ಗುವಾಹಟಿ: ಅಸ್ಸಾಂನ ಕಾಮರೂಪ ಮೆಟ್ರೋಪಾಲಿಟನ್ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 100 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಖಚಿತ ಸುಳಿವಿನ ಮೇರೆಗೆ ಗುವಾಹಟಿ ಪೊಲೀಸರು ಮಣಿಪುರದಿಂದ ಬರುತ್ತಿದ್ದ ಟ್ರಕ್ಕನ್ನು ಸೋನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಟೋಲ್ ಪ್ಲಾಜಾದಲ್ಲಿ ತಡೆದು ವಾಹನದಿಂದ ಬರೋಬ್ಬರಿ 4.6 ಲಕ್ಷ ಯಾಬಾ ಮಾತ್ರೆಗಳು, 12 ಕೆಜಿ ಮೆಥಾಂಫೆಟಮೈನ್ ಮತ್ತು 1.5 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಟ್ರಕ್‌ನಲ್ಲಿದ್ದ ಇಬ್ಬರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಅಸ್ಸಾಂನಲ್ಲಿ ಪೊಲೀಸ್ ಫೈರಿಂಗ್: ಗ್ಯಾಂಗ್ ರೇಪ್ ಆರೋಪಿ ಹತ್ಯೆ
Related Articles
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಟ್ವೀಟ್‌ನಲ್ಲಿ ಗುವಾಹಟಿ ಪೊಲೀಸರನ್ನು ‘ಡ್ರಗ್ಸ್ ವಿರುದ್ಧದ ಯುದ್ಧದಲ್ಲಿ ಭಾರಿ ಯಶಸ್ಸಿಗೆ’ ಶ್ಲಾಘಿಸಿ, “ಒಳ್ಳೆಯ ಕೆಲಸ! ಅದನ್ನು ಮುಂದುವರಿಸಿ!” ಎಂದಿದ್ದಾರೆ.