Advertisement

ಇಂಫಾಲ: 3 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶ, ಒಬ್ಬ ಸೆರೆ

04:54 PM Jan 06, 2018 | Team Udayavani |

ಇಂಫಾಲ : ಮಣಿಪುರದ ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಪೊಲೀಸರಿಂದು ಅಪಾರ ಪ್ರಮಾಣದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡು ಒಬ್ಟಾತನನ್ನು ಬಂಧಿಸಿದ್ದಾರೆ. ಮಾದಕ ದ್ರವ್ಯದ ಅಂತಾರಾಷ್ಟ್ರೀಯ ಮಾರುಕಟ್ಟೆ ದರ 3 ಕೋಟಿ ರೂ.ಗಳೆಂದು ಪೊಲೀಸರು ಹೇಳಿದ್ದಾರೆ.

Advertisement

ಖಚಿತ ಮಾಹಿತಿ ದೊರೆತ ಪ್ರಕಾರ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಇಂಫಾಲ ಪಶ್ಚಿಮ ಎನ್‌ ಜಿ ಕಾಲೇಜ್‌ ಗೇಟ್‌ ಬಳಿ ಮಿನಿ ಟ್ರಕ್‌ ಒಂದನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿ, ಅದರೊಳಗೆ ಮರಳಿನ ಚೀಲದೊಳಗೆ ಅವಿತಿಡಲಾಗಿದ್ದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡರು. ಈ ಮಾದಕ ದ್ರವ್ಯವು ಭಾರತ – ಮ್ಯಾನ್‌ಮಾರ್‌ ಗಡಿಯಲ್ಲಿ ಮೋರೇ ಪಟ್ಟಣದಿಂದ ಬಂದಿತ್ತೆಂದು ಪೊಲೀಸರು ಹೇಳಿದ್ದಾರೆ. 

ಮಿನಿ ಟ್ರಕ್‌ ಡ್ರೈವರ್‌ ಎನ್‌ ರಂಜಿತ್‌ ಎಂಬಾತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next