ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಪಶ್ಚಿಮ ಇನ್ನೂ 84 ರನ್ ಗಳಿಸಬೇಕಾಗಿದೆ. ಈ ಮೊದಲು ದಕ್ಷಿಣ ವಲಯ ಮೊದಲ ಇನ್ನಿಂಗ್ಸ್‌ನಲ್ಲಿ 213 ರನ್ ಗಳಿಸಿ ಆಲೌಟಾಗಿತ್ತು.
Advertisement
ಉತ್ತಮ ಆರಂಭಎಚ್ಚರಿಕೆಯ ಆಟವಾಡಿದ ಪಶ್ಚಿ ಮದ ಅಗ್ರ ಕ್ರಮಾಂಕದ ಆಟಗಾ ರರು ಉತ್ತಮ ಮೊತ್ತ ಪೇರಿಸಲು ಪ್ರಯತ್ನಿಸಿದರು. ಪೃಥಿ ಶಾ ಜವಾ ಬ್ದಾರಿಯಿಂದ ಆಡಿ ತಂಡವನ್ನು ರಕ್ಷಿಸುವ ಭಾರ ಹೊತ್ತರು. ಅವರು ಪ್ರಿಯಾಂಕ್ ಪಾಂಚಾಲ್ ಮತ್ತು ಹಾರ್ವಿಕ್ ದೇಸಾಯಿ ಜತೆಗೆ ಉತ್ತಮ ಜತೆ ಯಾಟದ ಆಟ ಆಡಲು ಶ್ರಮ ವಹಿಸಿದರು. ಹಾರ್ವಿಕ್ ದೇಸಾಯಿ ತಂಡದ ಮೊತ್ತ 97 ತಲುಪಿದಾಗ ಔಟಾದರು. ಆಬಳಿಕ ಪಶ್ಚಿಮ ಕುಸಿಯುತ್ತಲೇ ಹೋಯಿತು. ಮೊತ್ತ 124 ತಲುಪಿದಾಗ 7 ವಿಕೆಟ್ ಕಳೆದುಕೊಂಡಿತ್ತು. ಅಂದರೆ 17 ರನ್ ಅಂತರದಲ್ಲಿ ತಂಡದ 5 ವಿಕೆಟ್ ಉರುಳಿತ್ತು. ಏಕಾಂಗಿಯಾಗಿ ಹೋರಾಡಿದ ಪೃಥ್ವಿ ಶಾ 65 ರನ್ ಹೊಡೆದರು. ವಿದ್ವತ್ ಕಾವೇರಪ್ಪ ಮಾರಕ ದಾಳಿ ಸಂಘಟಿಸಿ ನಾಲ್ಕು ವಿಕೆಟ್ ಪಡೆದಿದ್ದರು.
ದಕ್ಷಿಣ ವಲಯ 213; ಪಶ್ಚಿಮ ವಲಯ 7 ವಿಕೆಟಿಗೆ 129 (ಪೃಥ್ವಿ ಶಾ 65, ಹಾರ್ವಿಕ್ ದೇಸಾಯಿ 21, ಕಾವೇರಪ್ಪ 44ಕ್ಕೆ 4, ವಿಜಯಕುಮಾರ್ ವೈಶಾಖ್ 29ಕ್ಕೆ 2).