Advertisement

ಮಿನಿವಿಧಾನಸೌಧದ ಆವರಣದಲ್ಲಿ ಡಂಪಿಂಗ್‌ ಯಾರ್ಡ್‌:ಅವ್ಯವಸ್ಥೆಗೆ ಆಕ್ಷೇಪ

11:41 AM Aug 04, 2018 | Team Udayavani |

ನಗರ : ಹಲವು ಸರಕಾರಿ ಕಚೇರಿಗಳು ಒಂದೆಡೆ ಇರುವ ಮಿನಿ ವಿಧಾನ ಸೌಧದಲ್ಲಿ ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆಗಳಿಲ್ಲ. ಕಟ್ಟಡದ ಆವರಣದ ಒಂದು ಭಾಗದಲ್ಲಿ ಕಸವನ್ನು ರಾಶಿ ಹಾಕಿ ಸುಡುವ ಇಲ್ಲಿನ ಅವೈಜ್ಞಾನಿಕ ವ್ಯವಸ್ಥೆಗೆ ಸಾರ್ವಜನಿಕ ವಲಯದಿಂದ ಆಕ್ಷೇಪವೂ ವ್ಯಕ್ತವಾಗಿದೆ.

Advertisement

ನಗರಸಭೆ ಆಡಳಿತವು ಸ್ವಚ್ಛ  ಪುತ್ತೂರು ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುತ್ತಿದ್ದರೂ ಸರಕಾರಿ ಕಚೇರಿಗಳೇ ಸ್ಪಂದನೆ ನೀಡುತ್ತಿಲ್ಲ. ಇದಕ್ಕೆ ಮಿನಿ ವಿಧಾನಸೌಧದ ಪಕ್ಕದಲ್ಲಿ ರಾಶಿ ಬಿದ್ದಿರುವ ಕಸದ ರಾಶಿ ಹಾಗೂ ಇದರ ಅವೈಜ್ಞಾನಿಕ ವಿಲೇವಾರಿ ಸಾಕ್ಷಿ ಎಂದು ಚಿಕ್ಕಮುಟ್ನೂರು ಕಲಿಯುಗ ಸೇವಾ ಸಮಿತಿ ಆರೋಪಿಸಿದೆ. 

ಕಸವನ್ನು ರಾಶಿ ಹಾಕಿ ಬೆಂಕಿ ಹಾಕುವುದು, ಪ್ಲಾಸ್ಟಿಕ್‌ ಬಾಟ್ಲಿ, ಇತರ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಕಸದ ರಾಶಿಯಲ್ಲಿ ಹಾಕಿ ಸುಡಲಾಗುತ್ತಿದೆ. ಈ ಹಿಂದೆ ಸಹಾಯಕ ಕಮಿಷನರ್‌ಗೆ ದೂರು ನೀಡಲಾಗಿದ್ದು, ಸ್ಥಳ ಪರಿಶೀಲನೆ ನಡೆಸುವ ಮತ್ತು ಕಾನೂನು ಬಾಹಿರ ಕೃತ್ಯಗಳಿಗೆ ಅವಕಾಶ ನೀಡದಂತೆ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ನೀಡಿದ್ದರು.

ಸಹಾಯಕ ಆಯುಕ್ತರ ಕಚೇರಿಯಿಂದ ತಹಶೀಲ್ದಾರ್‌ಗೆ ನೊಟೀಸ್‌ ಜಾರಿ ಮಾಡಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿತ್ತು. ಹಲವಾರು ಸಂಘಟನೆಗಳು ವಿಧಾನಸೌಧದಲ್ಲಿನ ತ್ಯಾಜ್ಯ ವಿಲೇವಾರಿ ವ್ಯವಸ್ಥೆಗೆ ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೂ ಇಲ್ಲಿನ ಅವ್ಯವಸ್ಥೆಗಳು ಯಥಾ ಸ್ಥಿತಿಯಲ್ಲಿ ಮುಂದುವರಿದುಕೊಂಡು ಬಂದಿದೆ ಎಂದು ಸಮಿತಿ ಆರೋಪಿಸಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ತೆರೆದ ಸ್ಥಳಗಳಲ್ಲಿ ಕಸ ಸುಡುವುದನ್ನು ನಿಷೇಧಿಸಿದೆ ಮತ್ತು ಇಂತಹ ಕೃತ್ಯಗಳಿಗೆ ದಂಡ ವಿಧಿಸಲು ಸೂಚಿಸಿದೆ. ವಿದ್ಯಾವಂತರೆನಿಸಿಕೊಂಡವರು, ಸರಕಾರಿ ಕಚೇರಿಯಲ್ಲಿನ ಸಿಬಂದಿ ಇಂತಹ ಕೃತ್ಯ ನಡೆಸದೆ ಸ್ವಚ್ಛ ಭಾರತ ಆಂದೋಲನದಲ್ಲಿ ಸಹಕರಿಸಬೇಕು ಎಂದು ಸಮಿತಿ ಆಗ್ರಹಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next