Advertisement

ದುಬೈನ ಆರ್.ಎ.ಕೆ. ಸಿರಾಮಿಕ್ಸ್ ಗೆ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್‌ನ 9 ಮಂದಿ ಆಯ್ಕೆ

09:11 PM Jul 22, 2022 | Team Udayavani |

ಭಟ್ಕಳ: ದುಬೈನ ಆರ್.ಎ.ಕೆ. ಸಿರಾಮಿಕ್ಸ್ ಕಂಪನಿ ವಿಶ್ವದ ಸಿರಾಮಿಕ್ ಟೈಲ್ಸ್, ಸ್ಯಾನಿಟರಿ ವೇರ್ ತಯಾರಿಕೆಯಲ್ಲಿ ಅತಿ ದೊಡ್ಡದಾದ ಸಿರಾಮಿಕ್ ಬ್ರಾಂಡ್‌ಗಳಲ್ಲಿ ಒಂದಾಗಿದ್ದು ಕಂಪನಿಯ ವತಿಯಿಂದ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಮುರುಡೇಶ್ವರ ಆರ್.ಎನ್. ಶೆಟ್ಟಿ ರೂರಲ್ ಪಾಲಿಟೆಕ್ನಿಕ್‌ನ ಡಿಪ್ಲೋಮಾ ಇನ್ ಸಿರಾಮಿಕ್ ಟೆಕ್ನಾಲಜಿ ಕೋರ್ಸ್ ಮುಗಿಸಿದ ೯ ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಕಾಲೇಜಿಗೆ ಹೆಮ್ಮೆ ತಂದಿದ್ದಾರೆ.

Advertisement

ಆಯ್ಕೆಯಾದ ವಿದ್ಯಾರ್ಥಿಗಳಾದ ಸುದೀಪ್ ಕಾರ್ವಿ ಬೈಂದೂರ, ಶಶಾಂಕ್ ಶೆಟ್ಟಿ ಕುಂದಾಪುರ, ಚರಣ್ ವಿ.ನಾಯ್ಕ ಸರ್ಪನಕಟ್ಟೆ, ಮನೋಜ ಸುರೇಶ ಮೊಗೇರ ಬೆಳಕೆ, ಹರಿಹರ ಎಂ.ನಾಯ್ಕ ಇಡಗುಂಜಿ, ಸಾತ್ವಿಕ್ ಪೂಜಾರಿ ಉಡುಪಿ, ದರ್ಶನ್ ಎಂ. ನಾಯ್ಕ ಇಡಗುಂಜಿ, ನಿತೇಶ್ ಶ್ರೀಧರ ಜೋಗಿ ಮುರುಡೇಶ್ವರ ಹಾಗೂ ದಯಾನಂದ ವಿ. ನಾಯ್ಕ ಅನಿಲಗೋಡ ಇವರನ್ನು ಆರ್.ಎನ್.ಎಸ್. ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ದಿನೇಶ ಗಾಂವಕರ್, ಪ್ರಾಚಾರ್ಯ ಸಂತೋಷ ಆರ್.ಎ., ಅಭಿನಂದಿಸಿದ್ದಾರೆ.

ಪಾಲಿಟೆಕ್ನಿಕ್‌ನ ಉದ್ಯೋಗಾಧಿಕಾರಿ ಕೆ. ಮರಿಸ್ವಾಮಿ ಅವರು ಮಾಹಿತಿ ನೀಡಿ ಈ ಕಂಪೆನಿಯ ಸಂದರ್ಶನದಲ್ಲಿ ಪ್ರತಿ ವರ್ಷ ನಮ್ಮ ಪಾಲಿಟೆಕ್ನಿಕ್‌ಗೆ ಸೇರಿದ ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದು ಪ್ರಸ್ತುತ 300 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಂಪೆನಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇತರೇ ಕಂಪೆನಿಗಳಲ್ಲಿ ಸುಮಾರು 400 ವಿದ್ಯಾರ್ಥಿಗಳು ಕೆಲಸ ಮಾಡುತ್ತಿದ್ದು ಸಿರಾಮಿಕ್ ಡಿಪ್ಲೋಮಾ ಮುಗಿಸಿದವರಿಗೆ ಉದ್ಯೋಗ ಖಾತ್ರಿಯಾಗಿ ದೊರೆಯುವುದು ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next