Advertisement

ಯಕ್ಷಗಾನ ಬಯಲಾಟ ಸಂದರ್ಭ ಕಲಾವಿದರೊಬ್ಬರ ಮೇಲೆ ಹಲ್ಲೆ

03:43 PM Mar 23, 2017 | Team Udayavani |

ಬಂಟ್ವಾಳ: ಅಮಾrಡಿ ಗ್ರಾಮ ಪಚ್ಚಿನಡ್ಕದಲ್ಲಿ ಸಂಘಟನೆಯೊಂದರ ಆಶ್ರಯದಲ್ಲಿ ನಡೆದ ಯಕ್ಷಗಾನ ಬಯಲಾಟದ ಸಂದರ್ಭ ಪ್ರಸಿದ್ಧ ಕಲಾವಿದ ವೇಷಧಾರಿ ಒಬ್ಬರು ತಡವಾಗಿ ಬಂದುದಲ್ಲದೆ ಮತ್ತೆ ಅಲ್ಲಿಂದ ತೆರಳುವ ಸಂದರ್ಭ ಹಲ್ಲೆ ನಡೆಸಿದ್ದಾರೆ.

Advertisement

ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿ ಭಾಗವಹಿಸಿದ್ದರು. ಸಂಜೆ ಧಾರ್ಮಿಕ ಸಭೆ, ಸಾಧಕರಿಗೆ ಸಮ್ಮಾನ, ಅನ್ನ ಸಂತರ್ಪಣೆ ನಡೆದಿತ್ತು. ರಾತ್ರಿ ಒಂದು ಗಂಟೆಗೆ ವೇಷ ಮಾಡಬೇಕಾಗಿದ್ದದ ಕಲಾವಿದರು ಮೂರು ಗಂಟೆಗೆ ಬಂದುದಲ್ಲದೆ ನನಗೆ ಇನ್ನೊಂದು ಕಡೆ ವೇಷ ಮಾಡಲಿಕ್ಕಿದೆ ಎಂದು ಪ್ರಸ್ತಾವಿಸಿದ್ದರಂತೆ. ಅದನ್ನು ತಿಳಿದ ಕಲಾಭಿಮಾನಿಗಳಲ್ಲಿ ಕೆಲವರು ಆಕ್ಷೇಪ ಮಾಡಿದ್ದಲ್ಲದೆ ಹಲ್ಲೆ ನಡೆಸಿ ಎಚ್ಚರಿಕೆ ನೀಡಿದರು ಎನ್ನಲಾಧಿಗಿಧಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದ್ದು ಸಂಘಟಕರ ಸಮಸ್ಯೆಯ ಬಗ್ಗೆಯೂ ಕಲಾವಿದರು ತಿಳಿದುಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next