ಮುಂಬಯಿ: ಮಂಗಳೂರಿನ ಕಟೀಲು ಅಜಾರುವಿನಲ್ಲಿ ಸಂಜೀವನಿ ಟ್ರಸ್ಟ್ ಮುಂಬಯಿ ನಿರ್ಮಿ ಸುತ್ತಿರುವ ದುರ್ಗಾ ಸಂಜೀವನಿ ಚಾರಿಟೇಬಲ್ ಹಾಸ್ಪಿಟಲ್‌ಗೆ ಫೆ. 19ರಂದು ಶಿಲಾನ್ಯಾಸ ನೆರವೇರಿಸಲಾಯಿತು.
ಶ್ರೀ ಕ್ಷೇತ್ರ ಕಟೀಲು ಇದರ ವಂಶಿಕ ವಿಶ್ವಸ್ತ, ಪ್ರಧಾನ ಆರ್ಚಕ ಕೆ. ವಾಸುದೇವ ಆಸ್ರಣ್ಣ, ಆರ್ಚಕರಾದ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಕೆ. ಅನಂತಪದ್ಮನಾಭ ಆಸ್ರಣ್ಣ, ಕೆ. ಹರಿನಾರಾಯಣ ಆಸ್ರಣ್ಣ ಉಪಸ್ಥಿತಿಯಲ್ಲಿ ವಿದ್ವಾನ್ ರಾಮಚಂದ್ರ ಉಪಾಧ್ಯಾಯ ಅವರು ಭೂವರಾಹ ಹೋಮ, ಶಿಲಾನ್ಯಾಸ ಪೂಜೆ ನೆರವೇರಿಸಿ ಅನುಗ್ರಹಿಸಿದರು. ಮಣಿಪಾಲ ವಿಶ್ವವಿದ್ಯಾಲಯದ ನಿರ್ವಹಣೆ ಹಾಗೂ ಶ್ರೀ ಕ್ಷೇತ್ರ ಕಟೀಲು ದುರ್ಗಾ ಪರಮೇಶ್ವರಿ ಮಂದಿರದ ಸಹಯೋಗದಲ್ಲಿ ನಿರ್ಮಾಣ ಗೊಳ್ಳಲಿರುವ ದುರ್ಗಾ ಸಂಜೀವನಿ ಚಾರಿಟೆಬಲ್ ಆಸ್ಪತ್ರೆ ಶಿಲಾನ್ಯಾಸ ಕಾರ್ಯಕ್ರಮವನ್ನು ಸಚಿವ ಬಿ. ರಮಾನಾಥ ರೈ ದೀಪ ಬೆಳಗಿಸಿ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಉಡುಪಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನದ ಶ್ರೀ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಶಾಸಕ, ಕೆ. ಅಭಯಚಂದ್ರ ಜೈನ್ ವಹಿಸಿದ್ದರು. ಶ್ರೀ ಕ್ಷೇತ್ರ ಕಟೀಲು ಇದರ ಸರ್ವ ಅರ್ಚಕರುಗಳ ಉಪಸ್ಥಿತಿಯಲ್ಲಿ ನಡೆದ ಸಭಾ ಕಾರ್ಯ ಕ್ರಮದಲ್ಲಿ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲು, ದ. ಕ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಟೀಲು ತಾ.ಪಂ.ಸದಸ್ಯ ಸುಕುಮಾರ್ ಸನಿಲ್, ಕಟೀಲು ಗ್ರಾ.ಪ.ಅಧ್ಯಕ್ಷೆ ಗೀತಾ ಪೂಜಾರಿ¤, ಕಟೀಲು ಗ್ರಾ.ಪ. ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಮಣಿಪಾಲ ವಿವಿ ಪೂರ್ವ ಉಪಕುಲಪತಿ ಡಾ| ಎಚ್. ಎಸ್. ಬಲ್ಲಾಳ್, ಮಣಿಪಾಲ ವಿವಿ ಪೂರ್ವ ಉಪಕುಲಪತಿ ಡಾ| ವಿ. ಸುರೇಂದ್ರ ಶೆಟ್ಟಿ, ಎಂಆರ್‌ಪಿಎಲ್ ಇದರ ಆಡಳಿತ ನಿರ್ದೇಶಕ ಹರಿಕುಮಾರ್, ಕೆಎಂಸಿ ಡಾ| ನಾರಾಯಣ ಸುಬ್ಬಯ್ಯ, ಸಂಜೀವನಿ ಟ್ರಸ್ಟ್ ಮುಂಬಯಿ ಇದರ ಆಡಳಿತ ಟ್ರಸ್ಟಿ ಡಾ| ಸುರೇಶ್ ಎಸ್.ರಾವ್ ಕಟೀಲು, ವಿಶ್ವಸ್ಥ ಸದಸ್ಯೆ ವಿಜಯಲಕ್ಷಿ¾à ಎಸ್.ರಾವ್, ಚಕ್ರವರ್ತಿ ಸೂಲಿಬೆಲೆ, ಸುಬ್ರಹ್ಮಣ್ಯ ಕುಸ್ನೂರು ಉಪಸ್ಥಿತರಿದ್ದರು.
ಸಂಜೀವನಿ ಟ್ರಸ್ಟ್ ಮುಂಬಯಿ ವಿಶ್ವಸ್ತ ಸದಸ್ಯರಾದ ಲಕ್ಷಿ¾àಶ ಜಿ. ಆಚಾರ್ಯ, ಡಾ| ಶ್ರುತಿ ಎಸ್.ರಾವ್, ಡಾ| ದೇವಿಪ್ರಸಾದ್ ರಾವ್, ಡಾ| ಪ್ರಶಾಂತ್ ರಾವ್, ತೋನ್ಸೆ ಬಿ.ಆರ್. ರಾವ್ ಕಲಿನಾ, ಐಕಳ ಹರೀಶ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ “ಹಾಸ್ಯಲಾಸ್ಯ’ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಅಲ್ಲದೆ ಚಕ್ರವರ್ತಿ ಸೂಲಿಬೆಲೆ ತಂಡವು ಜಾಗೋ ಭಾರತ್ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಪ್ರಾರಂಭದಲ್ಲಿ ಆ್ಯಕ್ವವಾಟರ್ ಎಟಿಎಂ ಸೇವೆಗೆ ಶ್ರೀಗಳು ಚಾಲನೆ ನೀಡಿದರು. ಅರುಣಾ ಪಿ. ರಾವ್ ಪ್ರಾರ್ಥನೆಗೈದರು. ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್.