Advertisement
ಈ ರಥೋತ್ಸವವು ಶ್ರೀ ಶಾರದಾ ಪೀಠದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದೆ. ನೂರಾರು ವರ್ಷಗಳ ಇತಿಹಾಸವಿರುವ ಶ್ರೀ ದುರ್ಗಾಂಬಾ ರಥೋತ್ಸವಕ್ಕೆ ಸಹಸ್ರಾರು ಭಕ್ತಾದಿಗಳು ಗ್ರಾಮೀಣ ಪ್ರದೇಶದಿಂದ ಆಗಮಿಸುವುದು ವಿಶೇಷವಾಗಿದೆ. ಶಾರ್ವರಿ ಸಂವತ್ಸರದ ಪಾಲ್ಗುಣ ಶುಕ್ಲ ಪಕ್ಷ ಅಷ್ಟಮಿ ಮೃಗಶಿರ ನಕ್ಷತ್ರದಂದು ಆಗಮೋಕ್ತ ವಿಧಾನದಂತೆ ನಡೆಯುವ ಈ ಮಹಾರಥೋತ್ಸವಕ್ಕೆ ಬೆಳಗ್ಗೆಯಿಂದಲೇ ಸಹಸ್ರಾರು ಭಕ್ತರು ಆಗಮಿಸಿದ್ದರು.
Related Articles
Advertisement
ರಥೋತ್ಸವದಲ್ಲಿ ಆನೆ, ಅಶ್ವ, ಛತ್ರಚಾಮರ, ಮಕರ ತೋರಣ, ವಾದ್ಯಮೇಳಗಳು ಉತ್ಸವದ ಮೆರುಗನ್ನು ಹೆಚ್ಚಿಸಿತು. ಶ್ರೀಮಠದ ಅ ಧಿಕಾರಿಗಳಾದ ವಿ.ಆರ್. ಗೌರಿಶಂಕರ್, ಶ್ರೀಪಾದರಾವ್, ಶಿವಶಂಕರ ಭಟ್, ಗೋಪಾಲಕೃಷ್ಣ, ರಾಮಕೃಷ್ಣಯ್ಯ ಇದ್ದರು. ರಥೋತ್ಸವದ ಧಾರ್ಮಿಕ ವಿ ಧಿ- ವಿಧಾನಗಳು ಶ್ರೀಮಠದ ಪುರೋಹಿತರಾದ ಕೃಷ್ಣಭಟ್, ಶಿವಕುಮಾರ ಶರ್ಮ ಅವರ ನೇತೃತ್ವದಲ್ಲಿ ನಡೆಯಿತು.
ರಥೋತ್ಸವದ ಅಂಗವಾಗಿ ಶ್ರೀ ದುಗಾಂಬಾ ಸನ್ನಿ ಧಿಯಲ್ಲಿ ತಳಿರು ತೋರಣ, ವಿದ್ಯುದ್ದೀಪಾಲಂಕಾರ, ಬಾಳೆಕಂಬ, ರಂಗೋಲಿ ಹಾಕುವುದರ ಮೂಲಕ ಮೆರಗು ಹೆಚ್ಚಿತು. ¤ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಇದ್ದರು. ಜಾತ್ರೆಯ ಅಂಗವಾಗಿ ರಸ್ತೆಯ ಎರಡು ಬದಿಯಲ್ಲಿ ವಿವಿಧ ಅಂಗಡಿಗಳು ತೆರೆದಿದ್ದವು. ಸಹಸ್ರಾರು ಭಕ್ತಾದಿಗಳು ಮಧ್ಯಾಹ್ನದ ಭೋಜನ ಸ್ವೀಕರಿಸಿದರು. ರಥೋತ್ಸವದ ನಂತರ ಸಾಮಾನ್ಯ ಮಳೆಯಾಯಿತು.