Advertisement

ಪ್ರವಾಹ ಪೀಡಿತ ಕೇರಳಕ್ಕೆ ದುಬೈನಿಂದ ಸಹಾಯ ಹಸ್ತ

10:08 AM Aug 14, 2019 | sudhir |

ದುಬೈ: ಯುಎಇನಲ್ಲಿರುವ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಭಾರತದ ಪ್ರವಾಹ ಪೀಡಿತ ರಾಜ್ಯ ಕೇರಳಕ್ಕೆ ತನ್ನ ಸ್ವಯಂ ಸೇವಕರನ್ನು ಕಳುಹಿಸಿಕೊಟ್ಟಿದೆ. ಈ ಮೂಲಕ ಮನೆ ಹಾಗೂ ತಮ್ಮ ನೆಲೆ ಕಳೆದುಕೊಂಡಿರುವ ಜನರ ಸಹಾಯಕ್ಕೆ ದುಬೈ ನೆರವಾಗಿದೆ.

Advertisement

‌ದುಬೈನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂತಾರಾಷ್ಟ್ರೀಯ ಸಂಘಟನೆ ಕೇರಳ ಮುಸ್ಲಿಂ ಕಲ್ಚರಲ್‌ ಸೆಂಟರ್‌ ಕೇರಳಕ್ಕೆ ನೆರವಾದ ಸಂಸ್ಥೆಯಾಗಿದೆ. ಇತ್ತೀಚೆಗೆ ಪ್ರವಾಹಕ್ಕೆ ತುತ್ತಾಗಿರುವ ಕೇರಳದ ಜನರಿಗೆ ತುರ್ತಾಗಿ ಬೇಕಾಗಿರುವ ಸೌಲಭ್ಯಗಳನ್ನು ಹೊಂದಿಸಲು ಈ ಸಂಸ್ಥೆ ಸಹಾಯ ಮಾಡುತ್ತಿದೆ.

ಅಬುಧಾಬಿಯಲ್ಲಿರುವ ಕೆ.ಎಂ.ಸಿ.ಸಿ.ಯಲ್ಲಿ 90 ಸಾವಿರ ಸದಸ್ಯರಿದ್ದು, ಅವುಗಳಲ್ಲಿ 40 ಸಾವಿರ ಮಂದಿ ದುಬೈನಲ್ಲಿ ಇದ್ದಾರೆ. ಗಲ್ಫ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ ಕೆ.ಎಂ.ಸಿ.ಸಿ.ಯ ಮುಖ್ಯ ಕಾರ್ಯದರ್ಶಿ ಮುಸ್ತಫಾ ವೆಂಗಾರಾ, ಸಂಸ್ಥೆಯ ಒಂದು ತಂಡ ಈಗಾಗಲೇ ಅತೀ ಹೆಚ್ಚು ಹಾನಿಯಾಗಿರುವ ವಯನಾಡ್‌, ಮಲಪುರಂ, ಕ್ಯಾಲಿಕಟ್‌ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಸೇವೆ ನೀಡುತ್ತಿದೆ. ಈ ರಾಜ್ಯಗಳ ಸ್ಥಳೀಯ ಸಂಘಟನೆಗಳ ಜತೆ ಸೇರಿಕೊಂಡು ಕರ್ತವ್ಯ ನಿರ್ವಹಿಸುತ್ತಿದೆ ಎಂದಿದ್ದಾರೆ.

ದೇಣಿಗೆ ಸಂಗ್ರಹ

Advertisement

ಈಗಾಗಲೇ ದುಬೈನಲ್ಲಿರುವ ಸಂಸ್ಥೆ ಇಲ್ಲಿರುವ ಕೇರಳಿಗರು ಸೇರಿದಂತೆ ದೇಶದ ನಾನಾ ರಾಜ್ಯಗಳ ಪ್ರಜೆಗಳಿಂದ ದೇಣಿಗೆಯನ್ನು ಸಂಗ್ರಹಿಸುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಆಹಾರ ಮತ್ತು ಬಟ್ಟೆಯನ್ನು ನೀಡಲಾಗುತ್ತದೆ. ಇದರ ಭಾಗವಾಗಿ ಈಗಾಗಲೇ 5000 ಡ್ರೈ ಫ್ರುಟ್ಸ್‌ಗಳನ್ನು ಪೂರೈಸಲಾಗಿದ್ದು, ಸಂತ್ರಸ್ತರ ಕೈ ಸೇರಿದೆ ಎಂದು ಮಾಹಿತಿ ನೀಡಿದ್ದಾರೆ. ಕೇರಳಕ್ಕೆ ತೆರಳಿರುವ ತಂಡ ಪ್ರವಾಹ ಪೀಡಿತ 4 ಜಿಲ್ಲೆಗಳಿಗೆ ಅಗತ್ಯ ವಸ್ತುಗಳಾದ ಸಕ್ಕರೆ, ಕಾಫಿ, ಚಹಾ ಮತ್ತು ಅಕ್ಕಿಯನ್ನು ವಿತರಿಸುತ್ತಿದ್ದಾರೆ.

ಕಳೆದ ವರ್ಷ ಪ್ರವಾಹ ಸಂದರ್ಭ ನಿರ್ಮಾಣವಾದಗಲೂ ದಯಬೈನ ಈ ಸಂಸ್ಥೆ ಸಹಾಯ ಹಸ್ತ ಚಾಚಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

85 ಮಂದಿ ಸಾವು

ಕೇರಳದಲ್ಲಿನ ಭಾರೀ ಪ್ರವಾಹಕ್ಕೆ 85 ಮಂದಿ ಜೀವ ಕಳೆದುಕೊಂಡಿದ್ದು, 58 ಮಂದಿ ಕಾಣೆಯಾಗಿದ್ದಾರೆ. ರಾಜ್ಯದಲ್ಲಿ 1,654 ಪುನರ್‌ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ 83,274 ಕುಟುಂಬಗಳು ಆಶ್ರಯ ಪಡೆದುಕೊಳ್ಳುತ್ತಿದ್ದು, 2,87,585 ಮಂದಿ ಇದ್ದಾರೆ. ಪ್ರವಾಹದಲ್ಲಿ 2,966 ಮನೆಗಳು ನಾಶವಾಗಿದ್ದು, 280 ಮನೆಗಳು ಭಾಗಶಃ ಹಾನಿಗೆ ತುತ್ತಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next