Advertisement

ಪ್ರೀತಿಗಾಗಿ ಒಂಟೆ ಮರಿ ಕದ್ದು ಬಂದಿಯಾದ!

01:15 AM Feb 20, 2021 | Team Udayavani |

ದುಬಾೖ: ದುಬಾೖಯಲ್ಲಿ ಒಂಟೆಯನ್ನು ಕದ್ದರೆ, ಅದು ಕಾನೂನು ಪ್ರಕಾರ ಅಪರಾಧ. ಅದಕ್ಕೆ ಜೈಲುಶಿಕ್ಷೆಯೂ ಇದೆ. ಹೀಗಿರುವಾಗ ದುಬಾೖ ಯಲ್ಲಿ ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ಒಂಟೆ ಮರಿಯನ್ನು ಉಡುಗೊರೆಯಾಗಿ ನೀಡಲು ಹೋಗಿ ಜೈಲುಪಾಲಾಗಿದ್ದಾನೆ.

Advertisement

ಪ್ರಿಯ ತಮೆಯ ಜನ್ಮದಿನಕ್ಕೆ ಏನಾದರೂ ವಿಶೇಷ ಉಡುಗೊರೆ ನೀಡಲೇಬೇಕು ಎಂದು ಯೋಚಿ ಸುತ್ತಿದ್ದ ಆತನ ಕಣ್ಣಿಗೆ ಬಿದ್ದದ್ದು ತನ್ನೂರಿಗಿಂತ 3 ಕಿ.ಮೀ. ದೂರದಲ್ಲಿರುವ ನೆರೆಯವನ ಜಮೀನಿನಲ್ಲಿ ಕೆಲವೇ ದಿನಗಳ ಹಿಂದೆ ಹುಟ್ಟಿದ್ದ ಒಂಟೆ ಮರಿ!  ಅಂದುಕೊಂಡಂತೆ ಆ ಮರಿಯನ್ನು ಕದ್ದು ತಂದು ಪ್ರಿಯತಮೆಗೆ ನೀಡಿ ದ್ದಾನೆ. ಇದು ಗೊತ್ತಾಗಿ, ಒಂಟೆಯ ಮಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಕದ್ದವನಿಗೆ ಆತಂಕ ಶುರುವಾಗಿದೆ. ತಾನೇ ಪೊಲೀಸರಿಗೆ ಕರೆ ಮಾಡಿ, ತನ್ನ ಜಮೀನಿಗೊಂದು ಒಂಟೆ ನುಗ್ಗಿದೆ. ಅದರ ಮರಿಯನ್ನು ಕಟ್ಟಿಹಾಕಿದ್ದೇನೆ ಎಂದು ಬೊಗಳೆ ಬಿಟ್ಟಿದ್ದಾನೆ. ಅನುಮಾನ ಗೊಂಡ ಪೊಲೀಸರು ತಮ್ಮ ಶಕ್ತಿಪ್ರದರ್ಶನ ಮಾಡಿದ ಅನಂತರ ನಿಜ ವಿಷಯ ಹೊರ ಬಿದ್ದಿದೆ!  ಒಂಟೆ ಕದ್ದ ಆರೋಪದ ಮೇರೆಗೆ ಆತ ಜೈಲು ಪಾಲಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next