Advertisement

ದ.ಆಫ್ರಿಕಾ ಏಕದಿನ ತಂಡಕ್ಕೂ ಫಾ ಡು ಪ್ಲೆಸಿಸ್‌ ನಾಯಕ

06:05 AM Sep 13, 2017 | |

ಜೊಹಾನ್ಸ್‌ಬರ್ಗ್‌: ಫಾ ಡು ಪ್ಲೆಸಿಸ್‌ ಅವರನ್ನು ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್‌ ತಂಡದ ನೂತನ ನಾಯಕನನ್ನಾಗಿ ನೇಮಿಸಲಾಗಿದೆ. ಇದರೊಂದಿಗೆ ಅವರು ಎಲ್ಲ 3 ಮಾದರಿಯ ಕ್ರಿಕೆಟ್‌ನಲ್ಲೂ ತಂಡದ ಸಾರಥಿಯಾದಂತಾಯಿತು.

Advertisement

ಕಳೆದ ತಿಂಗಳು ಎಬಿ ಡಿ ವಿಲಿಯರ್ ಏಕದಿನ ಕ್ರಿಕೆಟ್‌ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಡು ಪ್ಲೆಸಿಸ್‌ ಅವರೀಗ ಎಬಿಡಿ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದು, ಮುಂದಿನ ವಿಶ್ವಕಪ್‌ ಪಂದ್ಯಾವಳಿಗಾಗಿ ತಂಡವನ್ನು ಸಜ್ಜುಗೊಳಿಸುವ ಮಹತ್ವದ ಜವಾಬ್ದಾರಿ ಇವರ ಮೇಲಿದೆ. ಸದ್ಯ ಅವರು ಪಾಕಿಸ್ಥಾನದಲ್ಲಿ ಆರಂಭಗೊಂಡಿರುವ ಟಿ-20 ಸರಣಿಯಲ್ಲಿ ವಿಶ್ವ ಇಲೆವೆನ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧ ಮುಂದಿನ ತಿಂಗಳು ಆರಂಭವಾಗಲಿರುವ ಸರಣಿ ಮೂಲಕ ಏಕದಿನದಲ್ಲಿ ಮೊದಲ ಬಾರಿಗೆ “ಪೂರ್ಣ ಪ್ರಮಾಣ’ದಲ್ಲಿ ರಾಷ್ಟ್ರೀಯ ತಂಡದ ಸಾರಥ್ಯ ವಹಿಸಲಿದ್ದಾರೆ.

ಡು ಪ್ಲೆಸಿಸ್‌ ಈಗಾಗಲೇ 9 ಏಕದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಿದರೂ ಇದೆಲ್ಲವೂ ಉಸ್ತುವಾರಿ ವ್ಯವಸ್ಥೆ ಆಗಿತ್ತು. ಡಿ ವಿಲಿಯರ್ ಗಾಯಾಳಾಗಿ ಹೊರಗುಳಿದ ಸಂದರ್ಭದಲ್ಲಿ ಈ ಅವಕಾಶ ಲಭಿಸಿತ್ತು. ಕಳೆದ ಅಕ್ಟೋಬರ್‌ನಲ್ಲಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ ವಿರುದ್ಧದ ತವರಿನ ಸರಣಿಯಲ್ಲಿ ಆಫ್ರಿಕಾದ 5-0 ಜಯಭೇರಿ ವೇಳೆ ಡು ಪ್ಲೆಸಿಸ್‌ ಅವರೇ ತಂಡದ ನಾಯಕರಾಗಿದ್ದರು. ಆಗಲೇ ಆಯ್ಕೆಗಾರರು ಇವರ ಮೇಲೆ ಕಣ್ಣಿಟ್ಟಿದ್ದರು.

ಎಬಿ ಡಿ ವಿಲಿಯರ್ ಕಳೆದ 6 ವರ್ಷಗಳಿಂದ ಏಕದಿನದಲ್ಲಿ ದಕ್ಷಿಣ ಆಫ್ರಿಕಾ ತಂಡದ ನೇತೃತ್ವ ವಹಿಸಿದ್ದರು. ಆದರೆ 103 ಪಂದ್ಯಗಳಲ್ಲಿ ಕೇವಲ 59ರಲ್ಲಷ್ಟೇ ಜಯ ಒಲಿದಿತ್ತು. ಹೀಗಾಗಿ ಎಬಿಡಿ ಅವರನ್ನು ದಕ್ಷಿಣ ಆಫ್ರಿಕಾದ ವಿಫ‌ಲ ನಾಯಕರಲ್ಲೊಬ್ಬರೆಂದೇ ಗುರುತಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next