Advertisement

ಅನುಮತಿ ನಿರಾಕರಣೆಗೆ ವೀರಶೈವ ಮುಖಂಡರೇ ಕಾರಣ: ಹೊರಟ್ಟಿ

07:25 AM Dec 30, 2017 | Team Udayavani |

ಹಾವೇರಿ: ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಸತ್ಯದರ್ಶನ ಸಂವಾದ ಕಾರ್ಯಕ್ರಮಕ್ಕೆ ಬಹುಸಂಖ್ಯೆಯಲ್ಲಿ ಜನರು ಬರುವಂತೆ ವೀರಶೈವ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಕರೆ ಕೊಟ್ಟಿದ್ದರಿಂದ ಪೊಲೀಸ್‌ ಇಲಾಖೆ ಸಂವಾದ ಸಭೆಗೆ ಅನುಮತಿ ನಿರಾಕರಿಸಿದೆ ಎಂದು ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಸಮಿತಿ ಮುಖಂಡ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಾರ್ಯಕ್ರಮವೊಂದರಲ್ಲಿ ಹೇಳಿದ ಪ್ರಕಾರ ಸಂವಾದ ಸಭೆಯನ್ನು ಏರ್ಪಡಿಸಿ¨ªೆ. ಅದಕ್ಕೆ ನಮ್ಮ ಕಡೆಯಿಂದ ಐವರು, ಅವರ ಕಡೆಯಿಂದ ಐವರಿಗೆ ಮಾತ್ರ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ವೀರಶೈವ ಮುಖಂಡರು ಫೇಸ್‌ಬುಕ್‌, ವಾಟ್ಸಾಪ್‌, ಮಾಧ್ಯಮಗಳಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ಬರುವಂತೆ ಕರೆಕೊಟ್ಟರು. ಆದ್ದರಿಂದ ಭದ್ರತಾ ಹಿತದೃಷ್ಟಿಯಿಂದ ಪೊಲೀಸ್‌ ಇಲಾಖೆ ಅನುಮತಿ ನಿರಾಕರಿಸಿದೆ. ಇದು ಕೇವಲ ಆಂತರಿಕ ಚರ್ಚಾ ಸಭೆಯೇ ಹೊರತು ಬಹಿರಂಗ ಸಭೆಯಾಗಿರಲಿಲ್ಲ. ನಮ್ಮ ಕಡೆಯಿಂದ ಐವರು, ಅವರ ಕಡೆಯಿಂದ ಐವರು ಸೇರಿ ಚರ್ಚಿಸುವುದರಿಂದ ಲಾಭವೂ ಇಲ್ಲ, ನಷ್ಟವೂ ಇಲ್ಲ. ನಾನು ಕೊಟ್ಟ ಮಾತಿಗೆ ತಪ್ಪಬಾರದೆಂದು ಚರ್ಚೆಗೆ ಆಹ್ವಾನ ನೀಡಿದ್ದೆ ಎಂದರು.

ಬಹಿರಂಗ ಚರ್ಚೆಯ ಸಭೆ ರದ್ದು ಮಾಡಿರುವ ಬಗ್ಗೆ ಹುಬ್ಬಳ್ಳಿಯ ರಾಜಶೇಖರ ಮೆಣಸಿನಕಾಯಿ ನಿವಾಸದಲ್ಲಿ ಲಿಂಗಾಯತ ಮುಖಂಡರ ತುರ್ತು ಸಭೆ ನಡೆಸಿ, ಮುಂದಿನ ತೀರ್ಮಾನವನ್ನು ಕೈಗೊಳ್ಳಲಾಗುವುದು. ಸರ್ಕಾರ ಈಗಾಗಲೇ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿ ಸಮಿತಿ ರಚಿಸಿದೆ. ಅದು ತನ್ನ ಕಾರ್ಯವನ್ನು ಮಾಡಲಿದೆ. ದಿಂಗಾಲೇಶ್ವರ ಶ್ರೀಗಳು ನನ್ನ ಬಗ್ಗೆ ಕ್ಷುಲಕವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಅವರ ಕ್ಷುಲಕ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

ಶ್ರೀಗಳೊಂದಿಗೆ ಚರ್ಚಿಸಿಲ್ಲ
ಬಸವ ಧರ್ಮದ ಎಲ್ಲ ಕಾರ್ಯಕ್ರಮಗಳನ್ನು ಮೂರುಸಾವಿರ ಮಠದಲ್ಲಿಯೇ ನಡೆಸಿಕೊಂಡು ಬಂದಿ¨ªೇವೆ. ಹೀಗಾಗಿ ಚರ್ಚಾ ಕಾರ್ಯಕ್ರಮ ನಡೆಸುವ ಕುರಿತು ಮಠದ ಸ್ವಾಮೀಜಿ ಅವರೊಂದಿಗೆ ಚರ್ಚಿಸಿರಲಿಲ್ಲ. ಈ ಬಗ್ಗೆ ಸಂಪರ್ಕಿಸಲು ಯತ್ನಿಸಿದರೂ ಸ್ವಾಮೀಜಿ ಸಿಕ್ಕಿರಲಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next