Advertisement

ದುರ್ಗಾ ದೇವಿ ಬಗ್ಗೆ ದಿಲ್ಲಿ ವಿವಿ ಪ್ರಾಧ್ಯಾಪಕನ ಕೀಳು ಪೋಸ್ಟ್‌

11:57 AM Sep 24, 2017 | Team Udayavani |

ಹೊಸದಿಲ್ಲಿ : ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕನೊಬ್ಬ ಹಿಂದೂ ದೇವತೆ ದುರ್ಗಾ ದೇವಿಯ ಕುರಿತು ಫೇಸ್‌ಬುಕ್‌ನಲ್ಲಿ  ಕೀಳು ಭಾಷೆಯ ಪೋಸ್ಟ್‌ ಮಾಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ. 

Advertisement

ಕೆದಾರ್‌ ಕುಮಾರ್‌ ಮಂಡಲ್‌ ಎಂಬ ಪ್ರಾಧ್ಯಾಪಕ ಫೇಸ್‌ಬುಕ್‌ನಲ್ಲಿ ‘ಭಾರತದ ಪುರಾಣದಲ್ಲಿ ಬರುವ ಅತ್ಯಂತ ಸೆಕ್ಸಿ ವೇಶ್ಯೆ’ ಎಂದು ಕೀಳಾಗಿ ಬರೆದು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ವಿವಾದ ಎಬ್ಬಿಸಿದ್ದ.

ಈ ಬಗ್ಗೆ ಬಿಜೆಪಿ ಪರವಿರುವ ಪ್ರಾಧ್ಯಾಪಕರ ಸಂಘಟನೆಯಾದ ಎನ್‌ಡಿಟಿಎಫ್ ಲೋಧಿ ಕಾಲೋನಿ ಪೊಲೀಸ್‌ ಠಾಣೆಯಲ್ಲಿ  ದೂರು ದಾಖಲಿಸಿದೆ. 

ಎಬಿವಿಪಿ ಮತ್ತು ಎನ್‌ಎಸ್‌ಯುಐ ಸಂಘಟನೆಗಳು ಪ್ರಾಧ್ಯಾಪಕನನ್ನು ತಕ್ಷಣ ಅಮಾನತು ಮಾಡಲು ಆಗ್ರಹಿಸಿ,ಪ್ರಾಧ್ಯಾಪಕ ತರಗತಿಗಳಿಗೆ ಹಾಜರಾಗಿದ್ದೇ ಆದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next