈ ಸಹ ಈ ಸಮಸ್ಯೆಯಿಂದ ಹೊರತಾಗಿಲ್ಲ. ಈ ನಗರಗಳಲ್ಲಿಯೂ ಸಹ ಏರ್‌ಪ್ಯೂರಿಫೈಯರ್‌ ಅನ್ನು ಅಳವಡಿಸಲಾಗಿತ್ತು. ಆದರೆ, ಅಲ್ಲಿಯೂ ಇದು ಯಶಸ್ವಿಯಾಗಿಲ್ಲ. ಈಗ ಪ್ರಯೋಗ ಬೆಂಗಳೂರಿನ ಮೇಲಾಗುತ್ತಿದೆ.

ಕ್ಲೀನ್‌ ಏರ್‌ಪ್ಲ್ರಾಟ್‌ ಫಾರ್ಮ್ ಸಂಸ್ಥೆ ಅಧ್ಯಯನ
ಪ್ರದೇಶ – ಮೈಕ್ರೋಗ್ರಾಂ ವಿವರ
ಸಿಟಿ ರೈಲ್ವೆ ಪ್ರದೇಶ -136
ಜಯನಗರ -100
ಸಿಲ್ಕ್ಬೋರ್ಡ್‌- 104
ಹೆಬ್ಟಾಳ -93
ನಿಮ್ಹಾನ್ಸ್‌ ಪ್ರದೇಶ – 91
ಬಸ‌ವೇಶ್ವರ ನಗರ -72

ಇನ್ನೊಂದು ವಾರದಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಲಿದೆ. ವರದಿಯಲ್ಲಿನ ಸಾಧಕ-ಭಾದಕಗಳನ್ನು ನೋಡಿಕೊಂಡು ಏರ್‌ಪ್ಯೂರಿಫೈರ್‌ ಸಾಧನವನ್ನು ಅಳವಡಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು ಯಾವುದು ಅಂತಿಮವಾಗಿಲ್ಲ.
-ಚಂದ್ರಶೇಖರ್‌, ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್‌

* ಹಿತೇಶ್‌. ವೈ

Advertisement

Udayavani is now on Telegram. Click here to join our channel and stay updated with the latest news.

Next