Advertisement

ಖಲೀಫಾದಲ್ಲಿ ಕೋಲ್ಮಿಂಚು ; ಕೆಮೆರಾ ಕಣ್ಣಿಗೆ ಸೆರೆಸಿಕ್ಕ ಅಪರೂಪದ ದೃಶ್ಯ

10:07 AM Jan 15, 2020 | Hari Prasad |

ದುಬಾೖ: ಅನಿರೀಕ್ಷಿತ ಮಳೆಯು ದುಬಾೖನಾದ್ಯಂತ ಜನಜೀವನ ಅಸ್ತವ್ಯಸ್ತಗೊಳಿಸಿರುವ ನಡುವೆಯೇ, ಜಗತ್ತಿನ ಅತೀ ಎತ್ತರದ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾಗಿರುವ ಇಲ್ಲಿನ ಬುರ್ಜ್‌ ಖಲೀಫಾದ ತುತ್ತ ತುದಿಗೆ ಸಿಡಿಲು ಬಡಿಯುತ್ತಿರುವ ಅದ್ಭುತ ದೃಶ್ಯವೊಂದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

Advertisement

ಝೊಹೈಬ್‌ ಅಂಜುಮ್‌ ಎಂಬವರು ಬುರ್ಜ್‌ ಖಲೀಫಾದಲ್ಲಿ ‘ಮಿಂಚಿ’ನ ಸಂಚಲನ ಆಗುತ್ತಿರುವ ವಿಡಿಯೋವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂಥದ್ದೊಂದು ಪರ್ಫೆಕ್ಟ್ ಶಾಟ್‌ ಸಿಗಬೇಕೆಂದು ಅಂಜುಮ್‌ ಅವರು ಬರೋಬ್ಬರಿ 7 ವರ್ಷಗಳಿಂದಲೂ ಕಾಯುತ್ತಿದ್ದರಂತೆ.

‘ಮರಳುಗಾಡಿನಲ್ಲಿ ಮಳೆಯ ಸಿಂಚನವಾದಾಗೆಲ್ಲ ಬುರ್ಜ್‌ ಖಲೀಫಾದ ಹೊರಗೆ ರಾತ್ರಿಪೂರ್ತಿ ಕಳೆದು, ಸಿಡಿಲು ಬಡಿಯುವ ದೃಶ್ಯವನ್ನು ಸೆರೆಹಿಡಿಯಲು ಯತ್ನಿಸುತ್ತಿದ್ದೆ. ಈಗ 2,720 ಅಡಿ ಎತ್ತರದ ಕಟ್ಟಡದ ಮೇಲ್ಭಾಗದಲ್ಲಿ ಸಿಡಿಲಿನ ರೇಖೆ ಮೂಡುತ್ತಿರುವಾಗಲೇ ಕೆಮೆರಾಗೆ ಅದು ಸೆರೆ ಸಿಕ್ಕಿರುವುದು ನನ್ನ ಕನಸನ್ನು ನನಸು ಮಾಡಿದೆ. ಆ ಭಗವಂತನೇ ನನಗಾಗಿ ಈ ಕ್ಷಣವನ್ನು ಯೋಜಿಸಿದ್ದ’ ಎಂದಿದ್ದಾರೆ ಝೊಹೈಬ್‌.

1996ರ ಬಳಿಕ ಇದೇ ಮೊದಲ ಬಾರಿಗೆ ಯುಎಇ ಇಷ್ಟು ಪ್ರಮಾಣದ ಮಳೆಯನ್ನು ಕಂಡಿದ್ದು, ಇನ್ನೂ ಕೆಲ ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಗಲ್ಫ್ ನ್ಯೂಸ್‌ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next