Advertisement

ಕಿರುತೆರೆಯಲ್ಲಿ ಪ್ರತಿಭಾ ಪಲಾಯನ

03:26 PM Oct 29, 2021 | Team Udayavani |
-ರವಿ ಪ್ರಕಾಶ್‌ ರೈಈ ಪ್ರತಿಭಾ ಪಲಾಯನ ಕೇವಲ ಕಲಾವಿದರಿಗಷ್ಟೇ ಸೀಮಿತವಾಗಿಲ್ಲ. ತಾಂತ್ರಿಕ ವರ್ಗದ ಸಾಕಷ್ಟು ಮಂದಿ ಕೂಡಾ ಈಗ ಅವಕಾಶ ಹುಡುಕಿಕೊಂಡು ಸದ್ದಿಲ್ಲದೇ ನೆರೆ ರಾಜ್ಯದತ್ತ ಹೋಗುತ್ತಿದ್ದಾರೆ. ಹೆಸರು ಹೇಳಲು ಇಚ್ಛಿಸದ ಕಲಾವಿರೊಬ್ಬರು ಹೇಳುವಂತೆ, "ಕೆಲವು ವರ್ಷಗಳ ಹಿಂದೆ ನಮಗೆ ಕನ್ನಡ ಕಿರುತೆರೆಯಲ್ಲಿ ಹೆಚ್ಚು ಬೇಡಿಕೆ ಇತ್ತು. ಒಳ್ಳೊಳ್ಳೆ ಪಾತ್ರಗಳು ಸಿಗುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ, ಅದರಲ್ಲೂ ಡಬ್ಬಿಂಗ್‌ ಧಾರಾವಾಹಿಗಳು ಹೆಚ್ಚಾದ ಅನಂತರ ಅವಕಾಶದ ಕೊರತೆ ಕಾಡುತ್ತಿದೆ. ಅನಿವಾರ್ಯವಾಗಿ ಪರಭಾಷೆಯ ಬಾಗಿಲು ಬಡಿಯುವಂತಾಗಿದೆ.
Now pay only for what you want!
This is Premium Content
Click to unlock
Pay with

ಬೆಂಗಳೂರು: ಒಂದು ಕಾಲದಲ್ಲಿ ನಮ್ಮ ಕಿರುತೆರೆಯಲ್ಲಿ ಮಿಂಚಿದವರು ಈಗೆಲ್ಲಿ ಮರೆಯಾಗಿ ಹೋದರು? ಈ ಸಿರಿಯಲ್‌ ನಮ್ಮದು ಅನ್ನಿಸುತ್ತಿಲ್ಲವಲ್ಲ… ಇಂಥ ಹಲವಾರು ಸಂದೇಹಗಳು ಕನ್ನಡಿಗರಲ್ಲಿ ಮನೆ ಮಾಡುತ್ತಿವೆ. ಇದಕ್ಕೆ ಕಾರಣ, ಕಿರುತೆರೆ ಜಗತ್ತಿನಲ್ಲಿ ಹೆಚ್ಚುತ್ತಿರುವ ಡಬ್ಬಿಂಗ್‌!

Advertisement

ಹೌದು, ಇತ್ತೀಚೆಗೆ ಚಿತ್ರರಂಗದಲ್ಲಿ ಕಂಡು ಬರುತ್ತಿರುವ ಪ್ಯಾನ್‌ ಇಂಡಿಯಾ ಸಂಪ್ರದಾಯ, ಕಿರುತೆರೆಗೂ ಆಗಮಿಸಿದೆ. ಸಿರಿಯಲ್‌ಗ‌ಳು ಪ್ಯಾನ್‌ ಇಂಡಿಯಾ ಆಗದಿದ್ದರೂ, ಅರ್ಧ ಭಾರತದಲ್ಲಾದರೂ ಪ್ರದರ್ಶನವಾಗುತ್ತಿವೆ ಎಂಬುದಂತೂ ಸತ್ಯ.

ಸದ್ಯ ಈ ಹಿಂದೆ ಕಿರುತೆರೆಯಲ್ಲಿ ಮಿಂಚಿದ್ದ ಹಲವಾರು ಮುಖಗಳು ಕಾಣಿಸುತ್ತಿಲ್ಲ. ಒಂದು ಪಾತ್ರವಾಗಿ ಇಡೀ ಮನೆ ಮಂದಿಯ ಮೆಚ್ಚುಗೆ ಪಡೆದ ಕಲಾವಿದರು ಈಗ ಕನ್ನಡ ಧಾರಾವಾಹಿಗಳಲ್ಲಿ ಕಾಣಸಿಗುತ್ತಿಲ್ಲ. ಇವರೆಲ್ಲಿ ಹೋದರು ಎಂಬುದಕ್ಕೆ ಉತ್ತರ ಅವಕಾಶಗಳ ಕೊರತೆ. ಸದ್ಯ ಕಿರುತೆರೆಯಲ್ಲೂ ಪರಭಾಷಾ ಧಾರಾವಾಹಿಗಳ ಅಬ್ಬರ ಹೆಚ್ಚಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಕನ್ನಡಕ್ಕೆ ಲಗ್ಗೆ ಇಟ್ಟ ಡಬ್ಬಿಂಗ್‌ ಸಂಸ್ಕೃತಿ, ಹೆಚ್ಚುತ್ತಿರುವ ಡಿಜಿಟಲೀಕರಣ … ಇವೆಲ್ಲದರಿಂದ ಕನ್ನಡ ಕಿರುತೆರೆಯ ಅದೆಷ್ಟೋ ಪ್ರತಿಭೆಗಳು ಇಲ್ಲಿ ಅವಕಾಶ ವಂಚಿತರಾಗುತ್ತಿದ್ದಾರೆ. ಅದೇ ಕಾರಣದಿಂದ ಈಗ ಅನೇಕ ಕಲಾವಿದರು ಅವಕಾಶ ಹುಡುಕಿಕೊಂಡು ಪರಭಾಷೆಯತ್ತ ಮುಖ ಮಾಡಿದ್ದಾರೆ. ನೀವು ಪರಭಾಷೆಯ ಧಾರಾವಾಹಿಗಳನ್ನು ನೋಡುವವರಾಗಿದ್ದರೆ ನಿಮಗೆ ಅಲ್ಲಿ ಒಂದಷ್ಟು ಕನ್ನಡದ ಪ್ರತಿಭೆಗಳು ಕಾಣಸಿಗುತ್ತವೆ.

ತಾಂತ್ರಿಕ ವರ್ಗಕ್ಕೂ ತಟ್ಟಿದ ಬಿಸಿ: ಈ ಪ್ರತಿಭಾ ಪಲಾಯನ ಕೇವಲ ಕಲಾವಿದರಿಗಷ್ಟೇ ಸೀಮಿತವಾಗಿಲ್ಲ. ತಾಂತ್ರಿಕ ವರ್ಗದ ಸಾಕಷ್ಟು ಮಂದಿ ಕೂಡಾ ಈಗ ಅವಕಾಶ ಹುಡುಕಿಕೊಂಡು ಸದ್ದಿಲ್ಲದೇ ನೆರೆ ರಾಜ್ಯದತ್ತ ಹೋಗುತ್ತಿದ್ದಾರೆ. ಹೆಸರು ಹೇಳಲು ಇಚ್ಛಿಸದ ಕಲಾವಿರೊಬ್ಬರು ಹೇಳುವಂತೆ, “ಕೆಲವು ವರ್ಷಗಳ ಹಿಂದೆ ನಮಗೆ ಕನ್ನಡ ಕಿರುತೆರೆಯಲ್ಲಿ ಹೆಚ್ಚು ಬೇಡಿಕೆ ಇತ್ತು. ಒಳ್ಳೊಳ್ಳೆ ಪಾತ್ರಗಳು ಸಿಗುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ, ಅದರಲ್ಲೂ ಡಬ್ಬಿಂಗ್‌ ಧಾರಾವಾಹಿಗಳು ಹೆಚ್ಚಾದ ಅನಂತರ ಅವಕಾಶದ ಕೊರತೆ ಕಾಡುತ್ತಿದೆ. ಅನಿವಾರ್ಯವಾಗಿ ಪರಭಾಷೆಯ ಬಾಗಿಲು ಬಡಿಯುವಂತಾಗಿದೆ.

ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ಛಾಯಾಗ್ರಾಹಕರೊಬ್ಬರು ಹೇಳುವಂತೆ, “ಈಗ ಕೆಲಸ ಕಡಿಮೆಯಾಗಿರುವುದು ನಿಜ. ಹಾಗಾಗಿ ನಾವು ಬೇರೆ ಭಾಷೆಯತ್ತ ಮುಖ ಮಾಡಬೇಕಾಗಿದೆ’ ಎನ್ನುತ್ತಾರೆ.

Advertisement

ಕೆಲವು ವರ್ಷಗಳ ಹಿಂದೆ ಕನ್ನಡ ಕಿರುತೆರೆಯಲ್ಲಿ ಬೇಡಿಕೆಯಲ್ಲಿದ್ದ ನಟಿಯೊಬ್ಬರು, ಕ್ರಮೇಣ ಅವಕಾಶದ ಕೊರತೆ ಎದುರಾಗುತ್ತಿದ್ದಂತೆ ಪರಭಾಷೆಯತ್ತ ಮುಖ ಮಾಡಿದ್ದರು. ಈಗ ಆಕೆ ತುಂಬಾ ವರ್ಷಗಳ ಅನಂತರ ಕನ್ನಡ ಚಿತ್ರವೊಂದಕ್ಕೆ ನಾಯಕಿಯಾಗಿ ಬಂದಿದ್ದಾರೆ.

ಡಬ್ಬಿಂಗ್‌ ಮಾಡುವುದು ಅನಿವಾರ್ಯ: ಮೊದಲೇ ಹೇಳಿದಂತೆ ಕನ್ನಡದಲ್ಲಿ ಈಗ ಡಬ್ಬಿಂಗ್‌ ಧಾರಾವಾಹಿಗಳ ಸದ್ದು ಜೋರಾಗಿದೆ. ಹೀಗಾಗಿ ಡಬ್ಬಿಂಗ್‌ ಕಲಾವಿದರು, ಡಬ್ಬಿಂಗ್‌ ಸ್ಟುಡಿಯೋಗಳು ಬ್ಯುಸಿಯಾಗಿವೆ. ನಟನೆಯಲ್ಲಿ ಬ್ಯುಸಿಯಾಗಿದ್ದ ಅದೆಷ್ಟೋ ನಟ-ನಟಿಯರು ಅನಿವಾರ್ಯವಾಗಿ ಡಬ್ಬಿಂಗ್‌ ಧಾರಾವಾಹಿಗಳಿಗೆ ಧ್ವನಿಯಾಗಬೇಕಿದೆ.  ತೆರೆಮುಂದೆ ಅದ್ಭುತವಾಗಿ ನಟಿಸುತ್ತಿದ್ದ ಕಲಾವಿದರು ತೆರೆಮೇಲೆ ತಮ್ಮ ಧ್ವನಿ ಕೇಳಿ ಖುಷಿಪಡುವಂತಾಗಿದೆ.

ಇವತ್ತು ಡಬ್ಬಿಂಗ್‌ ಸೇರಿದಂತೆ ಪರಭಾಷಾ ಧಾರಾವಾಹಿಗಳ ಹಾವಳಿಯಿಂದ ಅವರೆಲ್ಲರೂ ಕೆಲಸ ಕಳೆದುಕೊಳ್ಳುವಂತಾಗಿದೆ. 20 ಡಬ್ಬಿಂಗ್‌ ಸೀರಿಯಲ್‌ ಬರ್ತಾ ಇದೆ ಎಂದುಕೊಂಡರೂ ಒಂದು ಧಾರಾವಾಹಿಯಲ್ಲಿ ಪ್ರಮುಖವಾಗಿ 50ರಿಂದ 100 ಜನ ಇದ್ದೇ ಇರುತ್ತಾರೆ. ಆ ನಿಟ್ಟಿನಲ್ಲಿ ಸರಿಸುಮಾರು ಎರಡು ಸಾವಿರ ಜನ ಕೆಲಸ ಕಳೆದುಕೊಳ್ಳುತ್ತಾರೆ.  -ಎಸ್‌.ವಿ. ಶಿವಕುಮಾರ್‌, ಅಧ್ಯಕ್ಷರು, ಕರ್ನಾಟಕ ಟೆಲಿವಿಶನ್‌ ಅಸೋಸಿಯೇಶನ್‌

ಒಂದು ಕಡೆ ಅವಕಾಶಗಳು ಕಡಿಮೆಯಾಗುತ್ತಿವೆ. ಮತ್ತೂಂದು ಕಡೆ ಬೇರೆ ಭಾಷೆಯ ಧಾರಾವಾಹಿಗಳಲ್ಲಿ ನಮ್ಮ ಕಲಾವಿದರೇ ನಟಿಸುತ್ತಿದ್ದಾರೆ. ಒಂದರಲ್ಲಿ ಕೆಟ್ಟದಾದರೆ, ಮತ್ತೂಂದರಲ್ಲಿ ಒಳ್ಳೆಯದೂ ಆಗುತ್ತಿದೆ. ಈ ಧಾರಾವಾಹಿಗಳು ಕನ್ನಡದಲ್ಲಿ ಬಂದ ಅನಂತರ ಎರಡೂ ಭಾಷೆಯ ವೀಕ್ಷಕರು ಸಿಗುತ್ತಾರೆ. ಡಬ್ಬಿಂಗ್‌ನಿಂದ ಒಂದು ವರ್ಗದ ಜನರಿಗೆ ಅವಕಾಶ ಕಡಿಮೆಯಾದರೆ ಡಬ್ಬಿಂಗ್‌ ಆರ್ಟಿಸ್ಟ್‌ಗಳಿಗೆ ಸ್ಟುಡಿಯೋಗಳಿಗೆ ಕೆಲಸ ಸಿಗುತ್ತಿದೆ. ಹೀಗೆ ಅನುಕೂಲ, ಅನಾನುಕೂಲ ಎರಡೂ ಇದೆ. -ಅನಿರುದ್ಧ್, ನಟ

-ರವಿ ಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.