Advertisement
ಚಳಿಗಾಲದಲ್ಲಿ ತಂಪು ವಾತಾವರಣ. ಹೆಚ್ಚಾಗಿ ಬಾಯಾರಿಕೆ ಆಗುವುದಿಲ್ಲ. ಆದ್ದರಿಂದ ತುಂಬಾ ಜನರು ಸಾಕಷ್ಟು ನೀರು ಕುಡಿಯುವುದನ್ನು ತಪ್ಪಿಸುತ್ತಾರೆ. ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ ಎಂದು ಎಷ್ಟೋ ಜನರು ಚಳಿಗಾಲದಲ್ಲಿ ಸಾಕಷ್ಟು ನೀರು ಕುಡಿಯುವುದಿಲ್ಲ. ದ್ರವ ಪದಾರ್ಥ ಸೇವನೆ ಮಾಡಲ್ಲ. ಇದು ಬದಲಾಗುವ ಋತುಮಾನದಲ್ಲಿ ಹಲವು ಸಮಸ್ಯೆ ತಂದೊಡ್ಡುತ್ತದೆ.
Related Articles
Advertisement
ಕಠಿಣ ಕ್ಲೆನ್ಸರ್ ಬಳಕೆ ಬೇಡ: ಕಠಿಣವಾದ ಕ್ಲೆನ್ಸರ್‌ಗಳು, ಫೇಸ್ ವಾಶ್‌ಗಳು ತ್ವಚೆಯ ನೈಸರ್ಗಿಕ ತೇವಾಂಶ ತೆಗೆದು ಹಾಕುತ್ತದೆ. ಇದರ ಪರಿಣಾಮವಾಗಿ ಚರ್ಮದ ಮೇಲಿನ ಪದರದಲ್ಲಿ ಬಿರುಕು ಉಂಟಾಗುತ್ತವೆ. ಚರ್ಮವು ಶುಷ್ಕ, ಬಿರುಕು, ಕೆಂಪು ಕಾಣಿಸಿಕೊಳ್ಳಬಹುದು. ಮುಖ ತೊಳೆಯಲು ಉತ್ತಮ ಗುಣಮಟ್ಟದ ಫೇಸ್ ವಾಶ್ಗಳನ್ನು ಬಳಸಿ.
ಹೆಚ್ಚು ನೀರು ಕುಡಿಯಿರಿ: ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯಿರಿ. ನೀರು ದೈಹಿಕ ಆರೋಗ್ಯ ಮತ್ತು ತ್ವಚೆಯ ಆರೋಗ್ಯಕ್ಕೆ ಅತ್ಯಂತ ಮುಖ್ಯ. ನೀರು ರಕ್ತನಾಳಕ್ಕೆ ಪ್ರವೇಶಿಸಿದ ನಂತರ, ಅದು ಜೀವಕೋಶಗಳನ್ನು ಹೈಡ್ರೇಟ್ ಮಾಡುತ್ತದೆ. ನೈಸರ್ಗಿಕವಾಗಿ ಚರ್ಮವನ್ನು ಹೈಡ್ರೇಟ್ ಮಾಡಲು ಇದು ಅತ್ಯುತ್ತಮ ಮಾರ್ಗ.
ಕೆಫೀನ್, ಆಲ್ಕೋಹಾಲ್ ಬದಲು ನೈಸರ್ಗಿಕ ಪಾನೀಯ: ಕೆಫೀನ್ ಮತ್ತು ಆಲ್ಕೋಹಾಲ್ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅದರ ಬದಲು ಹರ್ಬಲ್ ಟೀ, ನಿಂಬೆ ಪಾನಕ, ತೆಂಗಿನ ನೀರು ಇತ್ಯಾದಿ ಸೇವಿಸಿ.
ನೀರಿನಂಶವಿರುವ ಆಹಾರ ಸೇವಿಸಿ: ನೀರಿನಂಶ ಹೊಂದಿರುವ ಸಮೃದ್ಧ ಆಹಾರ ಸೇವಿಸಿ. ದೇಹ ಮತ್ತು ಚರ್ಮದ ನೀರಿನ ಪ್ರಮಾಣವು ಆಹಾರ ಸೇವನೆ ಮೇಲೆ ಪರಿಣಾಮ ಬೀರುತ್ತದೆ. ಚರ್ಮವನ್ನು ಹೈಡ್ರೇಟ್ ಮಾಡಲು ನೀರು ಭರಿತ ಆಹಾರ ಉತ್ತಮ. ಸ್ಟ್ರಾಬೆರಿ, ಕಿತ್ತಳೆ, ಬಾಟಲ್ ಸೋರೆಕಾಯಿ, ಚೀನೀಕಾಯಿ, ಕಲ್ಲಂಗಡಿ ಹಣ್ಣು, ಜ್ಯೂಸ್‌ಗಳನ್ನು ಸೇವಿಸುತ್ತಿರುವುದು ಒಳ್ಳೆಯದು.
ಚಳಿಗಾಲದಲ್ಲಿ ತ್ವಚೆಯು ಹೆಚ್ಚು ಶುಷ್ಕವಾಗಿ ಇರುತ್ತದೆ. ಇಂತಹ ಸಮಯದಲ್ಲಿ ಮಾಯಿಶ್ವರೈಸರ್‌ಗಳನ್ನು ಹೆಚ್ಚಾಗಿ ಬಳಸಬೇಕು. ಇದು ಒಣ ತ್ವಚೆಗೆ ಉತ್ತಮ. ಎಣ್ಣೆ ತ್ವಚೆ ಹೊಂದಿದ್ದವರು ಆಯಿಲ್ ಬೇಸ್ಡ್ ಮಾಯಿಶ್ಚುರೈಸರ್ ಉತ್ತಮವಲ್ಲ. ಅದರ ಬದಲು ವಾಟರ್ ಬೇಸ್ಡ್ ಮಾಯಿಶ್ಚುರೈಸರ್ ಆಯ್ಕೆ ಮಾಡಿಕೊಳ್ಳಿ.
ಚಳಿಗಾಲದಲ್ಲಿ ತ್ವಚೆ ಒಣಗುವುದರಿಂದ ವಿಪರೀತ ತುರಿಕೆ ಹಾಗೂ ಕಡಿತ ಸಾಮಾನ್ಯ. ಈ ಸಮಸ್ಯೆಗೆ ಲೋಳೆಸರವನ್ನು ಬಳಸಿ. ಅಲೋವೆರಾದ ಸಿಪ್ಪೆ ಹಾಗೂ ಮುಳ್ಳನ್ನು ಪ್ರತ್ಯೇಕಿಸಿ. ತುರಿಕೆ ಇರುವ ಅಥವಾ ಒಣ ಚರ್ಮಕ್ಕೆ ಹಚ್ಚಿ, ಅರ್ಧ ಗಂಟೆ ಬಳಿಕ ಮುಖ ತೊಳೆಯಿರಿ.
ಟೊಮೆಟೊ ಪೇಸ್ಟ್ ಗೆ ರೋಸ್ ವಾಟರ್ ಬೆರೆಸಿ ಕೈ ಕಾಲು ಕುತ್ತಿಗೆಗೆ ಹಚ್ಚಿ. ಇದರಿಂದ ತ್ವಚೆ ಒಡೆಯುವುದಿಲ್ಲ. ಜೇನುತುಪ್ಪಕ್ಕೆ ಗುಲಾಬಿ ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿ ಹಚ್ಚಿದರೆ ತ್ವಚೆ ಒಣಗುವುದಿಲ್ಲ. ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಎಳ್ಳೆಣ್ಣೆ ಹಚ್ಚಿ ಮಸಾಜ್ ಮಾಡಿ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖ ಹೊಳೆಯುವುದರೊಂದಿಗೆ ಒಣ ತ್ವಚೆ ಸಮಸ್ಯೆಯೂ ದೂರವಾಗುತ್ತದೆ.
ಚಳಿಗಾಲದಲ್ಲಿ ಬಿಸಿನೀರಿನ ಸ್ನಾನ ಅಪಾಯ. ಕೆಲವಾರು ಅನೈಚ್ಛಿಕ ತೊಂದರೆಗಳೂ ಎದುರಾಗುತ್ತವೆ. ಚರ್ಮದ ಹೊರಪದರ ಪಕಳೆ ಏಳುವುದು, ತಲೆಹೊಟ್ಟು ಹಾಗೂ ವೃದ್ದಾಪ್ಯದ ಚಿಹ್ನೆಗಳು ಆವರಿಸುವುದನ್ನು ಶೀಘ್ರವಾಗಿಸಬಹುದು. ಆದ್ದರಿಂದ ಸ್ನಾನಕ್ಕೆ ಉಗುರುಬೆಚ್ಚನೆಯ ನೀರನ್ನು ಬಳಸುವುದು ಉತ್ತಮ. ಸಾಧ್ಯವಾದರೆ ತಣ್ಣೀರನ್ನು ಬಳಸಬೇಕು. ಒಣತ್ವಚೆಯವರಿಗೆ ತಣ್ಣೀರು ಅತ್ಯುತ್ತಮ.