Advertisement

ಪ್ರಸಿದ್ಧ ದೂದ್ ಸಾಗರ್ ಜಲಪಾತ ವೀಕ್ಷಣೆಗೆ ಇನ್ನು ಮುಂದೆ ಪ್ರವಾಸಿಗರಿಗೆ ಅವಕಾಶ

09:54 AM Sep 04, 2019 | keerthan |

ಬೆಳಗಾವಿ: ಕರ್ನಾಟಕ ಹಾಗೂ ಗೋವಾ ಮಧ್ಯೆ ಇರುವ ಪ್ರಸಿದ್ಧ, ಮನಮೋಹಕ ದೂದ್ ಸಾಗರ್ ಜಲಪಾತದ ವೀಕ್ಷಣೆಗೆ ಇನ್ನು ಮುಂದೆ ಪ್ರವಾಸಿಗರಿಗೆ ಅವಕಾಶ ಸಿಗಲಿದೆ.

Advertisement

ನಗರದಲ್ಲಿ ಮಂಗಳವಾರ “ಉದಯವಾಣಿ” ಜೊತೆ ಮಾತನಾಡಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಈ ಹಿಂದೆ ನಡೆದ ಕೆಲವು ದುರ್ಘಟನೆಗಳಿಂದಾಗಿ ದೂದ್ ಸಾಗರ್ ಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿತ್ತು. ಆದರೆ ಪ್ರವಾಸಿಗರ ಬೇಡಿಕೆ ಹಾಗೂ ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು ನಾಳೆಯಿಂದ ದೂದ್ ಸಾಗರ್ ನಿಲ್ದಾಣದಲ್ಲಿ ರೈಲು ನಿಲುಗಡೆ ಆರಂಭವಾಗಲಿದೆ ಎಂದರು.

ನಾಳೆ ( ಸಪ್ಟೆಂಬರ್ 4) ರಂದು ದೂದ್ ಸಾಗರ್ ರೈಲ್ವೆ ನಿಲ್ದಾಣದಲ್ಲಿ ಮಧ್ಯಾಹ್ನ 1.30 ಕ್ಕೆ ರೈಲು ನಿಲುಗಡೆಗೆ ಹಸಿರು ನಿಶಾನೆ ತೋರಿಸಲಾಗುತ್ತದೆ. ಪ್ರವಾಸಿಗರು ಇದರ ಸದುಪಯೋಗ ಪಡೆದುಕೊಂಡು ಪ್ರವಾಸೋದ್ಯಮದ ಅಭಿವೃದ್ಧಿ ಗೆ ಸಹಕಾರ ನೀಡಬೇಕು ಎಂದರು.

ಇದಲ್ಲದೆ ಗೋವಾ ಹಾಗೂ ಕರ್ನಾಟಕದ ಜನರ ಬಹಳ ದಿನಗಳ ಬೇಡಿಕೆಯಂತೆ ನಾಳೆ ಬೆಳಗಾವಿ ಹಾಗೂ ವಾಸ್ಕೋ ನೂತನ ರೈಲು ಸಂಚಾರ ಆರಂಭಕ್ಕೆ ಹಸಿರು ನಿಶಾನೆ ತೋರಿಸಲಾಗುವದು.ಈ ರೈಲು ವಾರದಲ್ಲಿ ಎರಡು ದಿನ ಸಂಚರಿಸಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next