ಮುಂಬಯಿ: ಮಲಾಡ್ ಪೂರ್ವ ಕುರಾರ್ ವಿಲೇಜ್, ತಾನಾಜಿ ನಗರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತನೇ ಪ್ರತಿಷ್ಠಾವರ್ಧಂತಿ ಉತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎ. 20ರಿಂದ ಎ. 22ರ ತನಕ ಮೂರು ದಿನಗಳ ಕಾಲ ನೆರವೇರಿತು.
ಧಾರ್ಮಿಕ ಕಾರ್ಯಕ್ರಮವಾಗಿ ಎ. 20ರಂದು ಸಂಜೆ 5ರಿಂದ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ತೋರಣ ಮೂಹೂರ್ತ, ಋತ್ವಿಗÌರಣೆ, ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತು ಹೋಮ, ರಕ್ಷೊàಘ್ನ ಹೋಮ, ದಿಕಾ³ಲ ಬಲಿ ನಡೆಯಿತು. ಅಂದು ಸಂಜೆ ದುರ್ಗಾಪರಮೇಶ್ವರಿ ಸಮಿತಿಯ ಅಧ್ಯಕ್ಷ ಶೇಖರ ಕೆ. ಪೂಜಾರಿ ಬ್ರಹ್ಮಾವರ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಎ. 21 ರಂದು ಬೆಳಿಗ್ಗೆ 8ರಿಂದ ಮಹಾಗಣಪತಿ ಹೋಮ ನಂತರ ಗಣಪತಿ ದೇವರ ಸನ್ನಿಧಿಯಲ್ಲಿ ನವಕಲಶಾರಾಧನೆ, ಪ್ರಧಾನ ಹೋಮ, ಶ್ರೀ ದೇವಿ ಸನ್ನಿಧಿಯಲ್ಲಿ 25 ಕಲಶಾರಾಧನೆ, ಪ್ರಧಾನ ಹೋಮ, ಪಂಚಾಮೃತಾಭಿಷೇಕ, ಮಹಾಪೂಜೆ, ಪಲ್ಲ ಪೂಜೆ ಹಾಗೂ ಪ್ರಸಾದ ವಿತರಣೆ ಜರಗಿತು.
ಸಂಜೆ ಉತ್ಸವ ಬಲಿಗೆ ಮೊದಲು ಶ್ರೀ ದೇವೀ ಸನ್ನಿಧಿಯಲ್ಲಿ ಲಲಿತಾ ಸಹಸ್ರನಾಮಾರ್ಚನೆ, ಕುಂಕುಮಾರ್ಚನೆ, ಮಹಾಪೂಜೆ, ರಂಗಪೂಜೆ ಬಳಿಕ ಕಟ್ಟೆಪೂಜೆ, ಅನುಗ್ರಹ ಪ್ರಾರ್ಥನೆ ನಂತರ ಪ್ರಸಾದ ವಿತರಣೆ ನಡೆಯಿತು. ಸಾಣೂರು ಸಾಂತಿಂಜ ಜನಾರ್ದನ ಭಟ್, ದಹಿಸರಿನ ಶಂಕರಗುರು ಭಟ್ ಇವರ ಉಪಸ್ಥಿತಿಯಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಸಾವಿರಾರು ಭಕ್ತಾದಿಗಳು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಬಾಲಕೃಷ್ಣ ಭಟ್ ಅವರು ಅನ್ನದಾನದ ಪ್ರಸಾದವನ್ನು ತಯಾರಿಸಿದ್ದರು. ಜರಿಮರಿಯ ದಿನೇಶ್ ಕೋಟ್ಯಾನ್‌ಅವರ ವಾದ್ಯವಾದನದೊಂದಿಗೆ ವಿಷ್ಣು ಭಟ್ ಅವರು ಶ್ರೀ ಕ್ಷೇತ್ರದಿಂದ ಕುರಾರ್ ವಿಲೇಜ್ ಪರಿಸರದಲ್ಲಿ ಉತ್ಸವ ಬಲಿ ನಡೆಸಿಕೊಟ್ಟರು. ಸಾವಿರಾರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಕೊನೆಯ ದಿನವಾದ ಎ. 22 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ನವಕ ಪ್ರಧಾನ, ಕಲಶಾರಾಧನೆ, ಪ್ರಧಾನ ಹೋಮ, ಕಲಶಾಭಿಶೇಕ, ಮಹಾಮಂತ್ರಾಕ್ಷತೆ, ಋತ್ವಿಕ್ ಸಂಭಾವನೆ ಅನಂತರ ಪ್ರಸಾದ ವಿತರಣೆ ನಡೆಯಿತು. ಡೊಂಬಿವಲಿಯ ಶಂಕರನಾರಾಯಣ ತಂತ್ರಿಯವರ ನೇತೃತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಸೂಡ ಶ್ರೀ ರಾಘವೇಂದ್ರ ಭಟ್ ಅವರ ಪೌರೋಹಿತ್ಯದಲ್ಲಿ ಎಲ್ಲ ಪೂಜಾ ಕಾರ್ಯಗಳು ನೆರವೇರಿದವು.
ಶ್ರೀ ದುರ್ಗಾಪರಮೇಶ್ವರಿ ಸಮಿತಿಯ ಅಧ್ಯಕ್ಷರಾದ ಶೇಖರ ಕೆ. ಪೂಜಾರಿ ಬ್ರಹ್ಮಾವರ, ಉಪಾಧ್ಯಕ್ಷರಾದ ಎಸ್. ಬಿ. ಕೋಟ್ಯಾನ್, ಗಣೇಶ್ ಕುಂದರ್ ಮತ್ತು ಪದ್ಮನಾಭ ಟಿ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಬಿ. ದಿನೇಶ್ ಕುಲಾಲ್, ಜೊತೆ ಕಾರ್ಯದರ್ಶಿಗಳಾದ ಜಗನ್ನಾಥ ಎಚ್. ಮೆಂಡನ್, ಶೈಲೇಶ್ ಬಿ. ಪೂಜಾರಿ, ತನುಜಾ ಜಿ. ಪೂಜಾರಿ, ಗೌರವ ಕೋಶಾಧಿಕಾರಿ ಬಾಬು ಎಂ. ಸುವರ್ಣ, ಜೊತೆ ಕೋಶಾಧಿಕಾರಿಗಳಾದ ಗೋಪಾಲ್ ಎಂ. ಪೂಜಾರಿ ಮತ್ತು ಗೀತಾ ಸಿ. ಜತ್ತನ್, ಸಲಹಾ ಸಮಿತಿಯ ಸದಸ್ಯರಾದ ಶಂಕರ್ ಎಲ್. ಪೂಜಾರಿ, ನ್ಯಾಯವಾದಿ ಜಗನ್ನಾಥ ಎನ್. ಶೆಟ್ಟಿ, ಸಂತೋಷ್ ಕೆ. ಪೂಜಾರಿ, ಭಾಸ್ಕರ್ ಎಸ್. ಸನಿಲ…, ರಮೇಶ್ ಕೋಟ್ಯಾನ್ ಮತ್ತು ಗೋಪಾಲ್ ಬಿ. ಕೋಟ್ಯಾನ್, ಕಾರ್ಯಕಾರಿ ಸದಸ್ಯರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎನ್. ಕೋಟ್ಯಾನ್, ಉಪಕಾರ್ಯಾಧ್ಯಕ್ಷರಾದ ಪುಷ್ಪಾ$ ವಿ. ಶೆಟ್ಟಿ, ಶ್ಯಾಮಲಾ ಜಿ. ಪೂಜಾರಿ, ಯಮುನಾ ಆರ್. ಕೋಟ್ಯಾನ್, ಕಾರ್ಯದರ್ಶಿ ಶೀಲಾ ಎಂ. ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಭಾರತಿ ಎಸ್. ಕೋಟ್ಯಾನ್, ಪ್ರೇಮಾ ವಿ. ಪೂಜಾರಿ, ಜಯಶ್ರೀ ವೈ. ಪೂಜಾರಿ, ಕೋಶಾಧಿಕಾರಿ ವಿದ್ಯಾ ಬಿ. ಸನಿಲ್, ಜೊತೆ ಕೋಶಾಧಿಕಾರಿಗಳಾದ ಲತಾ ಜಿ. ಕುಂದರ್ ಮತ್ತು ಸ್ಮಿತಾ ಅಬು ಹಾಗೂ ಮಹಿಳಾ ವಿಭಾಗದ ಸಮಿತಿಯ ಎಲ್ಲಾ ಸದಸ್ಯರು ಸಹಕರಿಸಿದರು.