ಹೊಸದುರ್ಗ: ಮಾರುಕಟ್ಟೆಯಲ್ಲಿ ಒಣ ಕೊಬ್ಬರಿ ಧಾರಣೆಯಲ್ಲಿ ಏರಿಕೆ ಕಂಡಿದ್ದು, ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಕ್ವಿಂಟಲ್‌ಗೆ 16 ಸಾವಿರ ರೂಪಾಯಿ ದಾಟಿರುವ ಕೊಬ್ಬರಿ ಬೆಲೆ ದೀಪಾವಳಿ ವೇಳೆಗೆ ಮತ್ತಷ್ಟು ಏರಿಕೆ ಆಗಬಹುದು ಎಂದು ಅಂದಾಜಿಸಲಾಗಿದೆ.
Advertisement
ಹಲವು ತಿಂಗಳಿನಿಂದ 10 ಸಾವಿರ ರೂ. ಒಳಗಡೆಯೇ ವಹಿವಾಟು ನಡೆಸುತ್ತಿದ್ದ ಒಣ ಕೊಬ್ಬರಿ ಬೆಲೆ ಸುದೀರ್ಘ ಕಾಯುವಿಕೆಯನಂತರ ಏರಿಕೆ ಹಾದಿ ಹಿಡಿದಿದೆ. ಜೂನ್ ತಿಂಗಳವರೆಗೆ ಕ್ವಿಂಟಲ್‌ಗೆ 8 ಸಾವಿರದ ಆಸುಪಾಸಿನಲ್ಲಿದ್ದ ದರ ಆಗಸ್ಟ್‌ನಲ್ಲಿ 10,250
ರೂ. ದಾಖಲಿಸುವ ಮೂಲಕ 10 ಸಾವಿರದ ಗಡಿ ದಾಟಿತ್ತು. ಕಳೆದ ಎರಡು ತಿಂಗಳಿನಿಂದ ಸತತವಾಗಿ ಏರಿಕೆಯಾಗುತ್ತಿರುವ ಕೊಬ್ಬರಿ ಧಾರಣೆ ಇದೀಗ 16 ಸಾವಿರ ರೂ ಗಡಿ ದಾಟಿದೆ.
ಶ್ರೀರಾಂಪುರ ಎಪಿಎಂಸಿ ಮಾರುಕಟ್ಟೆಯಲ್ಲಿರುವ ವರ್ತಕರು ಕೊಬ್ಬರಿಯನ್ನು ಖರೀದಿಸುತ್ತಾರೆ. ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ನಡೆಯುವ ಹರಾಜು ಪ್ರಕ್ರಿಯೆ ಆಧಾರದ ಮೇಲೆ ಇಲ್ಲಿನ ವಹಿವಾಟು ನಡೆಯುತ್ತದೆ.
Related Articles
Advertisement
ಬೆಲೆ ಹೆಚ್ಚಳಕ್ಕೇನು ಕಾರಣ?ಸತರ ಬರಗಾಲ, ರೋಗ ಬಾಧೆಯಿಂದ ತೆಂಗು ಇಳುವರಿ ಕಡಿಮೆ ಆಗಿದೆ. ಮತ್ತೂಂದೆಡೆ ಸಾಕಷ್ಟು ರೈತರು ಕೊಬ್ಬರಿ ಆಗುವವರೆಗೂ ಕಾಯದೆ ಎಳನೀರು, ತೆಂಗಿನಕಾಯಿ ಮಾರಾಟಕ್ಕೆ ಮುಂದಾಗಿದ್ದಾರೆ. ಹಾಗಾಗಿ ಕೊಬ್ಬರಿ ಉತ್ಪಾದನೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚುತ್ತಿದೆ. ಉತ್ತರ ಭಾರತೀಯರು ಚಳಿಗಾಲದಲ್ಲಿ ಹೆಚ್ಚು ಕೊಬ್ಬರಿ ಬಳಸಲಿದ್ದು, ದರ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಗರಿಗೆದರಿದೆ. ಇದೀಗ ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚು ಬೇಡಿಕೆ ಇರುವುದೇ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ವಾರದ ಹಿಂದೆ ಕೊಬ್ಬರಿಗೆ ಕ್ವಿಂಟಲ್‌ಗೆ 18 ಸಾವಿರ ರೂ. ಗಡಿ ದಾಟಿತ್ತು. ದಲ್ಲಾಳಿಗಳು ಮತ್ತು ರವಾನೆದಾರರ ತಂತ್ರದಿಂದ ಕೊಬ್ಬರಿ ಬೆಲೆ ಇಳಿಕೆ ಕಂಡಿದೆ. ರೋಗ, ಕೀಟ ಬಾಧೆ, ಇಳುವರಿ ಕುಂಠಿತ ಆಗಿರುವುದರಿಂದ ಕೊಬ್ಬರಿ ದರ ಇನ್ನಷ್ಟು ಏರಿಕೆ ಆಗಬೇಕು. ಪ್ರಸ್ತುತ ತೆಂಗಿನಕಾಯಿ ಪ್ರತಿ ಕ್ವಿಂಟಲ್‌ಗೆ 55 ಸಾವಿರ ರೂ. ದರ ಸಿಗುತ್ತಿರುವುದು ಖುಷಿ ತಂದಿದೆ.
* ಕೊರಟಿಕೆರೆ ಮಹೇಶ್ವರಪ್ಪ, ತೆಂಗು ಬೆಳೆಗಾರ ರೋಗ ಬಾಧೆಯಿಂದ ಇಳುವರಿ ಕಡಿಮೆ ಆಗಿರುವುದರಿಂದ ತೆಂಗಿನಕಾಯಿಗೆ ಉತ್ತಮ ಬೆಲೆ ಸಿಗುತ್ತಿದೆ. ಕೆಜಿಗೆ 50 ರೂ. ಒಳ್ಳೆಯ ಬೆಲೆ ಸಿಗುತ್ತಿರುವುದರಿಂದ ಹೆಚ್ಚಿನ ರೈತರು ತೆಂಗಿನಕಾಯಿ ಮಾರಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಬ್ಬರಿ ಬೆಲೆ 20 ಸಾವಿರ ಗಡಿ ತಲುಪಿದರೂ ಆಶ್ಚಯವಿಲ್ಲ.
*ಬಾಗೂರು ರಂಗಪ್ಪ, ತೆಂಗು ಬೆಳೆಗಾರ