ಕುಣಿಗಲ್: ಕರ್ತವ್ಯದ ವೇಳೆ ಮದ್ಯಪಾನ ಮಾಡಿ ಶಾಲೆಗೆ ಆಗಮಿಸಿದ ಶಿಕ್ಷಕನನ್ನು ಅಮಾನತು ಮಾಡಿದ ಘಟನೆ ತಾಲೂಕಿನ ಹೊಸಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಡೆದಿದೆ.
ವಿ.ಕಾಂತರಾಜು ಅಮಾನತುಗೊಂಡು ಶಾಲೆಯ ಸಹ ಶಿಕ್ಷಕ.
ಮಾ 17 ರಂದು ಸಹ ಶಿಕ್ಷಕ ವಿ.ಕಾಂತರಾಜು ಮದ್ಯಪಾನ ಮಾಡಿ ಶಾಲೆಗೆ ಹಾಜರಾಗಿದ್ದರು. ಗ್ರಾಮಸ್ಥರು ಹಾಗೂ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಶಾಲಾ ಭೇಟಿಯ ಸಂದರ್ಭ ವಿಚಾರಿಸಿದಾಗ ಕಾಂತರಾಜು ಮದ್ಯಪಾನ ಮಾಡಿ ಕರ್ತವ್ಯಕ್ಕೆ ಬಂದಿರುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಗ್ರಾಮಸ್ಥರು ತಿಳಿಸಿದ್ದಾರೆ. ಶಿಕ್ಷಕ ಯಾವುದೇ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದೆ ಇರುವುದನ್ನು ವಿಚಾರಿದಾಗ ಹಾರಿಕೆ ಉತ್ತರವನ್ನು ನೀಡಿದ್ದಾರೆ.
ಈ ವೇಳೆ ಶಿಕ್ಷಕ ಮದ್ಯಪಾನ ಮಾಡಿರುವುದು ಕಂಡು ಬಂದಿದ್ದು, ಕಾಂತರಾಜು ಅವರನ್ನು ಅಧಿಕಾರಿಗಳು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹಾಜರುಪಡಿಸಿ, ತಪಾಸನೆ ನಡೆಸಿದ್ದಾರೆ.
ಇದನ್ನೂ ಓದಿ:ದಿ ಕಾಶ್ಮೀರ್ ಫೈಲ್ಸ್: ರಾಜ್ಯದಲ್ಲಿ 90ರ ದಶಕ ಮತ್ತು ನಂತರ ಯಾರು ಅಧಿಕಾರದಲ್ಲಿದ್ರು? ಒಮರ್
ತಪಾಸಣೆ ವೇಳೆ ಶಿಕ್ಷಕ ಮಧ್ಯಪಾನ ಮಾಡಿರುವುದಾಗಿ ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಶಿಕ್ಷಕನನ್ನು ಕರ್ತವ್ಯ ಲೋಪಗಳ ಬಗ್ಗೆ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು ಆದೇಶಿಸಿದ್ದಾರೆ.