Advertisement

ಆರ್ಥಿಕತೆ ಮುಗ್ಗರಿಸಲು ನೋಟು ಅಮಾನ್ಯವೇ ಕಾರಣ: ಡಾ.ಸಿಂಗ್‌

06:40 AM Sep 24, 2017 | |

ಮೊಹಾಲಿ: ನೋಟು ಅಮಾನ್ಯ ಪ್ರಕ್ರಿಯೆ ಅಗತ್ಯವಿರಲಿಲ್ಲ. ದೇಶದ ಆರ್ಥಿಕತೆ ಮುಗ್ಗರಿಸಲು ನೋಟು ಅಮಾನ್ಯದ ಸಾಹಸವೇ ಕಾರಣ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಹೇಳಿದ್ದಾರೆ.

Advertisement

ಇಲ್ಲಿನ ಇಂಡಿಯನ್‌ ಸ್ಕೂಲ್‌ ಆಫ್ ಬಿಸಿನೆಸ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯ ಪ್ರಕ್ರಿಯೆ ಲ್ಯಾಟಿನ್‌ ಅಮೆರಿಕ ದೇಶಗಳನ್ನು ಹೊರತುಪಡಿಸಿ ಇತರ ದೇಶಗಳಲ್ಲಿ ಯಶಸ್ಸು ಕಂಡಿಲ್ಲ. ಅಂಥ ಒಂದು ಕ್ರಮವನ್ನು ಘೋಷಣೆ ಮಾಡುವ ಅಗತ್ಯವೇ ಇರಲಿಲ್ಲ. ಯುಪಿಎ ಸರ್ಕಾರ ಇರುವಾಗ ಅರ್ಥ ವ್ಯವಸ್ಥೆಯಲ್ಲಿ ಶೇ.35-37ರ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯಾಗುತ್ತಿತ್ತು. ಹಾಲಿ ಸರ್ಕಾರದ ಅವಧಿಯಲ್ಲಿ ಹೂಡಿಕೆ ಪ್ರಮಾಣ ಶೇ.30ಕ್ಕಿಂತ ಕೆಳಕ್ಕೆ ಇಳಿದಿದೆ ಎಂದರು.

ಇದೇ ವೇಳೆ, 1991ರಲ್ಲಿ ಜಾರಿಗೊಳಿಸಿದ ಜಾಗತೀಕರಣ ನೀತಿಯಿಂದಾಗಿ ಉಂಟಾಗಬಹುದಾಗಿದ್ದ ಅಪಾಯಗಳು ನಿವಾರಣೆಯಾಗಿವೆ. ಅದರಿಂದಾಗಿ ದೇಶಕ್ಕೆ ಅನುಕೂಲ ವಾಗಿದೆ. ಈ ಸಾಧನೆಯ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದೇವೆ ಎಂದೂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next