· ಒಣ ಹಣ್ಣುಗಳು - 1ಕಪ್
· ಬಾದಾಮಿ -1ಕಪ್
· ದ್ರಾಕ್ಷಿ,- 1ಕಪ್
· ಪಿಸ್ತಾ- 1ಕಪ್
· ಖರ್ಜೂರ, ಗೋಡಂಬಿ, ನೆಲಗಡಲೆ, ಎಳ್ಳು,- 1ಕಪ್
· ತೆಂಗಿನ ಕಾಯಿ ತುರಿ -ಸ್ವಲ್ಪ
· ಬೆಲ್ಲ – 1 ಅಚ್ಚು
· ತುಪ್ಪ- 5 ಚಮಚ
· ಜೇನು ತುಪ್ಪ- 2ಚಮಚ
· ಖೋವಾ -25ಗ್ರಾಂ
· ಏಲಕ್ಕಿ ಪುಡಿ -ಒಂದು ಚಿಟಿಕೆ
Advertisement
ಹಬ್ಬ ಬಂತೆದರೆ ಎಲ್ಲೆಲ್ಲೂ ಸಡಗರ. ಆದರೆ ಯಾವ ತಿಂಡಿ ತಿನಿಸು ಮಾಡುವುದು ಖರ್ಚು ಸರಿಹೊಂದುತ್ತದೊ ಇಲ್ಲವೊ ಹೀಗೆ ನಾನಾ ಅಂಶವನ್ನೂ ಸಹ ಯೋಚಿಸಬೇಕಾಗುತ್ತದೆ. ಅದಕ್ಕಾಗಿ ಸಿಂಪಲ್ ಆಗಿ ಮಾಡುವ ಡ್ರೈ ಫ್ರುಟ್ಸ್ ವಿವಿಧ ಖಾದ್ಯಗಳ ರುಚಿಕರ ಅಡುಗೆ ರೇಸಿಫಿ ಇಲ್ಲಿದೆ.
ಡ್ರೈ ಫುಟ್ಸ್ ಉಂಡೆ ಹಿಂದಿನಿಂದಲೂ ಕ್ರೀಸ್ಮಸ್ ಹಬ್ಬಕ್ಕೆ ವಿಶೇಷವಾಗಿ ಮಾಡಲಾಗುತ್ತದೆ. ಮಕ್ಕಳಿಗೆ ಈ ತಿನಿಸು ಬಹಳ ಇಷ್ಟವಾಗುವುದರಿಂದ ಸಾಂಪ್ರದಾಯಿಕ ಬಹುತೇಕ ಹಬ್ಬಗಳಲ್ಲಿ ಇದನ್ನು ಬಳಸಲಾಗುತ್ತಿರುವುದನ್ನು ಕಾಣಬಹುದಾಗಿದೆ. ಮಾಡುವ ವಿಧಾನ:
ಎಲ್ಲ ಒಣ ಹಣ್ಣುಗಳನ್ನು ಚಿಕ್ಕ ಚೂರುಗಳಾಗಿ ಮಾಡಿ ಮಿಕ್ಸಿಯಲ್ಲಿ ಸ್ವಲ್ಪ ರುಬ್ಬಿಕೊಳ್ಳಿ ಬಳಿಕ ಖೋವಾವನ್ನು ಸೇರಿಸಿ ಪುನಃ ರುಬ್ಬಿಕೊಳ್ಳಿ. ಒಂದು ಪಾತ್ರೆಗೆ ಅರ್ಧ ಬಟ್ಟಲು ನೀರನ್ನು ಮತ್ತು ಬೆಲ್ಲವನ್ನು ಹಾಕಿ ಪಾಕ ಮಾಡಿಕೊಳ್ಳಿ ಅದಕ್ಕೆ ತುಪ್ಪ ಹಾಗೂ ಜೇನುತುಪ್ಪವನ್ನು, ಚಿಟಿಕೆ ಏಲಕ್ಕಿ ಪುಡಿ ಬೆರೆಸಿ. ಪಾಕವನ್ನು ಬಳಿಕ ಹೆಚ್ಚು ತಣ್ಣಗಾಗಲು ಬೀಡದೆ ಅದಕ್ಕೆ ರುಬ್ಬಿಟ್ಟ ಪೆಸ್ಟ್ ಬೆರೆಸಿ ಅಲ್ಲಿಯೇ ಉಂಡೆ ಮಾಡಿದಾಗ ರುಚಿ ರುಚಿಯಾದ ಡ್ರೈ ಫ್ರುಟ್ಸ್ ಉಂಡೆ ಸವಿಯಲು ಸಿದ್ಧ.
Related Articles
ಬೇಕಾಗುವ ಸಾಮಗ್ರಿಗಳು
ಬಾದಾಮಿ- 20, ಪಿಸ್ತಾ- 20, ಗೋಡಂಬಿ- 20,
ಅಕ್ರೂಡಾ-10, ದ್ರಾಕ್ಷಿ -6, ಸಕ್ಕರೆ -ಅರ್ಧ ಕಪ್,
ಏಲಕ್ಕಿ ಪುಡಿ -ಒಂದು ಚಿಟಿಕೆ, ಕೊಬ್ಬರಿ ತುರಿ- ಒಂದು ಕಪ್, ಚಪಾತಿ ಹಿಟ್ಟು- 1 ಕಪ್
Advertisement
ಮಾಡುವ ವಿಧಾನ:ಮೊದಲಿಗೆ ಚಪಾತಿ ಹಿಟ್ಟನ್ನು ಕಲಸಿಟ್ಟುಕೊಳ್ಳಿ. ವಿವಿಧ ಡ್ರೈ ಫ್ರುಟ್ಸ್ ಗಳನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಿ ಬಳಿಕ ಹಿಟ್ಟಿನ ಮಧ್ಯೆ ಮಿಶ್ರ ಪುಡಿಯನ್ನು ಹಾಕಿ ಉಂಡೆ ಮಾಡಿಕೊಳ್ಳಿ. ಉಂಡೆಯಾದ ಬಳಿಕ ಲಟ್ಟಿಸಿ ತುಪ್ಪ ಅಥವಾ ಎಣ್ಣೆಗೆ ಹಾಕಿ ಹುರಿದರೆ ರುಚಿ ರುಚಿಯಾದ ಡ್ರೈ ಫ್ರುಟ್ಸ್ ಚಪಾತಿ ಸವಿಯಲು ಸಿದ್ಧ. ಇದನ್ನು ವಿಶೇಷವಾಗಿ ಸೀಕರಣಿ ಅಥವಾ ತುಪ್ಪದಲ್ಲಿ ತಿಂದರೆ ಉತ್ತಮ ಸ್ವಾದವು ಲಭ್ಯವಾಗುತ್ತದೆ.ಗರಿ ಗರಿ ರುಚಿಕರ ಡ್ರೈ ಫ್ರುಟ್ಸ್ ಅವಲಕ್ಕಿ ಮಿಕ್ಸ್‌ಚರ್ ಸವಿಯಲು ಸಿದ್ಧ. - ರಾಧಿಕಾ ಕುಂದಾಪುರ