Advertisement

ಸಹಜ ಸ್ವಿಂಗ್‌ ಸಾಮರ್ಥ್ಯದ ಡ್ಯೂಕ್‌ ಚೆಂಡುಗಳು

03:44 AM May 29, 2020 | Sriram |

ಲಂಡನ್‌: ಚೆಂಡನ್ನು ಸ್ವಿಂಗ್‌ ಮಾಡಲು ಒಂದು ಬದಿ ಉಗುಳು ಹಚ್ಚುವುದಷ್ಟೇ ಪರಿಹಾರವಲ್ಲ ಎಂದು ಡ್ಯೂಕ್‌ ಚೆಂಡುಗಳ ನಿರ್ಮಾಣ ಕಂಪೆನಿ ಹೇಳಿದೆ. ಡ್ಯೂಕ್ ಚೆಂಡುಗಳು ಉಗುಳು ಹಚ್ಚದೆಯೇ ಸ್ವಿಂಗ್‌ ಆಗಬಲ್ಲವು ಎಂಬುದಾಗಿ ಕಂಪೆನಿಯ ಮಾಲಕ ದಿಲೀಪ್‌ ಜಜೋಡಿಯಾ ಭರವಸೆ ನೀಡಿದ್ದಾರೆ.

Advertisement

“ಕೋವಿಡ್‌-19 ಭೀತಿಯಿಂದ ಚೆಂಡಿಗೆ ಉಗುಳು ಹಚ್ಚುವುದನ್ನು ನಿಷೇಧಿಸಲಾಗುತ್ತದೆ ಎಂಬ ಬಗ್ಗೆ ನಿಮಗೆ ಚಿಂತೆ ಬೇಡ. ನಮ್ಮ ಡ್ಯೂಕ್ ಚೆಂಡುಗಳು ಉಗುಳಿನ ಹಂಗಿಲ್ಲದೆ ಸ್ವಿಂಗ್‌ ಆಗುವ ರೀತಿಯಲ್ಲಿ ತಯಾರಿಸಲ್ಪಟ್ಟಿವೆ. ಇದಕ್ಕೆ ಕೈಯಿಂದಲೇ ಹೊಲಿಗೆ ಹಾಕಲಾಗಿದ್ದು, ಸುದೀರ್ಘಾವಧಿಯ ತನಕ ಗಟ್ಟಿಯಾಗಿ ಇರಲಿವೆ’ ಎಂಬುದಾಗಿ ಜಜೋಡಿಯಾ ಹೇಳಿದರು.

ಬೆವರು ಹಚ್ಚಿದರೆ ಸಾಕು…
“ಸದ್ಯ ಚೆಂಡಿಗೆ ಬೆವರು ಹಚ್ಚುವುದನ್ನು ನಿಷೇಧಿಸುವುದಿಲ್ಲ. ಹೀಗಾಗಿ ಹಣೆಯ ಮೇಲಿನ ಬೆವರನ್ನು ಹಚ್ಚಿದರೆ ನಾವು ಬಳಸಿದ ಚರ್ಮದ ಸ್ವಭಾವದಿಂದ ಚೆಂಡು ಉತ್ತಮ ಹೊಳಪನ್ನು ಹೊಂದಿರುತ್ತದೆ’ ಎಂಬುದಾಗಿ ಈ ಚೆಂಡಿನ ವೈಶಿಷ್ಟ್ಯದ ಬಗ್ಗೆ ಅವರು ಮಾಹಿತಿಯಿತ್ತರು.

ಉಗುಳು ನಿಷೇಧ ನಿಯಮಕ್ಕೆ ವೇಗಿ ಮಿಚೆಲ್‌ ಸ್ಟಾರ್ಕ್‌ ಸಹಿತ ಬಹಳಷ್ಟು ಬೌಲರ್‌ಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಬ್ಯಾಟ್‌-ಬಾಲ್‌ ನಡುವೆ ಗುಣಮಟ್ಟದ ಹೋರಾಟ ಕಂಡುಬರದು, ಇದರಿಂದ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಲಾಭ ಸಿಗುತ್ತದೆ ಎಂಬುದಾಗಿ ಸ್ಟಾರ್ಕ್‌ ಅಭಿಪ್ರಾಯಪಟ್ಟಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next