Advertisement

ನಕಲಿ ಆರೋಗ್ಯ ಕಾರ್ಡ್‌ ವಿತರಣೆ

10:56 AM Apr 29, 2019 | keerthan |

ಮಂಡ್ಯ: ಜಿಲ್ಲೆಯ ವಿವಿಧೆಡೆ ನಕಲಿ ಆರೋಗ್ಯ ಕಾರ್ಡ್‌ ವಿತರಿಸುವ ದಂಧೆ ದಿನೇದಿನೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಮಂಡ್ಯ ತಾಲೂಕಿನ ಶಿವಳ್ಳಿಯಲ್ಲಿ ನಕಲಿ ಆರೋಗ್ಯ ಕಾರ್ಡ್‌ ವಿತರಿಸುವ ಪ್ರಕರಣವೊಂದು ಬೆಳಕಿಗೆ ಬಂದ ಬೆನ್ನಲ್ಲೇ ಭಾನುವಾರ ತಾಲೂಕಿನ ಕಮ್ಮನಾಯಕಹಳ್ಳಿಯಲ್ಲೂ ನಕಲಿ ಆರೋಗ್ಯ ಕಾರ್ಡ್‌ ವಿತರಣೆ ಮಾಡಲು ನಕಲಿ ಏಜೆನ್ಸಿಗಳ ತಂಡವೊಂದು ಮುಂದಾಗಿರುವುದು ಪತ್ತೆಯಾಗಿದೆ.

Advertisement

ನಕಲಿ ಕಾರ್ಡ್‌ ವಿತರಣೆ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ ಗ್ರಾಮದ ವ್ಯಕ್ತಿಯೊಬ್ಬರಿಗೆ ನಕಲಿ ಏಜೆನ್ಸಿಯ ಏಜೆಂಟರು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಗಮನಕ್ಕೂ ತರಲಾಗಿದೆ. ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ನಕಲಿ ಏಜೆನ್ಸಿಯವರು ಗ್ರಾಮದಿಂದ ಕಾಲ್ಕಿತ್ತಿದ್ದಾರೆ.

ಘಟನೆ ವಿವಿರ: ಮಂಡ್ಯ ತಾಲೂಕಿನ ಕಮ್ಮನಾಯಕನಹಳ್ಳಿಯಲ್ಲಿ ಭಾನುವಾರ ಸಿಎಸ್‌ಸಿ (ಕನ್ಷ್ಯೊಮರ್‌ ಸರ್ವೀಸ್‌ ಸೆಂಟರ್‌) ಹೆಸರಿನ ಏಜೆನ್ಸಿಯವರೆಂದು ಹೇಳಿಕೊಂಡ ನಕಲಿ ಏಜೆಂಟರು ಗ್ರಾಮಸ್ಥರಿಗೆ ಆರೋಗ್ಯ ಕಾರ್ಡ್‌ ನೀಡುವುದಾಗಿ ಅವರಿಂದ ವಿವರ ಪಡೆದುಕೊಂಡು ಪ್ರತಿ ಕಾರ್ಡ್‌ಗೆ 200 ರೂ. ಪಡೆಯುತ್ತಿದ್ದರು.

ಇದನ್ನು ಗಮನಿಸಿದ ಯೋಗೇಶ್‌, ನೀವು ಯಾವ ಏಜೆನ್ಸಿಯವರು, ಈ ರೀತಿ ಕಾರ್ಡ್‌ ಮಾಡುವುದಕ್ಕೆ ನಿಮಗೆ ಅಧಿಕಾರ ನೀಡಿರುವವರು ಯಾರು? ಪ್ರತಿ ಕಾರ್ಡ್‌ ಕನಿಷ್ಠ 10 ರೂ.ಗಳಿಂದ 35 ರೂ.ವರೆಗೆ ಮಾತ್ರ ಪಡೆದುಕೊಳ್ಳಬೇಕು. ನೀವು ಅಕ್ರಮವಾಗಿ 200 ರೂ. ಪಡೆದುಕೊಳ್ಳುತ್ತಿದ್ದೀರಿ ಏಕೆ? ನಿಮಗೆ ಯಾರು ಪರವಾನಗಿ ನೀಡಿದ್ದಾರೆಂಬ ಅನುಮತಿ ಪತ್ರ ತೋರಿಸಿ ಎಂದು ಪ್ರಶ್ನಿಸಿದ್ದಾರೆ.

ಇದರಿಂದ ತಬ್ಬಿಬ್ಟಾದ ನಕಲಿ ಏಜೆನ್ಸಿ ತಂಡ ನಮಗೆ ಸಿಎಸ್‌ಸಿ ಕಡೆಯಿಂದ ಬಂದಿದ್ದೇವೆ. ನಮಗೆ ಸೇವಾ ಶುಲ್ಕವನ್ನೆಲ್ಲಾ ಸೇರಿಸಿ 200 ರೂ. ಪಡೆಯುತ್ತಿದ್ದೇವೆ. ಇದನ್ನೆಲ್ಲಾ ಪ್ರಶ್ನಿಸಲು ನೀವು ಯಾರು ಎಂದು ಯೋಗೇಶ್‌ ಮೇಲೆ ಮುಗಿಬಿದ್ದು, ಆರೋಗ್ಯ ಕಾರ್ಡ್‌ ಪ್ರಕ್ರಿಯೆ ಮುಂದು ವರಿಸಿದರು.

Advertisement

ಡಿಹೆಚ್ಒಗೆ ದೂರು: ಇದಕ್ಕೆ ಬೆದರದ ಯೋಗೇಶ್‌, ನೋಡಿ, ನೀವು ಈ ರೀತಿ ಮಾಡುತ್ತಿರುವುದು ಸರಿಯಲ್ಲ. ನೀವೆಲ್ಲಾ ಸೇರಿಕೊಂಡು ಜನÃ‌ನ್ನು ವಂಚಿಸುತ್ತಿದ್ದೀರಿ. ನಾನು ಈ ಬಗ್ಗೆ ದೂರು ಕೊಡುತ್ತೇನೆ ಎಂದಾಗ ನಕಲಿ ಏಜೆನ್ಸಿಯವರು ಇವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಕೊನೆಗೂ ಯೋಗೇಶ್‌ ಈ ವಿಷಯವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಪಿ.ಮಂಚೇಗೌಡರ ಗಮನಕ್ಕೆ ತಂದರು. ಆಗ ಅವರು ಕೂಡಲೇ ಪೊಲೀಸ್‌ಗೆ ದೂರು ಕೊಡಿ. ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ. ನಾವು ಪ್ರತಿ ಕಾರ್ಡ್‌ಗೆ 200 ರೂ. ಪಡೆಯುವಂತೆ ಯಾರಿಗೂ ಅನುಮತಿ ನೀಡಿಲ್ಲ ಎಂದು ಹೇಳಿದರು.

ಕೊನೆಗೆ ಏಜೆಂಟರು ಅಲ್ಲಿಂದ ಹೋದವರು ಮತ್ತಷ್ಟು ಜನರನ್ನು ಕರೆತಂದು ಯೋಗೇಶ್‌ ನಿವಾಸದ ಎದುರು ಗಲಾಟೆ ಮಾಡಲು ಮುಂದಾದರು. ದೂರವಾಣಿ ಮೂಲಕ ಕರೆ ಮಾಡಿದ ವ್ಯಕ್ತಿಯೊಬ್ಬರು ನಾನು ಚೀರನಹಳ್ಳಿ ಶಂಕರ್‌ ಬಾವಮೈದ. ಇದನ್ನೆಲ್ಲಾ ಕೇಳ್ಳೋಕೆ ನೀನ್ಯಾರು ಎಂದೆಲ್ಲಾ ಬೆದರಿಕೆ ಹಾಕಿದ್ದಾರೆ. ಕೊನೆಗೆ ಎಲ್ಲರೂ ಅಲ್ಲಿಂದ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next