Advertisement

ದುಬೈ:ತುಳು ಸಮ್ಮೇಳನ’:ಡಾ|ಹೆಗ್ಗಡೆ ಅವರಿಗೆ ಸಾಂಪ್ರದಾಯಿಕ ಆಮಂತ್ರಣ

04:26 PM Nov 16, 2018 | Team Udayavani |

ಮುಂಬಯಿ: ಡಿಸೆಂಬರ್‌ 2009ರಲ್ಲಿ ಉಜಿರೆಯಲ್ಲಿ ನಡೆಸಲ್ಪಟ್ಟ ವಿಶ್ವ ತುಳು ಸಮ್ಮೇಳನ ತುಳುನಾಡ ಐತಿಹಾಸದಲ್ಲೇ ಸ್ವರ್ಣಾ ಕ್ಷರಗಳಲ್ಲಿ ಬರೆದಿಡುವಂತಹ ಮಹಾ ಸಮ್ಮೇಳನವಾಗಿ ಮೂಡಿತ್ತು. ಅದು ಪ್ರತಿಯೋರ್ವ ತುಳುವರ ಹಿರಿಮೆಯ ಸಮ್ಮೇಳನವೂ ಆಗಿತ್ತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖೀಲ ಭಾರತ ತುಳು ಒಕ್ಕೂಟದ ಸಾರಥ್ಯದಲ್ಲಿ ಮಂಗಳೂರು ಅಡ್ಯಾ ರ್‌ನಲ್ಲಿ ನಡೆಸಲ್ಪಟ್ಟ ವಿಶ್ವ ತುಳು ಸಮ್ಮೇಳನವೂ ಭಿನ್ನವಾಗಿಯೇ ಮೂಡಿತ್ತು. ಪ್ರಸ್ತುತ  ದುಬಾೖಯಲ್ಲಿ  ಜರಗುವ ಸಮ್ಮೇಳನ ಮತ್ತೂಂದು ಮೈಲುಗಲ್ಲಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ವಿಶ್ವ ತುಳುವರೆ ಪರ್ಬ ಸಮಿತಿಯ ಗೌರವಾಧ್ಯಕ್ಷ, ಪದ್ಮಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

Advertisement

ಅರಬ್‌ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ವಿಶ್ವದ ಸಮಸ್ತ ತುಳುವರ ಬೃಹತ್‌ ಸಮಾವೇಶವನ್ನಾ ಗಿಸಿ ನ. 23ರಿಂದ ನ. 24ರ ವರೆಗೆ ಎರಡು ದಿನ ದುಬಾೖಯ ಅಲ್‌ ನಾಸರ್‌ ಲೀಸರ್‌ ಲ್ಯಾಂಡ್‌ ಐಸ್‌ ರಿಂಕ್‌ ಒಳಾಂಗಣ ಕ್ರೀಡಾಂಗಣದಲ್ಲಿ ಎನ್‌ಎಂಸಿ ಸಮೂಹ ಸಂಸ್ಥೆಯ ಸ್ಥಾಪಕ ಮತ್ತು ಕಾರ್ಯಾಧ್ಯಕ್ಷ ಡಾ| ಬಿ.ಆರ್‌. ಶೆಟ್ಟಿ  ಅಧ್ಯಕ್ಷತೆಯಲ್ಲಿ ನಡೆಯಲಿರುವ “ವಿಶ್ವ ತುಳು ಸಮ್ಮೇಳನ ದುಬಾೖ-2018′ ಉದ್ಘಾಟಿಸಲಿರುವ ಡಾ| ವೀರೇಂದ್ರ ಹೆಗ್ಗಡೆ ಅವರು ಸಮ್ಮೇಳನದ ಸಂಘಟಕರಿಂದ ಸಾಂಪ್ರದಾಯಿಕವಾಗಿ ಆಮಂತ್ರಣ ಸ್ವೀಕರಿಸಿ ಶುಭ ಹಾರೈಸಿದರು.

ಗುರುವಾರ ಬೆಳಗ್ಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿನ ಕಚೇರಿಯಲ್ಲಿ ಡಾ| ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಗೈದು ಕರ್ನಾಟಕ ರಾಜ್ಯ ತುಳು ಅಕಾಡಮಿ ಅಧ್ಯಕ್ಷ  ಎ.ಸಿ. ಭಂಡಾರಿ, ಮುಂಬಯಿ ಉದ್ಯಮಿ, ಅಖೀಲಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್‌ ಯು. ದೇವಾಡಿಗ, ಗೌರವ  ಪ್ರಧಾನ  ಕಾರ್ಯದರ್ಶಿ ನಿಟ್ಟೆ ಶಶಿಧರ್‌ ಶೆಟ್ಟಿ ಅವರು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಸಮ್ಮೇಳನಕ್ಕೆ ಪ್ರೀತಿಪೂರ್ವಕವಾಗಿ ಆಹ್ವಾನಿಸಿ ಆಶೀರ್ವಾದ ಪಡೆದರು. 

ಚಿತ್ರ- ವರದಿ : ರೊನಿಡಾ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next