ಅಪ್ಪ-ಮಗನ ಕಾರುಬಾರು ಶುರುವಾಗಿದೆ. ಹೌದು, “ದುನಿಯಾ’ ವಿಜಯ್ ಮತ್ತು ಅವರ ಪುತ್ರ ಸಾಮ್ರಾಟ್ “ಕುಸ್ತಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ
ಸುದ್ದಿ ಎಲ್ಲರಿಗೂ ಗೊತ್ತು. “ಕುಸ್ತಿ’ಗಾಗಿ ಸಾಮ್ರಾಟ್, ಪಕ್ಕಾ ಕುಸ್ತಿ ಪಟುವಾಗಿ ತಯಾರಿ ಪಡೆಯುತ್ತಿರುವ ಫೋಟೋ ಕೂಡ ಎಲ್ಲೆಡೆ ಭರ್ಜರಿ ಸದ್ದು ಮಾಡಿತ್ತು. ಈಗ ಹೊಸ ಸುದ್ದಿಯೆಂದರೆ, “ಕುಸ್ತಿ’ಗಾಗಿ ಅಪ್ಪ-ಮಗ ಇಬ್ಬರೂ ತೊಡೆ ತಟ್ಟಿ ಸೆಡ್ಡು ಹೊಡೆಯೋ ಮೂಲಕ ಸಜ್ಜಾಗಿದ್ದಾರೆ. ದಿನವೊಂದಕ್ಕೆ ಇಬ್ಬರೂ ನಾಲ್ಕೈದು ಗಂಟೆಗಳ ಕಾಲ ಕಸರತ್ತು ನಡೆಸುತ್ತಿದ್ದಾರೆ ಅನ್ನೋದೇ ವಿಶೇಷ.
Advertisement
“ದುನಿಯಾ’ ವಿಜಯ್ ಅಂದಾಕ್ಷಣ ನೆನಪಾಗೋದೇ, ಕಟ್ಟುಮಸ್ತಾದ ದೇಹ. ಅವರು ತಮ್ಮ ದೇಹವನ್ನು ಹುರಿಗೊಳಿಸುವಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಅವರಂತೆಯೇ ಅವರ ಪುತ್ರ ಸಾಮ್ರಾಟ್ ಕೂಡ ಸಿಕ್ಕಾಪಟ್ಟೆ ವಕೌìಟ್ ಮಾಡುತ್ತಿದ್ದಾನೆ ಅನ್ನೋದು ಹೊಸ ಸುದ್ದಿ. “ಕುಸ್ತಿ’ ಚಿತ್ರ ನೋಡಿದವರಿಗೆ, ಅಪ್ಪ-ಮಗನ ಸಾಮರ್ಥ್ಯ ಎಂಥದ್ದು ಎಂಬುದು ಗೊತ್ತಾಗಬೇಕಾದರೆ, ಸಿಕ್ಕಾಪಟ್ಟೆ ಕಸರತ್ತು ನಡೆಸಬೇಕು ಎಂಬ ಕಾರಣಕ್ಕೆ, ದುನಿಯಾ ವಿಜಯ್ ದಿನವೊಂದಕ್ಕೆ ಐದು ತಾಸು ವಕೌìಟ್ ಮಾಡಿದರೆ, ಅವರ ಪುತ್ರ ಸಾಮ್ರಾಟ್ ಕೂಡ ಅಪ್ಪನಿಗಿಂತ ನಾನೇನು ಕಮ್ಮಿ ಎಂಬಂತೆ ದಿನಕ್ಕೆ ನಾಲ್ಕು ತಾಸು ವಕೌìಟ್ ಮಾಡುತ್ತಿದ್ದಾನೆ. “ಕುಸ್ತಿ’ಗೋಸ್ಕರ ಪಕ್ಕಾ ಪೈಲ್ವಾನ್‌ಗಳಂತೆ ರೆಡಿಯಾಗಬೇಕೆಂಬುದು ವಿಜಯ್ ಆಸೆ. ಅದಕ್ಕಾಗಿಯೇ, ಯಾವ ಚಿತ್ರವನ್ನೂ ಒಪ್ಪಿಕೊಳ್ಳದೆ, ಬರೀ “ಕುಸ್ತಿ’ಗಾಗಿಯೇ ಬೆಳಗ್ಗೆ, ಸಂಜೆ ತಯಾರಿ ನಡೆಸುತ್ತಿದ್ದಾರೆ.
ಈಗಾಗಲೇ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ತರಬೇತಿ ಕೊಡುತ್ತಿದ್ದಾರಂತೆ. ವಿಜಯ್ ಅವರೂ ಕೂಡ “ಕುಸ್ತಿ’ಯ ಪಟ್ಟುಗಳನ್ನು ಹೇಗೆಲ್ಲಾ ಹಿಡಿಯಬೇಕೆಂಬ ಬಗ್ಗೆಯೂ ಗಂಭೀರವಾಗಿ ಅಭ್ಯಾಸ ಮಾಡುತ್ತಿದ್ದಾರಂತೆ. ಒಟ್ಟು ಮೂವರು ಪ್ರಸಿದ್ಧ ಕುಸ್ತಿ ಪಟುಗಳಿಂದ ಅಪ್ಪ-ಮಗ ತರಬೇತಿ ಪಡೆಯುತ್ತಿದ್ದಾರೆ. ಮಗನ ಶಿಸ್ತು, ಶ್ರದ್ಧೆ ಬಗ್ಗೆ ಮಾತನಾಡುವ ದುನಿಯಾ ವಿಜಯ್, “ಅವನಲ್ಲಿ ಕಲೆ ತುಂಬಿಕೊಂಡಿದೆ. ಹೇಳಿದ್ದನ್ನು ಶ್ರದ್ಧೆಯಿಂದ ಮಾಡುತ್ತಾನೆ. ಹುಮ್ಮಸ್ಸಿದೆ, ಉತ್ಸಾಹವೂ ಇದೆ. ಅವನ ಶ್ರದ್ಧೆ ಗಮನಿಸುತ್ತಿದ್ದರೆ, ಮುಂದೊಂದು ದಿನ, ಬಹುಶಃ ನನಗೇ ಕಾಂಪಿಟೇಷನ್ ಕೊಡ್ತಾನೇನೋ ಎನಿಸುತ್ತದೆ. ಅಷ್ಟರಮಟ್ಟಿಗೆ ಶ್ರದ್ಧೆಯಿಂದ ಪಾತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾನೆ’ ಎನ್ನುತ್ತಾರೆ ದುನಿಯಾ ವಿಜಯ್. ು¾ ಮಕ್ಕಳನ್ನು ರಜೆಯ ಮಜ ಅನುಭವಿಸಲು ಎಲ್ಲೆಡೆ ಕರೆದೊಯ್ಯುತ್ತಾರೆ. ಆದರೆ, ದುನಿಯಾ ವಿಜಯ್ ಮಾತ್ರ, ಈ ಬೇಸಿಗೆ ರಜೆಯಲ್ಲಿ ಸಾಮ್ರಾಟ್ ಗೆ ಎಲ್ಲಿಗೂ ಕಳುಹಿಸಿಲ್ಲವಂತೆ. ಹೆಚ್ಚು “ರಜೆಯ ಮಜ ಅನುಭವಿಸಲು ಬಿಟ್ಟಿಲ್ಲ. ಕಾರಣ, ಸಾಮ್ರಾಟ್‌ನನ್ನು “ಕುಸ್ತಿ’ ಪಾತ್ರಕ್ಕೆ ಅಣಿಗೊಳಿಸಬೇಕಾದ ಹಿನ್ನೆಲೆಯಲ್ಲಿ ಒಬ್ಬ ಕುಸ್ತಿಪಟುವಾಗಿ ಕಾಣಲು ಏನೆಲ್ಲಾ ಬೇಕೋ ಅದರ ತಯಾರಿ ಮಾಡಿಕೋ ಅಂತ, ದಿನ ನಿತ್ಯ ವಕೌìಟ್ ಬಿಟ್ಟರೆ, ಕುಸ್ತಿ ಪಟ್ಟುಗಳ ಬಗ್ಗೆ ತಿಳಿದುಕೊಳ್ಳುವುದನ್ನು ಬಿಟ್ಟರೆ, ಬೇರೆ ಕಡೆ ಗಮನಹರಿಸಲು ಬಿಟ್ಟಿಲ್ಲವಂತೆ. ಆ ಕುರಿತು ಹೇಳಿಕೊಳ್ಳುವ ವಿಜಿ, “ಕುಸ್ತಿ’ ನನ್ನ ಬಹುನಿರೀಕ್ಷೆಯ ಚಿತ್ರ. ನಾನೇ ಬರೆದ ಕಥೆ. ಒಂದು ತಂಡದ ಜೊತೆಗೆ ಕುಳಿತು ಚಿತ್ರಕಥೆಯನ್ನೂ ಮಾಡಲಾಗುತ್ತಿದೆ. ಹೀಗಾಗಿ ಸಾಮ್ರಾಟ್ ನನ್ನ ಆಸೆಗೆ ಒತ್ತಾಸೆಯಾಗಿ ಕೆಲಸ ಮಾಡುತ್ತಿದ್ದಾನೆ. ಮೊದಲ ಸಲ ತೆರೆಯ ಮೇಲೆ ಮಗನನ್ನು ತೋರಿಸುತ್ತಿರುವುದರಿಂದ ನಿರೀಕ್ಷೆಯೂ ಇರುತ್ತೆ. ಅದು ಸುಳ್ಳಾಗಬಾರದು. ಅಷ್ಟರಮಟ್ಟಿಗೆ ತಯಾರಿ ಮಾಡುತ್ತಿರುವುದಾಗಿ ಹೇಳುತ್ತಾರೆ ದುನಿಯಾ ವಿಜಯ್.
Related Articles
Advertisement
ವಿಭ