Advertisement
ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ಬೆಲೆಯ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ. ವಾರದಿಂದ ವಾರಕ್ಕೆ ಬೆಲೆಯಲ್ಲಿ ಅಜಗಜ ವ್ಯತ್ಯಾಸವಾಗುತ್ತಿದೆ. ಮಾರಾಟಗಾರರು ಕೂಡಾ ದಾಸ್ತಾನು ಮಾಡಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಬಹಳಷ್ಟು ಖರೀದಿ ಮಾಡಿ ಹಾನಿಯನ್ನು ಅನುಭವಿಸುವ ಬದಲಾಗಿ ಸ್ವಲ್ಪ ಪ್ರಮಾಣದಲ್ಲಿ ಖರೀದಿಸಿ ಅದನ್ನೇ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.
Related Articles
Advertisement
ಸದ್ಯ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಅರ್ಧದಷ್ಟು ಇರಬೇಕಾಗಿತ್ತು. ಆದರೆ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿರುವುದರಿಂದ ಗ್ರಾಹಕರು ಕೂಡಾ ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೆನಸಿನಕಾಯಿ ಬೆಲೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳುತ್ತಿದ್ದಾರೆ. ಉತ್ತಮ ಗುಣಮಟ್ಟದ ಬ್ಯಾಡಗಿ ಮೆನಸಿಕಾಯಿಯನ್ನು ಮೊದಲು ಹತ್ತಾರು ಚೀಲದಷ್ಟು ಖರೀದಿ ಮಾಡುತ್ತಿದ್ದೇವು. ಈಗ ಬೆಲೆ ಹೆಚ್ಚಾಗಿರುವುದರಿಂದ ಮತ್ತು ಮುಂದಿನ ದಿನಗಳಲ್ಲಿ ಬೆಲೆಯ ಅನಿಶ್ಚಿತತೆಯಿಂದಾಗಿ ಕೇವಲ ಒಂದು ಚೀಲ ಮಾತ್ರ ಖರೀದಿ ಮಾಡಿದ್ದೇವೆ ಎನ್ನುತ್ತಾರೆ ಸ್ಥಳೀಯ ಮೆನಸಿಕಾಯಿ ಮಾರಾಟಗಾರ ಸಂಜಯ ಸುಟ್ಟಟ್ಟಿ.
ಎರಡು ದಶಕಗಳಲ್ಲಿ ಬೆಲೆಯಲ್ಲಿ ಇಷ್ಟೊಂದು ಏರು ಪೇರುಗಳಾಗಿರಲಿಲ್ಲ. ಆದ್ದರಿಂದ ಓಣ ಮೆನಸಿನಕಾಯಿಯು ಮಾರಾಟಗಾರರಿಗೂ ಮತ್ತು ಖರೀದಿ ಮಾಡುವ ಗ್ರಾಹಕರಿಗೂ ಮತ್ತಷ್ಟು ಖಾರವಾಗಿ ಪರಿಣಮಿಸಿದೆ. ಇದರಿಂದಾಗಿ ಬಡ ವರ್ಗದ ಜನರು ಒಣ ಮೆಣಸಿನಕಾಯಿ ಬದಲಾಗಿ ಮನೆಯಲ್ಲಿ ಹಸಿ ಮೆನಸಿಕಾಯಿಯ ಚಟ್ನಿಯನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
– ಕಿರಣ ಶ್ರೀಶೈಲ ಆಳಗಿ