Advertisement

Dubai ; ರಸ್ತೆಗೆ ಭಾರತೀಯ ಮೂಲದ ವೈದ್ಯನ ಹೆಸರು!

12:48 PM Jul 13, 2024 | Team Udayavani |

ದುಬಾೖ: ಭಾರತೀಯ ಮೂಲದ 84 ವರ್ಷದ ವೈದ್ಯರಾದ ಡಾ| ಜಾರ್ಜ್‌ ಮ್ಯಾಥ್ಯೂ ಹೆಸರನ್ನು ಅಬುಧಾಬಿಯ ರಸ್ತೆಯೊಂದಕ್ಕೆ ನಾಮಕರಣ ಮಾಡಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಅಗಾಧ ಕೊಡುಗೆಯನ್ನು ಸ್ಮರಿಸಿ ಅಲ್ಲಿನ ಆಡಳಿತ ಈ ನಿರ್ಧಾರ ಕೈಗೊಂಡಿದೆ. ಅಬುಧಾಬಿಯ ಅಲ್‌ವುಫ್ರಾಕನ್‌ನ ಶೇಖ್‌ ಶಕುºತ್‌ ಮೆಡಿಕಲ್‌ ಸಿಟಿ ಬಳಿಯ ರಸ್ತೆಯನ್ನು ಇನ್ನು ಡಾ|ಜಾರ್ಜ್‌ ಮ್ಯಾಥ್ಯೂ ರಸ್ತೆ ಎನ್ನಲಾಗುತ್ತದೆ. ಈ ಬಗ್ಗೆ ಡಾ| ಮ್ಯಾಥ್ಯೂ ಸಂತಸ ವ್ಯಕ್ತಪಡಿಸಿ ನನ್ನ ಸೇವೆ ಗುರುತಿಸಿ, ಗೌರವಿಸಿ ದ್ದಕ್ಕೆ ಸರಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next