Advertisement

ಏ.18ಕ್ಕೆ ವಿಜಯ್ ನಿರ್ದೇಶನದ ‘ಭೀಮ’ ಮುಹೂರ್ತ

02:31 PM Apr 09, 2022 | Team Udayavani |

“ಸಲಗ’ ಚಿತ್ರದ ನಂತರ “ದುನಿಯಾ’ ವಿಜಯ್‌ ನಿರ್ದೇಶಿಸುತ್ತಿರುವ ಹೊಸ ಚಿತ್ರದ “ಭೀಮ’ದ ಟೈಟಲ್‌ ಪೋಸ್ಟರ್‌ ಇತ್ತೀಚೆಗೆ ಬಿಡುಗಡೆಯಾಗಿ, ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು. ಈಗ ಈ ಸಿನಿಮಾ ಸೆಟ್ಟೇರಲು ಅಣಿಯಾಗಿದೆ.

Advertisement

ಏ.18ರಂದು ಈ ಚಿತ್ರದ ಮುಹೂರ್ತ ನಡೆಯಲಿದೆ. ಈ ಹಿಂದೆ “ಸಲಗ’ ಚಿತ್ರದ ಮುಹೂರ್ತ ನಡೆದಿದ್ದ ಬಂಡೆ ಮಾಕಾಳಿ ದೇವಸ್ಥಾನದಲ್ಲೇ “ಭೀಮ’ ಚಿತ್ರದ ಮುಹೂರ್ತವೂ ನಡೆಯಲಿದೆ.

ಇನ್ನು, “ಭೀಮ’ ಆರಂಭದಲ್ಲೇ ಆಡಿಯೋ ರೈಟ್ಸ್‌ ಮೂಲಕ ಸದ್ದು ಮಾಡಿದೆ. ಈಗಾಗಲೇ ಚಿತ್ರದ ಆಡಿಯೋ ರೈಟ್ಸ್‌ ಆನಂದ್‌ ಆಡಿಯೋಗೆ ದುಬಾರಿ ಬೆಲೆಗೆ ಮಾರಾಟವಾಗಿದೆ. ಅದಕ್ಕೆ ಕಾರಣ ಮತ್ತೂಮ್ಮೆ ಜೊತೆಯಾಗುತ್ತಿರುವ “ಸಲಗ’ ಜೋಡಿ. ವಿಜಯ್‌ ನಿರ್ದೇಶನದ “ಸಲಗ’ ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ ನೀಡಿದ್ದರು. ಆ ಚಿತ್ರದ ಹಾಡುಗಳು ಹಿಟ್‌ ಆಗುವ ಮೂಲಕ ಈಗ “ಭೀಮ’ ಚಿತ್ರದ ಹಾಡುಗಳ ಮೇಲೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ:ಕಪಾಳಮೋಕ್ಷ ಘಟನೆ: ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸದಂತೆ ಸ್ಮಿತ್ ಗೆ 10 ವರ್ಷ ನಿಷೇಧ

ಈ ಚಿತ್ರವನ್ನು ಕೃಷ್ಣ ಸಾರ್ಥಕ್‌ ಹಾಗೂ ವಿತರಕ ಜಗದೀಶ್‌ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ವಿಜಯ್‌ ಬಾಲಕೃಷ್ಣ ನಟನೆಯ ತೆಲುಗು ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಈ ಚಿತ್ರದಲ್ಲಿ ವಿಜಯ್‌ ವಿಲನ್‌ ಆಗಿ ನಟಿಸಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ವಿಜಯ್‌ ಅವರ ಗೆಟಪ್‌ ರಿವೀಲ್‌ ಮಾಡಿತ್ತು

Advertisement
Advertisement

Udayavani is now on Telegram. Click here to join our channel and stay updated with the latest news.

Next