Advertisement
ಅಂದಹಾಗೆ, “ದುನಿಯಾ 2′ ಚಿತ್ರವನ್ನು ಹರಿ ಎನ್ನುವವರು ಬರೆದು, ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ಚಿತ್ರ. ಈ ಚಿತ್ರದ ಮೂಲಕ ಅವರು ಕತ್ತಲೆ ದುನಿಯಾವನ್ನು ಎಕ್ಸ್ ಪೋಸ್ ಮಾಡುವುದಕ್ಕೆ ಹೊರಟಿದ್ದಾರಂತೆ. “ಚಿತ್ರದ ಶೇ 90ರಷ್ಟು ಭಾಗವನ್ನು ಕತ್ತಲೆಯಲ್ಲೇ ಚಿತ್ರೀಕರಣ ಮಾಡಿದ್ದೇವೆ. ರಾತ್ರಿ 9ರ ನಂತರದ ಮೆಜೆಸ್ಟಿಕ್ ಜೀವನ ಹೇಗಿರುತ್ತದೆ ಎಂದು ತೋರಿಸುವುದಕ್ಕೆ ಹೊರಟಿದ್ದೇವೆ. ಇಲ್ಲಿ ಹೀರೋ ಪಕ್ಕಾ ಲೋಕಲ್ ಹುಡುಗ. ಟ್ರಾವಲ್ಸ್‌ನಲ್ಲಿ ಕೆಲಸ ಮಾಡುವ ಹುಡುಗ. ಅವನ ಜೀವನದಲ್ಲಿ ಏನೇನು ಆಗುತ್ತದೆ ಎಂಬುದು ಚಿತ್ರದ ಕಥೆ’ ಎಂದು ಹೇಳಿದರು ಹರಿ. ಈ ಚಿತ್ರದಿಂದ ರಾತ್ರಿ ಎದ್ದಿರೋದನ್ನು ಕಲಿತರಂತೆ ಯೋಗಿ. “ರಾತ್ರಿ ಹೊತ್ತೇ ಚಿತ್ರೀಕರಣವಾಗುತ್ತಿದ್ದರಿಂದ, ರಾತ್ರಿ ಎದ್ದಿರೋದನ್ನು ಕಲಿತರಂತೆ ಯೋಗಿ. ಇಲ್ಲೊಬ್ಬ ಸಾಮಾನು ಹುಡುಗನ ಪಾತ್ರದಲ್ಲಿಕಾಣಿಸಿಕೊಂಡಿದ್ದಾರಂತೆ. ಕೆಲಸದ ವಿಷಯದಲ್ಲಿ ಹರಿ ತುಂಬಾ ಗಟ್ಟಿ. ಇದೇ ತರಹ ಬರಬೇಕು ಎಂದು ಕಷ್ಟಪಡುತ್ತಾರೆ. ಅವರು ಸಂಭಾಷಣೆ ಹೇಳಿಕೊಡುತ್ತಿದ್ದುದೇ ಗೊತ್ತಾಗುತ್ತಿರಲಿಲ್ಲ. ಕೊನೆಗೆ ಡೈಲಾಗ್ ಶೀಟ್ ಕೊಡಿ ಎಂದು ಕೇಳಿ ನಾನೇ ಓದಿಕೊಳ್ಳುತ್ತಿದ್ದೆ’ ಎಂದರು ಯೋಗಿ. ಇನ್ನು ಸಿಹಿಕಹಿ ಚಂದ್ರು ಮತ್ತು ಗೀತಾ ಅವರ ಮಗಳು ಹಿತ, ಈ ಹಿಂದೆ ಯೋಗಿ ಜೊತೆಗೆ “ಸ್ನೇಕ್
ನಾಗ’ ಎಂಬ ಚಿತ್ರದಲ್ಲಿ ನಟಿಸಿದ್ದರು. ಆದರೆ, ಚಿತ್ರ ಬಿಡುಗಡೆಯಾಗಲಿಲ್ಲ. ಆ ನಂತರ ಮತ್ತೆ ಈ ಚಿತ್ರದಲ್ಲಿ ಯೋಗಿ ಜೊತೆಗೆ ನಟಿಸುತ್ತಿದ್ದಾರೆ. “ಬಹಳ ಗಂಭೀರವಾದ ಪಾತ್ರ. ನಗುವಿಲ್ಲ. ಅವಳದ್ದೇ ದುನಿಯಾದಲ್ಲಿ ಬದುಕುತ್ತಿರುತ್ತಾಳೆ. ಗಾರ್ಮೆಂಟ್ ಹುಡುಗಿಯ ಪಾತ್ರ ನನ್ನದು’ ಎಂಬಂತಹ ವಿವರಗಳನ್ನು ಕೊಟ್ಟರು ಅವರು. ಇನ್ನು ಅಂದು ಸಂಗೀತ ನಿರ್ದೇಶಕ ಬಿ.ಜೆ. ಭರತ್, ವಿ.
ಮನೋಹರ್, ಸತ್ಯ ಹೆಗಡೆ, ಅಂಬುಜಾ ಸಿದಟಛಿರಾಜು, ಎ.ಟಿ. ಲೋಕೇಶ್, “ಕಡ್ಡಿಪುಡಿ’ ಚಂದ್ರು, “ಸಿಂಪಲ್’ ಸುನಿ ಸೇರಿದಂತೆ ಹಲವರು ಇದ್ದರು.