Advertisement

ಬಂಟರ ಸಂಘ ಪಿಂಪ್ರಿ-ಚಿಂಚ್ವಾಡ್‌ ಭಕ್ತಿ ಸಂಭ್ರಮದ ದಸರಾ ಪೂಜೆ

02:26 PM Oct 16, 2018 | Team Udayavani |

ಪುಣೆ: ನಾವು ಬಂಟರು ಮೂಲತಃ ತುಳುನಾಡಿನ ಕೃಷಿಕ ಕುಟುಂಬದಿಂದ ಬಂದವರಾಗಿದ್ದು ಧಾರ್ಮಿಕ ನಂಬಿಕೆಗಳೇ ನಮಗೆ ಜೀವಾಳವಾಗಿವೆೆ. ತುಳುನಾಡಿನಲ್ಲಿ ವಿಶೇಷವಾಗಿ ವಿವಿಧ ಹಬ್ಬ ಹರಿದಿನಗಳಂತೆಯೇ ಜಗನ್ಮಾ ತೆಯನ್ನು ಆರಾಧಿಸುವ ನವರಾತ್ರಿ ಹಬ್ಬವನ್ನು ನವದುರ್ಗೆಯರ ಆರಾಧನೆಯೊಂದಿಗೆ ಭಯ ಭಕ್ತಿಯಿಂದ ಆಚರಿಸುತ್ತಿರುವುದನ್ನು ನಾವು ಕಾಣುತ್ತಿ ದ್ದೇವೆ. ಆದ್ದರಿಂದ ಹೊರನಾಡಿನಲ್ಲಿರುವ ನಾವು ಸಮಾಜದೊಂದಿಗೆ ಒಗ್ಗಟ್ಟಾಗಿ ನಮ್ಮ ಸಂಸ್ಕೃತಿ, ಧಾರ್ಮಿಕ ಪರಂಪರಗಳನ್ನು ಮರೆಯದೆ ಆಚರಿಸಿ ನಮ್ಮ ಸಂಪ್ರದಾಯಗಳನ್ನು ಕಾಯ್ದುಕೊಳ್ಳುವ ಕಾರ್ಯವನ್ನು ಮಾಡುತ್ತಿದ್ದೇವೆ. ನವರಾತ್ರಿ ಹಬ್ಬವನ್ನು ಪ್ರತೀ ವರ್ಷದಂತೆ ನಮ್ಮ ಸಂಘದ ಮೂಲಕ ಆಚರಿಸಲು ಸಂತೋಷವಾಗುತ್ತಿದೆ. ಸಮಾಜ ಬಾಂಧವರೆಲ್ಲರಿಗೂ ಶ್ರೀದೇವಿ ಶುಭ ವನ್ನು  ಹರಸಲಿ ಎಂದು ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಅಧ್ಯಕ್ಷ ವಿಜಯ್‌ ಎಸ್‌ ಶೆಟ್ಟಿ ಕಟ್ಟಣಿಗೆ ಮನೆ ಬೋರ್ಕಟ್ಟೆ ನುಡಿದರು.

Advertisement

ಅವರು ಅ. 12ರಂದು ನಿಗಿxಯ ಹೊಟೇಲ್‌ ಪೂನಾ ಗೇಟ್‌ನಲ್ಲಿ ನಡೆದ ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ದಸರಾ ಹಬ್ಬ ಹಾಗೂ ದಾಂಡಿ ಯಾ ರಾಸ್‌ ಕಾರ್ಯಕ್ರಮದ ಸಂದರ್ಭ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಘದ ಹಿರಿಯರು, ಸಂಘದ ಸದಸ್ಯರೆಲ್ಲ ನನ್ನ ಮೇಲೆ ಪ್ರೀತಿ, ವಿಶ್ವಾಸವನ್ನಿಟ್ಟು ಸಂಘದ ನೇತೃತ್ವವನ್ನು ವಹಿಸಿದ್ದು ಎಲ್ಲರಿಗೂ ಈ ಶುಭ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇಂದಿನ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ಸಂಘಟಿಸಲು ಶ್ರಮಿಸಿದ ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರೆಲ್ಲರಿಗೂ ವಂದನೆಗಳು ಎಂದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಾಕೇಶ್‌ ಎ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅರುಣ್‌ ಶೆಟ್ಟಿ ವಿಜಯಾ ಬ್ಯಾಂಕ್‌, ಕೋಶಾಧಿಕಾರಿ ಸುಧಾಕರ ಶೆಟ್ಟಿ ಪೆಲತ್ತೂರು, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಸಮಿತ್‌ ಚೌಟ, ಸಾಂಸ್ಕೃತಿಕ ಉಪ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ಬೋರ್ಕಟ್ಟೆ, ಶಿಕ್ಷಣ ಮಾತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಕೆ. ಶೆಟ್ಟಿ ಮುಂಡ್ಕೂರು, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ದಿನೇಶ್‌ ಶೆಟ್ಟಿ ಉಜಿರೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಪ್ರಿಯಾ ಜೆ ಶೆಟ್ಟಿ ಉಪಸ್ಥಿತರಿದ್ದರು.

ಅತಿಥಿಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೇಖಾ ಶೆಟ್ಟಿ, ತಾರಾ ಶೆಟ್ಟಿ, ಸುನೀತಾ ಶೆಟ್ಟಿ ಪ್ರಾರ್ಥನೆಗೈದರು. ಸುಧಾಕರ ಶೆಟ್ಟಿ ಪೆಲತ್ತೂರು, ತಾರಾ ಜೆ. ಶೆಟ್ಟಿ, ನಿಧೀಶ್‌ ಶೆಟ್ಟಿ ನಿಟ್ಟೆ ಅತಿಥಿಗಳನ್ನು ಪರಿಚಯಿಸಿದರು. ಅತಿಥಿಗಳನ್ನು ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುತ್ಛವನ್ನಿತ್ತು ಗೌರವಿಸಲಾಯಿತು. ಈ ಸಂದರ್ಭ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಹಾಗೂ ವಿವಿಧ ಗಣ್ಯರುಗಳನ್ನು ಪುಷ್ಪಗುತ್ಛ ನೀಡಿ ಗೌರವಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಡಿ. ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಸುಪ್ರಿಯಾ ಜೆ. ಶೆಟ್ಟಿ ಸ್ವಾಗತಿಸಿದರು. ಡಾ|  ಸಮಿತ್‌ ಚೌಟ ವಂದಿಸಿದರು.

ಸಂಘದ ಅಧ್ಯಕ್ಷ  ವಿಜಯ್‌ ಶೆಟ್ಟಿಯವರು ಭತ್ತದ ತೆನೆಗಳನ್ನು ಹೊತ್ತು ತಂದು ತುಳಸಿ ಕಟ್ಟೆಯಲ್ಲಿರಿಸಿ ಸಾಂಪ್ರದಾಯಿಕ ರೀತಿಯಿಂದ ಪೂಜಿಸಿದರು. ಮಹಿಳಾ ವಿಭಾಗದ  ಕಾರ್ಯಾಧ್ಯಕ್ಷೆ ಸುಪ್ರಿಯಾ ಜೆ. ಶೆಟ್ಟಿ   ಮತ್ತು ಮಹಿಳಾ ಸದಸ್ಯರು ಶ್ರೀದೇವಿಯ ಅಲಂಕೃತ ಮಂಟಪಕ್ಕೆ ಆರತಿ ಬೆಳಗಿ ಪ್ರಾರ್ಥಿಸಿದರು. ಮಹಿಳೆಯರು, ಪುರುಷರು ಮತ್ತು ಮಕ್ಕಳೆಲ್ಲ ಸೇರಿ ಆಕರ್ಷಕ ದಾಂಡಿಯಾ ಕಾರ್ಯಕ್ರಮದಲ್ಲಿ ಭಾಗವವಹಿಸಿದರು. ಮಹಿಳಾ ವಿಭಾಗ, ಯುವ ವಿಭಾಗ, ತಲೆಗಾಂವ್‌, ಲೋನವಾಲಾ ಪರಿಸರದ ಸಮಾಜ ಬಾಂಧವರಿಂದ ಆಕರ್ಷಕ ದಾಂಡಿಯಾ ನೃತ್ಯಗಳು ಗಮನಸೆಳೆದವು.

Advertisement

ಕಾರ್ಯಕ್ರಮದ ಕೊನೆಗೆ ತುಳುನಾಡಿನ ಸಾಂಪ್ರದಾಯಿಕ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳು, ಪುಣೆ ಬಂಟರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಮಹಿಳಾ ವಿಭಾಗ ಸದಸ್ಯರು, ಬಂಟ್ಸ್‌ ಅಸೋಸಿಯೇಶನ್‌ ಪದಾಧಿಕಾರಿಗಳು ಮತ್ತು ಮಹಿಳಾ ವಿಭಾಗ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ  ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಬಾಂಧವರು ಉಪಸ್ಥಿತರಿದ್ದರು. 
ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಕಾರ್ಯ ಕ್ರಮದ ಯಶಸ್ಸಿಗೆ ಸಹಕರಿಸಿದರು. 

 ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘ, ಬಂಟ್ಸ್‌ ಅಸೋಸಿ ಯೇಶನ್‌ ಬಂಟರ ಸಂಘವೆಂಬ ಭೇದ ನಮ್ಮಲ್ಲಿಲ್ಲ. ನಾವು ಪುಣೆಯಲ್ಲಿರುವ ಬಂಟರೆಲ್ಲರೂ ಒಗ್ಗಟ್ಟಿನಿಂದಿದ್ದೇವೆ. ಇಂದು ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಮೂಲಕ ನವರಾತ್ರಿ ಹಬ್ಬವನ್ನು ಆಚರಿಸಿಸುತ್ತಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಆನಂದವಾಗುತ್ತಿದೆ.
  – ಆನಂದ ಶೆಟ್ಟಿ ಮಿಯ್ನಾರು, ಅಧ್ಯಕ್ಷರು,ಬಂಟ್ಸ್‌ ಅಸೋ. ಪುಣೆ

ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಮೂಲಕ ಎಲ್ಲರನ್ನು ಒಗ್ಗೂಡಿಸಿಕೊಂಡು ದಸರಾ ಹಬ್ಬ ಹಾಗೂ ತೆನೆ ಹಬ್ಬವನ್ನು  ನಮ್ಮ ತುಳು ನಾಡಿನ ಸಂಪ್ರದಾಯಬದ್ಧವಾಗಿ ಆಚರಿಸುವುದನ್ನು ಕಂಡು ಬಹಳಷ್ಟು  ಸಂತೋ ಷವಾಯಿತು.  ವಿವಿಧತೆಯಲ್ಲಿ ಏಕತೆ ರೂಢಿಸಿ ಕೊಂಡ ನಾವು ವಿವಿಧ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದೇವೆ. ನವರಾತ್ರಿ ಹಬ್ಬವೂ ಇದರಲ್ಲಿ ಒಂದಾಗಿದೆ.
 – ದಯಾನಂದ ಎಸ್‌. ಶೆಟ್ಟಿ, ಅಧ್ಯಕ್ಷರು, ನವಿ ಮುಂಬಯಿ ಹೊಟೇಲ್‌ ಓನರ್ಸ್‌ ಅಸೋಸಿಯೇಶನ್‌

ನವದುರ್ಗೆಯರ ಆರಾಧನೆಯ ನವರಾತ್ರಿ ಹಬ್ಬವನ್ನು ಸಂಪ್ರದಾ ಯದಂತೆ ನಾವು ಆಚರಿಸುತ್ತಾ ಬಂದಿ ರುತ್ತೇವೆ. ನಮ್ಮ ಕುಟುಂಬ, ಪರಿವಾರಕ್ಕೆ ಆರೋಗ್ಯ, ಸುಖ, ಸಂಪತ್ತು, ಸೌಭಾಗ್ಯ ದೊರಕಬೇಕಾದರೆ  ಶ್ರೀದೇವಿಯ ದಯೆ ನಮಗೆ ಅಗತ್ಯವಾಗಿದೆ. ಇಂದಿನ ಕಾರ್ಯಕ್ರ ಮದಲ್ಲಿ ಭಾಗವಹಿಸಿ  ನಾನು ತುಳುನಾಡಿ ನಲ್ಲಿದ್ದೇನೆ ಎನ್ನುವಂತೆ ಭಾಸವಾಯಿತು.
– ಸಂಜೀವ ಎನ್‌. ಶೆಟ್ಟಿ, ಅಧ್ಯಕ್ಷರು, ಶ್ರೀ  ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರ ನೆರೂಲ್‌

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next