Advertisement
ಅಂತಾರಾಷ್ಟ್ರೀಯ ಕ್ರಿಮಿನಲ್ ಪೊಲೀಸ್ ಸಂಸ್ಥೆ “ಇಂಟರ್‌ಪೋಲ್’ ಈ ಕುರಿತಾಗಿ 194 ಸದಸ್ಯ ರಾಷ್ಟ್ರಗಳಿಗೆ “ಆರೆಂಜ್ ನೊಟೀಸ್’ ನೀಡಿ, ಎಚ್ಚರಿಸಿದೆ. “ಅಧಿಕೃತ ಲಸಿಕೆಗಳು ಮಾರು ಕಟ್ಟೆ ಪ್ರವೇಶಿಸುತ್ತಿದ್ದಂತೆಯೇ ನಕಲಿ ಲಸಿಕೆ, ಕಳ್ಳತನ, ಅಕ್ರಮ ಜಾಹೀರಾತುಗಳ ಹಾವಳಿ ಯೂ ಹೆಚ್ಚಾಗಲಿದೆ’ ಎಂದು ಎಚ್ಚರಿಕೆ ನೀಡಿದೆ.
Related Articles
Advertisement
3,000 ವೆಬ್‌ಸೈಟ್ ಸಕ್ರಿಯ!ಆನ್‌ಲೈನ್ ಲಸಿಕೆ ಮಾರಾಟ ಸಂಸ್ಥೆಗಳ ಜತೆ ಕೈಜೋಡಿಸಿ, ಜಾಗತಿಕವಾಗಿ ನಕಲಿ ಲಸಿಕೆ ಮಾರುತ್ತಿರುವ 3 ಸಾವಿರ ವೆಬ್‌ಸೈಟ್‌ಗಳ ಬಗ್ಗೆಯೂ “ಇಂಟರ್‌ಪೋಲ್’ ಎಚ್ಚರಿಸಿದೆ. ನಕಲಿ ಲಸಿಕೆ, ಕಳಪೆ ಮೆಡಿಕಲ್ ಡಿವೈಸ್ ಮಾರುವ ಈ ವೆಬ್‌ಸೈಟ್‌ಗಳಿಂದ ಗ್ರಾಹಕರಿಗೆ ಎದುರಾದ 1,700ಕ್ಕೂ ಅಧಿಕ ಸೈಬರ್ ಬೆದರಿಕೆ ಗಳನ್ನೂ ಸಂಸ್ಥೆ ಗಮನಿಸಿದೆ. ಫಿಶಿಂಗ್ ಕರಿನೆರಳು
ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಲಸಿಕೆ ಪೂರೈಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೈಗೊಂಡಿರುವ ಯೋಜನೆಗಳ ಮೇಲೆ ಸೈಬರ್ ಕಳ್ಳರು “ಫಿಶಿಂಗ್ ಪಿತೂರಿ’ ರೂಪಿಸಿದ್ದಾರೆ ಎಂದು ಐಬಿಎಂ ಜಾಗತಿಕ ಗುಪ್ತಚರ ದಳ ಎಚ್ಚರಿಸಿದೆ. “ಸೆಪ್ಟಂಬರ್‌ನಿಂದಲೇ ಈ ದುಷ್ಕೃತ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಇದರ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ’ ಎಂದು ಐಬಿಎಂನ ಬ್ಲಾಗ್‌ಪೋಸ್ಟ್ ತಿಳಿಸಿದೆ. ಜರ್ಮನಿ, ಇಟಲಿ, ದ. ಕೊರಿಯಾ, ತೈವಾನ್‌ನಂಥ ರಾಷ್ಟ್ರಗಳನ್ನು ಸೈಬರ್ ಹ್ಯಾಕರ್ಸ್ ಟಾರ್ಗೆಟ್ ಮಾಡಿದ್ದಾರೆ. “ಲಸಿಕೆ ಸರಬರಾಜಿನ ಮುಖ್ಯ ಹೊಣೆ ನಿರ್ವಹಿಸುತ್ತಿರುವ ಚೀನದ ಹಯರ್ ಬಯೋಮೆಡಿಕಲ್ ಸಂಸ್ಥೆಯ ಎಕ್ಸಿಕ್ಯೂಟಿವ್ ಒಬ್ಬರ ಹೆಸರಿನಲ್ಲಿ ಕಳುಹಿಸಲಾದ ದುರುದ್ದೇಶಪೂರಿತ ಇಮೇಲ್ ಒಂದು ಕೊವ್ಯಾಕ್ಸ್‌ನ ಗಾವಿ ವ್ಯಾಕ್ಸಿನ್ ಅಲೈಯನ್ಸ್, ಡಬ್ಲ್ಯುಎಚ್‌ಒ, ವಿಶ್ವಸಂಸ್ಥೆಯ ಏಜೆನ್ಸಿಗಳಿಗೆ ತಲುಪಿದೆ’ ಎಂದು ತಿಳಿದುಬಂದಿದೆ.