Advertisement
ಆನೆಗಳ ಆಯ್ಕೆ ಸಂಬಂಧ ಈಗಾಗಲೇ ಅರಣ್ಯ ಇಲಾಖೆ ಮತ್ತು ವೈದ್ಯರ ತಂಡ ಮತ್ತಿಗೋಡು, ದುಬಾರೆ, ಆನೆಕಾಡು, ಭಿಮನಕಟ್ಟೆ, ರಾಂಪುರ, ಬಳ್ಳೆ ಶಿಬಿರಗಳಿಗೆ ತೆರಳಿ ಒಂದು ಸುತ್ತಿನ ಪರೀಕ್ಷೆ ನಡೆಸಿತ್ತು. ಡಿಸಿಎಫ್ ಸೌರಭ್ ಕುಮಾರ್ ನೇತೃತ್ವದ ತಂಡ ಆ.2ರಂದು ಮತ್ತೆ ಮತ್ತಿಗೋಡು, ಭೀಮನಕಟ್ಟೆ, 3ರಂದು ದುಬಾರೆ ಮತ್ತು ಆನೆಕಾಡು ಆನೆ ಶಿಬಿರ ಹಾಗೂ ಆ.5ರಂದು ರಾಂಪುರ ಮತ್ತು ಬಳ್ಳೆ ಶಿಬಿರಗಳಿಗೆ ತೆರಳಿ ಆನೆಗಳನ್ನು ಪರಿಶೀಲಿಸಲಾಗಿದೆ. ವಾರಾಂತ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ದಸರೆಗೆ ಭಾಗವಹಿಸುವ 14 ಆನೆಗಳ ಪಟ್ಟಿ ಮತ್ತು ಗಜಪಯಣ ನಡೆಯುವ ದಿನಾಂಕ ನಿಗದಿಯಾಗಲಿದೆ.
Advertisement
ದಸರಾ ಮಹೋತ್ಸವ: ಗಜಪಡೆಯ ಆಯ್ಕೆ ಪ್ರಕ್ರಿಯೆ ಪೂರ್ಣ
09:27 PM Aug 06, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.