ದುಬಾೖ: ಹಲವು ಪ್ರಥಮಗಳಿಂದ ಜಗತ್ತನ್ನೇ ಬೆರಗುಗೊಳಿಸಿರುವ ದುಬಾೖನಲ್ಲಿ ಇನ್ನೆರಡು ವರ್ಷಗಳಲ್ಲೇ ಹೈಪರ್‌ಲೂಪ್ ಸೇವೆ ಆರಂಭ ವಾಗಲಿದೆ. ಹೈಪರ್‌ಲೂಪ್ ಸೇವೆಗೆಂದು ವರ್ಜಿನ್ ಕಂಪೆನಿ ವಿನ್ಯಾಸ ಗೊಳಿಸಿರುವ ಪಾಡ್‌ನ ಮಾದರಿಯನ್ನು ದುಬೈ ರಸ್ತೆ ಸಾರಿಗೆ ಪ್ರಾಧಿಕಾರವು ಇಲ್ಲಿ ಅನಾವರಣಗೊಳಿಸಿದೆ. ಇತ್ತೀಚೆಗಷ್ಟೇ ಇದೇ ಮಾದರಿಯ ಯೋಜನೆಯನ್ನು ರಿಚರ್ಚ್ ಬ್ರಾನ್ಸನ್ ಅವರು ಮುಂಬಯಿಯಲ್ಲೂ ಜಾರಿಗೆ ತರುವ ಬಗ್ಗೆ ಘೋಷಿಸಿದ್ದರು. ದುಬಾೖ ಹೈಪರ್‌ಲೂಪ್‌ನ ವೈಶಿಷ್ಟé ಹೀಗಿದೆ.
ಕಾರ್ಯನಿರ್ವಹಣೆ?
ಹೈಪರ್‌ಲೂಪ್‌ನಲ್ಲಿರುವ ವಿದ್ಯು ತ್ಕಾಂತೀಯ ತಳ್ಳು ವ್ಯವಸ್ಥೆಯು ನಿರ್ವಾತ ಕೊಳವೆಯ ಮೂಲಕ ವಾಗಿ ಗಾಳಿಯಲ್ಲೇರಿ ತೇಲುವಂಥ ಪಾಡ್‌ಗಳ ವೇಗ ವರ್ಧಿಸುವ ಕೆಲಸ ಮಾಡುತ್ತದೆ. ಸಮುದ್ರಮಟ್ಟದಿಂದ 2 ಲಕ್ಷ ಅಡಿ ಎತ್ತರದಲ್ಲಿ ಗಾಳಿಯ ಒತ್ತಡ ಎಷ್ಟಿರುತ್ತದೋ, ಅಷ್ಟರ ಮಟ್ಟಿಗೆ ಕೊಳವೆಯ ಒಳಭಾಗದಲ್ಲಿನ ಗಾಳಿಯ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಇಷ್ಟೊಂದು ವೇಗವನ್ನು ಸಾಧಿಸಲಾಗುತ್ತದೆ.