Advertisement

ಕುಡಿದ ಮತ್ತಿನಲ್ಲಿ ಮಹಿಳೆಯ ತಲೆ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ ರೈಲಿನ ಟಿಟಿಇ

02:40 PM Mar 14, 2023 | Team Udayavani |

ಲಕ್ನೋ: ವಿಮಾನದಲ್ಲಿ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಸುದ್ದಿಯಾದ ಬಳಿಕ ಅಂಥದ್ದೇ ಮತ್ತೊಂದು ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ನಡೆದಿರುವುದು ಬೆಳಕಿಗೆ ಬಂದಿದೆ.

Advertisement

ಭಾನುವಾರ (ಮಾ.12 ರಂದು) ಅಮೃತಸರದಿಂದ ಕೋಲ್ಕತ್ತಾಕ್ಕೆ ತೆರಳುವ ರೈಲಿನಲ್ಲಿ ಈ ಘಟನೆ ನಡೆದಿದ್ದು, ಅಕಾಲ್ ತಖ್ತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹಿಳೆ ತನ್ನ ಪತಿ ರಾಜೇಶ್‌ ಕುಮಾರ್‌ ಅವರೊಂದಿಗೆ ಇದ್ದರು. ದಂಪತಿಗಳು ಎ1 ಕೋಚ್‌ ನಲ್ಲಿದ್ದರು. ಮಧ್ಯರಾತ್ರಿ ರೈಲಿನ ಟಿಕೆಟ್​ ಪರಿವೀಕ್ಷಕ (ಟಿಟಿಇ) ಬಿಹಾರ ಮೂಲದ ಮುನ್ನಾ ಕುಮಾರ್ ಕುಡಿದ ಮತ್ತಿನಲ್ಲಿ ಮಹಿಳೆಯ ತಲೆಯ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಹೇಳಿದ್ದಾರೆ.

ಟಿಟಿಇಯ ಅಸಭ್ಯ ವರ್ತನೆಗೆ ಮಹಿಳೆ ಕಿರುಚಿದ್ದಾರೆ. ಈ ವೇಳೆ ಎಚ್ಚೆತ ಇತರ ಪ್ರಯಾಣಿಕರು ಒಟ್ಟು ಸೇರಿ ಕುಡಿದು ಟೈಟಾಗಿದ್ದ ಮುನ್ನಾ ಕುಮಾರ್ ನನ್ನು ಹಿಡಿದು ಥಳಿಸಿದ್ದಾರೆ. ಸೋಮವಾರ ರೈಲು ಲಕ್ನೋದ ಚಾರ್‌ಬಾಗ್ ರೈಲು ನಿಲ್ದಾಣವನ್ನು ತಲುಪಿದಾಗ ಟಿಟಿಇಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next