ಪಾಂಡವಪುರ: ದಸರಾ ಹಬ್ಬದ ಅಂಗವಾಗಿ ಹೊಸಕನ್ನಂಬಾಡಿ ಗ್ರಾಮದ ಕೆಆರ್‌ಎಸ್ ಹಿನ್ನೀರಿನ ಪ್ರದೇಶದಲ್ಲಿ ಆಯೋಜಿಸಿರುವ ಹೆಲಿರೈಡ್ ಹಾಗೂ ಬೋಟಿಂಗ್ ವ್ಯವಸ್ಥೆಗೆ ಶಾಸಕ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕ ಸಿ.ಎಸ್.ಪುಟ್ಟರಾಜು, ಶ್ರೀರಂಗಪಟ್ಟಣ ದಸರಾ ಹಬ್ಬದ ಅಂಗವಾಗಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೆಆರ್‌ಎಸ್ ಹಿನ್ನೀರಿನ ಪ್ರದೇಶದಲ್ಲಿ ಪ್ರವಾಸಿಗರಿಗಾಗಿಯೇ ಹೆಲಿರೈಡ್ ಹಾಗೂ ಬೋಟಿಂಗ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಕಲ್ಪಿಸಿಕೊಡಲಾಗಿದೆ. ಪ್ರವಾಸಿಗರು ಹೆಲಿರೈಡ್, ಬೋಟಿಂಗ್ ವ್ಯವಸ್ಥೆಯಲ್ಲಿ ಭಾಗವಹಿಸಬಹುದಾಗಿದೆ. ಇದು ಸೆ.29ರಿಂದ ಅ.8ರವರೆಗೆ ಇರಲಿದೆ. ನಂತರ ಪ್ರವಾಸಿಗರಿಂದ ಯಾವ ರೀತಿ ಸ್ಪಂದನೆ ಬರುತ್ತದೆಯೋ ನೋಡಿಕೊಂಡು ಮುಂದುವರಿಸುವು ಬೇಕೋ ಬೇಡವೋ ಎನ್ನುವುದನ್ನು ತೀರ್ಮಾನಿಸಲಾಗುತ್ತದೆ. ಪ್ರತಿಯೊಬ್ಬ ಪ್ರವಾಸಿಗರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರತಿಷ್ಠಿತ ಚಿಪ್ಸಾನ್ ಏರ್‌ಲೈನ್ ಸಂಸ್ಥೆ ವತಿಯು ಹೆಲಿರೈಡ್ ಜವಾಬ್ದಾರಿಯನ್ನು ಹೊತ್ತಿದೆ. ಹೆಲಿರೈಡ್ (ಹೆಲಿಕಾಪ್ಟರ್ ರೈಡ್)ಗೆ 2600 ರೂ. ಬೆಲೆ ನಿಗಮಾಡಿದ್ದಾರೆ. ಹೆಲಿಕ್ಯಾಪ್ಟರ್‌ನಲ್ಲಿ 6 ಮಂದಿ ಮಾತ್ರ ಒಮ್ಮೆ ಹೋಗಲು ಅವಕಾಶವಿದ್ದು, ಪ್ರತಿ ರೈಡ್ 8 ನಿಮಿಷಗಳ ಕಾಲ ಗಾಳಿಯಲ್ಲಿ ಸಂಪೂರ್ಣ ಕೆಆರ್‌ಎಸ್ ಅಣೆಕಟ್ಟೆಯನ್ನು ಸುತ್ತಾಡಿಸುತ್ತಾರೆ. ಕೆಆರ್‌ಎಸ್ ಅಣೆಕಟ್ಟೆಯನ್ನು ಮೇಲಿಂದು ವೀಕ್ಷಣೆ ಮಾಡುವುದಂತು ನಿಜಕ್ಕೂ ಅದ್ಬುತವಾದ ದೃಶ್ಯ ಇಡೀ ಕೆಆರ್‌ಎಸ್ ಅಣೆಕಟ್ಟೆಯ ಸಂಪೂರ್ಣ ವಿಸ್ತೀರ್ಣವನ್ನು ನೋಡಬಹುದಾಗಿದೆ.
ಹೆಲಿರೈಡ್‌ನಲ್ಲಿ ಸುತ್ತಾಡುವ ಈ ದೃಶ್ಯವಂತೂ ಪ್ರತಿಯೊಬ್ಬ ಪ್ರವಾಸಿಗರನ್ನು ಗಮನಸೆಳೆಯುತ್ತದೆ. ರೈಡ್ ಜತೆಗೆ ಬೋಟಿಂಗ್ ದೇವಸ್ಥಾನದ ಹಿಂಭಾಗದ ಪ್ರದೇಶದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಸ್ಪೀಡ್‌ಬೋಟ್, ಝಡ್‌ಸ್ಕ್ರೀ, ಕಾಯಿಡ್ ಹಾಗೂ ತಪ್ಪೆದ ಮೂಲಕ ನೀರಿನಲ್ಲಿ ಜಾಲಿರೈಡ್ ಮಾಡಬಹುದಾಗಿದೆ. ಸ್ಪೀಡ್‌ಬೋಟ್ ರೈಡ್‌ಗೆ-150 ರೂ. ಝಡ್ ಸ್ಕ್ರೀ- 400 ರೂ. ಕಾಯಿಡ್- 100 ಹಾಗೂ ತೆಪ್ಪಕ್ಕೆ ತಲಾ 50 ರೂ. ಬೆಲೆ ನಿಗ ಮಾಡಿದ್ದಾರೆ. ಬೋಟಿಂಗ್‌ನಲ್ಲಿ ಜಾಲಿಯಾಗಿ ಒಂದು ರೈಡ್ ಹೊರಟರೆ ಸಮುದ್ರದಲ್ಲಿ ಹೋಗುವ ಅನುಭವನ್ನು ನೀಡುತ್ತದೆ.
ಇಷ್ಟು ದಿನ ಕೇವಲ ನೀರನ್ನು ನೋಡಿ ಸಂಭ್ರಮಿಸುತ್ತಿದ್ದ ಪ್ರವಾಸಿಗರಿಗೆ ಕೆಆರ್‌ಎಸ್ ಹಿನ್ನೀರಿನ ಪ್ರದೇಶದಲ್ಲಿ ಬೋಟಿಂಗ್ ಮಾಡುವ ಅವಕಾಶವನ್ನು ಜಿಲ್ಲಾಡಳಿತ ಕಲ್ಪಿಸಿಕೊಟ್ಟಿದೆ. ಬೋಟಿಂಗ್ ಹಾಗೂ ಹೆಲಿರೈಡ್ ಸೆ.29 ರಿಂದ ಅ.8ರವರೆಗೆ ನಡೆಸಯಲಿದ್ದು ಪ್ರತಿ ದಿನ ಬೆ.9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ನಡೆಯಲಿದೆ. ಪ್ರವಾಸಿಗರು ಹೆಲಿರೈಡ್ -ಬೋಟಿಂಗ್‌ನಲ್ಲಿ ಸುತ್ತಾಡಿ ಸಂಭ್ರವಿಸಬಹುದಾಗಿದೆ.