Advertisement

ಮರಳಿನ ಮೋಡಿಗೆ ಮಾಯವಾದ ಬುರ್ಜ್‌ ಖಲೀಫಾ!

10:06 AM May 20, 2022 | Team Udayavani |

ಅಬುಧಾಬಿ: ಜಗತ್ತಿನ ಅತಿ ಎತ್ತರದ ಕಟ್ಟಡದ ಎಂಬ ಖ್ಯಾತಿ ಪಡೆದಿರುವ ಬುರ್ಜ್‌ ಖಲೀಫಾ, ನೋಡ ನೋಡುತ್ತಿದ್ದಂತೆ ಮಾಯವಾಗಿತ್ತು! ಅದಕ್ಕೆ ಕಾರಣ, ಇಡೀ ಸೌದಿ ವಲಯದಲ್ಲಿ ಬೀಸುತ್ತಿರುವ ಮರಳು ಮಿಶ್ರಿತ ಬಿರುಗಾಳಿ.

Advertisement

ಇರಾಕ್‌, ಕುವೈತ್‌, ಸೌದಿ ಅರೇಬಿಯಾ, ಇರಾನ್‌ ಹಾಗೂ ಇನ್ನಿತರ ದೇಶಗಳಲ್ಲಿ ಕಾಣಿಸಿಕೊಂಡಿದ್ದ ಮರಳು ಮಿಶ್ರಿತ ಬಿರುಗಾಳಿ, ಈಗ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ಗೆ (ಯುಎಇ) ಕಾಲಿಟ್ಟಿದೆ. ಎಲ್ಲೆಲ್ಲೂ ಮರಳು ತೂರಾಟವೇ ಕಾಣಿಸುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ವಾತಾವರಣದಲ್ಲಿ ಮರಳಿನ, ಧೂಳಿನ ಕಣಗಳೇ ಗಾಢವಾಗಿ ಕಟ್ಟಡಗಳು ಕಾಣದಂತಾಗಿವೆ. ಅದರ ಪರಿಣಾಮವಾಗಿ, ಯುಎಇ ರಾಜಧಾನಿಯಾಗಿರುವ ದುಬೈನಲ್ಲಿರುವ, ಸುಮಾರು 2,716 ಅಡಿ ಎತ್ತರದ ಬುರ್ಜ್‌ ಖಲೀಫಾ ಕೂಡ ಕಣ್ಮರೆಯಾಗಿತ್ತು!

ಮರಳು ಬಿರುಗಾಳಿಯಿಂದಾಗಿ ದುಬೈನ ಗಾಳಿಯ ಗುಣಮಟ್ಟ ಸೂಚ್ಯಂಕ (ಎ.ಕ್ಯು.ಐ), ಅಪಾಯಕಾರಿ ಮಟ್ಟ ತಲುಪಿದೆ. ಇಂಥ ಪರಿಸ್ಥಿತಿಯಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅಲ್ಲಿನ ಸರ್ಕಾರ, ಜನರಿಗೆ  ಸೂಚನೆ ನೀಡಿದೆ. ಕಾರುಗಳನ್ನು ಓಡಿಸುವಾಗ ಮರಳು ಬಿರುಗಾಳಿಯ ಫೋಟೋ, ವಿಡಿಯೋಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಕೂಡದೆಂದು ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next