Advertisement

Drunk driver: ಮದ್ಯದ ಅಮಲಿನಲ್ಲಿ ರೈಲ್ಲೇ ಹಳಿ ಮೇಲೆ ಟ್ರಕ್‌ ನಿಲ್ಲಿಸಿ ಪರಾರಿಯಾದ ಚಾಲಕ

12:03 PM Nov 26, 2023 | Team Udayavani |

ಚಂಡಿಗಢ: ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ರೈಲ್ವೇ ಹಳಿ ಮೇಲೆ ಟ್ರಕ್‌ ನ್ನು ಬಿಟ್ಟು ಹೋಗಿರುವ ಘಟನೆ ಪಂಜಾಬ್‌ ನ ಲೂಧಿಯಾನದಲ್ಲಿ ನಡೆದಿದೆ.

Advertisement

ಟ್ರಕ್ ಚಾಲಕ ತನ್ನ ವಾಹನವನ್ನು ಶುಕ್ರವಾರ ರಾತ್ರಿ ಲುಧಿಯಾನ-ದೆಹಲಿ ರೈಲ್ವೆ ಹಳಿಯಲ್ಲಿ ಓಡಿಸಿದ್ದಾನೆ. ವಾಹನವನ್ನು ಶೇರ್ಪುರದಿಂದ ಲುಧಿಯಾನ ರೈಲು ನಿಲ್ದಾಣದ ಕಡೆ ಹಳಿ ಮೇಲೆ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಟ್ರಕ್‌ ಹಳಿಗಳ ನಡುವೆ ಸಿಲುಕಿಕೊಂಡಿದೆ. ಇದರಿಂದ ಚಾಲಕ ವಾಹನವನ್ನು ಅಲ್ಲೇ ಬಿಟ್ಟು ಪರಾರಿ ಆಗಿದ್ದಾನೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ತನಿಖಾಧಿಕಾರಿ ಜಸ್ವಿರ್ ಸಿಂಗ್ ಹೇಳಿದ್ದಾರೆ.

ಹಳಿಯಲ್ಲಿ ಟ್ರಕ್ ನ್ನು ಗಮನಿಸಿದ ಸ್ಥಳೀಯರು ಸಮಯಕ್ಕೆ ಸರಿಯಾಗಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

ಇದನ್ನರಿತು ಜಾಗೃತರಾದ ಮೇಲೆ, ಲೊಕೊ ಪೈಲಟ್ ರೈಲನ್ನು ನಿಧಾನಗೊಳಿಸಿ, ಟ್ರಕ್‌ನಿಂದ ಕೆಲವು ಮೀಟರ್ ದೂರದಲ್ಲಿ ನಿಲ್ಲಿಸಿದ್ದಾರೆ.

ಪರಾರಿಯಾದ ಚಾಲಕನನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದ್ದಾರೆ. ಚಾಲಕನ ವೈದ್ಯಕೀಯ ಪರೀಕ್ಷೆಯಲ್ಲಿ ಆತ ಮದ್ಯದ ಅಮಲಿನಲ್ಲಿದ್ದದ್ದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಕೆಲಕಾಲ ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸುಮಾರು ಒಂದು ಗಂಟೆಯ ನಂತರ ರೈಲು ಸಂಚಾರವನ್ನು ಪುನಃಸ್ಥಾಪಿಸಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next