Advertisement

ಸಾಲಿಗ್ರಾಮ ಪ.ಪಂ.: ಬಗೆಹರಿಯದ ಕಸ ವಿಲೇವಾರಿ ಸಮಸ್ಯೆ

01:55 AM Dec 05, 2018 | Karthik A |

ಕೋಟ: ಸಾಲಿಗ್ರಾಮ ಪ.ಪಂ.ನಲ್ಲಿ ತ್ಯಾಜ್ಯ ವಿಲೇವಾರಿ ಅತೀ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಸೆ. 18ರಿಂದ ಸ್ಥಳೀಯಾಡಳಿತ ಹಸಿ ಕಸ ಸಂಗ್ರಹಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಇದರಿಂದಾಗಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದ್ದು, ಪ್ರತಿ ರಸ್ತೆಯಲ್ಲೂ ರಾಶಿ-ರಾಶಿ ಕಸ ಕಣ್ಣಿಗೆ ರಾಚುತ್ತಿದೆ.

Advertisement

ಎಲ್ಲೆಲ್ಲೂ ಕಸದ ರಾಶಿ
ಕಸ ಸ್ವೀಕರಿಸುವುದನ್ನು ದಿಢೀರ್‌ ಸ್ಥಗಿತಗೊಳಿಸಿದ  ಮೇಲೆ ಜನರು ರಸ್ತೆ ಬದಿಗೆ ಕಸ ತಂದು ಎಸೆಯತೊಡಗಿದ್ದಾರೆ. ಇದರ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಸಾಲಿಗ್ರಾಮ-ಪಾರಂಪಳ್ಳಿ ರಸ್ತೆ, ಕಾರ್ಕಡ-ಕಾವಡಿ ರಸ್ತೆ, ಪಡುಕರೆ ರಸ್ತೆ,  ಕೋಟ-ಬನ್ನಾಡಿ ರಸ್ತೆ ಹೀಗೆ ಪ್ರಮುಖ ರಸ್ತೆಗಳ ಇಕ್ಕೆಲ್ಲದಲ್ಲಿ ಕಸದ ರಾಶಿ, ಕೊಳೆತ ತ್ಯಾಜ್ಯ ಸಂಗ್ರಹವಾಗಿದ್ದು, ವಾತಾವರಣ ಸಂಪೂರ್ಣ ಹಾಳಾಗಿದೆ.


ಬಿಗಡಾಯಿಸಿದೆ ಸಮಸ್ಯೆ

ಪ.ಪಂ. ವ್ಯಾಪ್ತಿಯ 16 ವಾರ್ಡ್‌ಗಳ  ಸುಮಾರು 1500 ಮನೆ ಹಾಗೂ 5 ವಸತಿ ಸಂಕಿರ್ಣಗಳು, 10ಕ್ಕೂ ಹೆಚ್ಚು ಹೋಟೆಲ್‌, ತರಕಾರಿ ಮಾರುಕಟ್ಟೆ, ನಾಲ್ಕೈದು ಕಲ್ಯಾಣ ಮಂಟಪ ಮುಂತಾದ ಕಡೆಗಳಿಂದ ಪ್ರತಿದಿನ ಸುಮಾರು 4ಟನ್‌ ಕಸ ಸಂಗ್ರಹವಾಗುತ್ತದೆ. ಹೀಗಾಗಿ ಈ ಕಸವನ್ನು ವಿಲೇವಾರಿ ಮಾಡುವುದು ಜನರಿಗೆ ಸಮಸ್ಯೆಯಾಗಿದೆ. ಕಸ ಸ್ವೀಕರಣೆ ಸ್ಥಗಿತಗೊಳಿಸುವ ಸಂದರ್ಭ ಹಸಿಕಸ ಮನೆಯಲ್ಲೇ ಕಾಂಪೋಸ್ಟ್‌ ಮುಂತಾದ ವಿಧಾನದ ಮೂಲಕ ವಿಲೇವಾರಿ ಮಾಡುವಂತೆ ಪಟ್ಟಣ ಪಂಚಾಯತ್‌ ಸಲಹೆ ನೀಡಿತ್ತು. ಆದರೆ ಯಾರೂ ಕೂಡ ಈ ವಿಧಾನವನ್ನು ಬಳಸಿಕೊಂಡಿಲ್ಲ.

ಪರ್ಯಾಯ ದಾರಿಯೇನು?
ಈ ಹಿಂದೆ ಪ.ಪಂ. ಎಸ್‌.ಎಲ್‌.ಆರ್‌.ಎಂ. ಘಟಕ ನಿರ್ಮಿಸುವ ಸಲುವಾಗಿ  ಉಳೂ¤ರಿನಲ್ಲಿರುವ ಸ್ಥಳ ಖರೀದಿ ನಡೆಸಿತ್ತು. ಆದರೆ ಅಲ್ಲಿನ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ಅದಕ್ಕೆ ಹಿನ್ನಡೆಯಾಯಿತು. ಅನಂತರ ಸಾಲಿಗ್ರಾಮದ ಹಲವು ಕಡೆಗಳಲ್ಲಿ ಜಾಗ ಗುರುತಿಸಲಾಯಿತು. ಆದರೆ ಸ್ಥಳೀಯರ ವಿರೋಧದಿಂದ ಅದಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ಇದೀಗ ಸಮಗ್ರ ತ್ಯಾಜ್ಯ ನಿರ್ವಹಣೆ ಪರಿಕಲ್ಪನೆಯಡಿ ವೈಜ್ಞಾನಿಕವಾಗಿ ವಿಲೇವಾರಿ ಸ್ವಚ್ಛಾಸ್ತ್ರ ಯೋಜನೆ ಅಳವಡಿಸಿಕೊಳ್ಳುವುದೊಂದೇ ಪರಿಹಾರ ಎನ್ನುವ ನಿರ್ಧಾರಕ್ಕೆ ಸ್ಥಳೀಯಾಡಳಿತ ಬಂದಿದೆ. ಕಾರ್ಕಡದಲ್ಲಿ ಲಭ್ಯವಿರುವ 10 ಎಕ್ರೆ ಸರಕಾರಿ ಜಮೀನಿನಲ್ಲಿ ಘಟಕ ಸ್ಥಾಪಿಸಬೇಕು ಎನ್ನುವುದು ಜನರ ಬೇಡಿಕೆಯಾಗಿದೆ.  

ಶೀಘ್ರ ಪರಿಹಾರ
ಕಸದ ಸಮಸ್ಯೆ ಪರಿಹಾರಕ್ಕೆ ಸಮಗ್ರ ತ್ಯಾಜ್ಯ ನಿರ್ವಹಣೆ ಪರಿಕಲ್ಪನೆಯ ಸ್ವಚ್ಛಾಸ್ತ್ರ  ಘಟಕವನ್ನು ಸ್ಥಾಪಿಸುವ ತಯಾರಿ ನಡೆಸಿದ್ದು, ಕಂಪನಿಯ ಜತೆಗೆ ಮಾತುಕತೆ ನಡೆದಿದೆ. ಡಿಸೆಂಬರ್‌ ಅಂತ್ಯದೊಳಗೆ ಪ್ರಾಯೋಗಿಕವಾಗಿ ಯಂತ್ರವನ್ನು ಅಳವಡಿಸಲಿದ್ದು, ಒಂದು ತಿಂಗಳ ಅನಂತರ ಶಾಶ್ವತ ಘಟಕ ತೆರೆದುಕೊಳ್ಳಲಿದೆ. ಒಂದು ತಿಂಗಳ ತರಬೇತಿ ಬಳಿಕ ನಮ್ಮ ಪೌರ ಕಾರ್ಮಿಕರೇ ಇದರ ನಿರ್ವಹಣೆ ನಡೆಸಲಿದ್ದಾರೆ.
– ಅರುಣ್‌ ಬಿ., ಮುಖ್ಯಾಧಿಕಾರಿ ಸಾಲಿಗ್ರಾಮ 

Advertisement

— ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next