Advertisement

ಧರ್ಮ, ಸಂಸ್ಕೃತಿಗಳ ಜಾಗೃತಿ ಅಗತ್ಯ: ವಿದ್ವಾನ್‌ ರಾಧಾಕೃಷ್ಣ ಭಟ್‌

07:46 PM Nov 10, 2020 | Suhan S |

ಮುಂಬಯಿ, ನ. 9: ಆಪತ್ತಿನ ಕಾಲದಲ್ಲಿ ಶ್ರೀರಕ್ಷೆ ಯಾಗಿ ನಿಲ್ಲುವಳು ಮಾತೃ ಸ್ವರೂಪಿಣಿ ಶ್ರೀದುರ್ಗಾ ದೇವಿ. ವಿಶ್ವದ ವೈಭವ ಹಾಗೂ ಅಗತ್ಯಗಳು ಎಲ್ಲವೂ ಆದಿಮಾಯೆಯ ಕೃಪೆಯಿಂದ ಸೃಷ್ಟಿಯಾಗಿದೆ.ದುಷ್ಟರ ನಿಗ್ರಹ ಹಾಗೂ ಶಿಷ್ಟರ ರಕ್ಷಣೆಗಾಗಿ ಸದಾ ಸಿದ್ಧಳಾಗಿರುವ ಮಾತೆಯ ಅನುಗ್ರಹ ತಮಗೆಲ್ಲ ಪ್ರಾಪ್ತಿಯಾಗಲಿ. ಆಕೆಯ ಆರಾಧನೆಯಲ್ಲಿ ಶ್ರದ್ಧಾಭಕ್ತಿ, ಸನ್ನಡೆಯ ಧಾರ್ಮಿಕತೆ ಇರಬೇಕು. ಇದರಿಂದ ನಮ್ಮ ಭಾದಕಗಳು ಪರಿಹಾರವಾಗುವುದು ಎಂದು ಕಳೆದ 27 ವರ್ಷಗಳಿಂದ ಶ್ರೀ ಚಂಡಿಕಾ ಯಾಗದ ಮೂಲಕ ಸನಾತ ಧರ್ಮದ ಮಹತ್ವವನ್ನು ಬೋಧಿಸುತ್ತಿರುವ ವಿದ್ವಾನ್‌ ರಾಧಾಕೃಷ್ಣ ಭಟ್‌ ತಿಳಿಸಿದರು.

Advertisement

ಅ. 30ರಂದು ಮೀರಾರೋಡ್‌ ಪೂರ್ವದ, ನ್ಯೂ ಪ್ಲೇಸಂಟ್‌ ಪಾರ್ಕ್‌ನ ಮೀರಾಧಾಮ್‌ ಸೊಸೈಟಿಯಲ್ಲಿರುವ ಶ್ರೀ ಶನೀಶ್ವರ ಸೇವಾ ಚಾರಿಟೆಬಲ್‌ ಟ್ರಸ್ಟ್‌ ಇದರ ಮಂದಿರದ ಆವರಣದಲ್ಲಿ ಸಾಮೂಹಿಕ ಶ್ರೀ ದುರ್ಗಾ ಸಮಸ್ಕಾರ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬದಲಾವಣೆಯಕಾಲ ಘಟ್ಟದಲ್ಲಿ ಇಂದು ಧರ್ಮ, ಸಂಸ್ಕೃತಿಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಅತ್ಯಗತ್ಯವಾಗಿದೆ. ಪರಸ್ಪರ ಸಹನೆ-ಸಹಕಾರದಿಂದ ಸಂಸ್ಕಾರ, ಸಂಪ್ರದಾಯವನ್ನು ಉಳಿಸುವ ಧ್ಯೇಯ ನಮ್ಮದಾಗಲಿ ಎಂದು ತಿಳಿಸಿ, ಭಕ್ತರಿಗೆ ಪ್ರಸಾದ ನೀಡಿ ಗೌರವಿಸಿದರು. ವೇ| ಮೂ| ಯತಿರಾಜ ಉಪಾಧ್ಯಾಯ ಮಾತನಾಡಿ, ವಿದ್ವಾನ್‌ ರಾಧಾಕೃಷ್ಣ ಭಟ್‌ ಅವರು

ಶ್ರೀಕೃಷ್ಣ ಮಧ್ವ ಸೇವಾ ಸಂಸ್ಥಾ ಮುಂಬಯಿ ಇದರ ಸ್ಥಾಪಕರು. ಮುಂಬಯಿ ನಗರದಲ್ಲಿ ಪ್ರಪ್ರಥಮವಾಗಿ ಮಧ್ವ ಜಯಂತಿಯನ್ನು ಆಚರಿಸಿ ಮಧ್ವ ತತ್ವ-ಸಿದ್ಧಾಂತವನ್ನು ಪಸರಿಸಿದರು. ಪಲಿಮಾರು ಶ್ರೀಗಳ ದಿವ್ಯ ಆಶೀರ್ವಾದ ಹಾಗೂ ಅನುಗ್ರಹದಿಂದ ಲೋಕ ಕಲ್ಯಾಣಕ್ಕಾಗಿ ಕೋವಿಡ್‌ ಸಮಯದಲ್ಲಿ 108 ಧನ್ವಂತರಿ ಹೋಮ ಮಾಡಿದ್ದಾರೆ. ಆಯುರ್ವೇದದ ಹರಿಕಾರ ಧನ್ವಂತರಿ ಆಗಿದೆ. ಇದು ಭಾರತದ ಮೊದಲ ವೈದ್ಯನೆಂಬ ನಂಬಿಕೆ ಇದೆ. ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಅದು ಸಫಲತೆ ಕಾಣಲು ಸಾಧ್ಯ ಎಂದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ರಾಘವೇಂದ್ರ ನಕ್ಷತ್ರಿ, ಶ್ರೀಶ ಉಡುಪ, ಪದ್ಮರಾಜ್‌ ಉಪಾಧ್ಯಾಯ, ಪ್ರದ್ಯುಮ್ನ ಭಟ್‌, ವಿಷ್ಣು ಪ್ರಸಾದ್‌ ಭಟ್, ಜಯಲಕ್ಷ್ಮೀ ಭಟ್‌, ಯೋಗಿತಾ ಭಟ್‌, ಭಾರತೀ ಉಡುಪ ಮೊದಲಾದವರು ಸಹಕರಿಸಿದರು.  ಕಲಾವಿದ ಬಾಬಾ ಪ್ರಸಾದ್‌ ಅರಸ, ವೀಣಾ ಶೆಟ್ಟಿ, ಶ್ರೀ ಶನೀಶ್ವರ ಸೇವಾ ಚಾರಿಟೆಬಲ್‌ ಟ್ರಸ್ಟ್ ನ ಗೌರವ ಅಧ್ಯಕ್ಷ ವಿನೋದ್‌ ವಘಾಸಿಯ, ಅಧ್ಯಕ್ಷೆ ವಿದ್ಯಾ ಅಶೋಕ್‌ ಕರ್ಕೇರ, ಉಪಾಧ್ಯಕ್ಷ ಗುಣಕಾಂತ ಶೆಟ್ಟಿ ಕರ್ಜೆ, ಜತೆ ಕಾರ್ಯದರ್ಶಿ ಜಯಕರ ಶೆಟ್ಟಿ ಮುದ್ರಾಡಿ, ಪದಾಧಿಕಾರಿಗಳಾದ ನಾರಾಯಣ ಶೆಟ್ಟಿ, ಸುಜಾತಾ ಜಿ. ಶೆಟ್ಟಿ, ಅಚ್ಯುತ ಟಿ. ಕೋಟ್ಯಾನ್‌, ಭಾರತಿ ಎ. ಅಂಚನ್‌, ಯಶೋಧಾ ಪೂಜಾರಿ, ಸುಂದರಿ ಕೋಟ್ಯಾನ್‌, ರಶಿಕಾ ಮೂಲ್ಯ, ರಾಧಾ ಕೋಟ್ಯಾನ್‌, ಕಸ್ತೂರಿ ಶೆಟ್ಟಿ, ಜಯಲಕ್ಷ್ಮೀ ಸುವರ್ಣ, ಉಷಾ ಶೆಟ್ಟಿಗಾರ್‌, ವಿಜಯಲಕ್ಷ್ಮೀ ಶೆಟ್ಟಿ, ಸುಜಾತಾ

ಶೆಟ್ಟಿ ಕಾಪು, ರಾಜೇಶ್‌ ಶೆಟ್ಟಿ ಕಾಪು, ಶುಭಲತಾ ಶೆಟ್ಟಿ, ಮಾಲಾ ಜೈನ್‌, ಆರತಿ, ಶೆಟ್ಟಿ, ಕಸ್ತೂರಿ ಶೆಟ್ಟಿ ಸಹಿತ ಪರಿಸರದ ಗಣ್ಯರು ಸಾಮಾಜಿಕ ಅಂತರದಲ್ಲಿ ಉಪಸ್ಥಿತರಿದ್ದರು. ಸದಾನಂದ ಪೂಜಾರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next