ಬೆಂಗಳೂರು: ಆಫ್ರಿಕಾದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಲಿಬೇರಿಯನ್ ಮಹಿಳೆಯಿಂದ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬರೋಬ್ಬರಿ 30 ಕೋಟಿ ರೂ. ಮೌಲ್ಯದ ಮಾದಕ ವಸ್ತು ಕೋಕೇನ್ ಜಪ್ತಿ ಮಾಡಿದ್ದಾರೆ.
ಲಿಬೇರಿಯನ್‌ನ 38 ವರ್ಷದ ಮಹಿಳೆಯೊಬ್ಬರು ಕಪ್ಪು ಬಣ್ಣದ ಸೂಟ್‌ಕೇಸ್‌ನಲ್ಲಿ ಬಟ್ಟೆಗಳ ಮಧ್ಯೆ ಬಚ್ಚಿಟ್ಟಿದ್ದಂತಹ 30 ಕೋಟಿ ರೂ.ಮೌಲ್ಯದ ಎರಡು ಕೆ.ಜಿ ಕೊಕೇನ್ ವಶಕ್ಕೆ ಪಡೆಯಲಾಗಿದೆ. ಪ್ರವಾಸಿ ವೀಸಾದಡಿ ಇಥಿಯೋಪಿಯ ಏರ್‌ಲೈನ್ಸ್‌ನಿಂದ ಆಫ್ರಿಕಾದ ಅಡಿಸ್ ಅಬಾಬಾದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೇ 26 ರಂದು ಬಂದಿಳಿದ ಮಹಿಳೆ, ಹೊರಗೆ ನಡೆದುಹೋಗುವಾಗ ಅನುಮಾನಗೊಂಡ ಡಿಆರ್‌ಐ ಅಧಿಕಾರಿಗಳು ತಡೆದು ಪರಿಶೀಲಿಸಿದಾಗ ಕಳ್ಳ ಸಾಗಣೆ ಬೆಳಕಿಗೆ ಬಂದಿದೆ.
ವಿಮಾನ ನಿಲ್ದಾಣದ ಹೊರಗಿನ ವ್ಯಕ್ತಿಗೆ ಸರಕುಗಳನ್ನು ಹಸ್ತಾಂತರಿಸಲು ಈಕೆಯನ್ನು ನೇಮಿಸಿಕೊಂಡಿದ್ದರು. ಅದಕ್ಕಾಗಿ ಕೋಡ್ ವರ್ಡ್ ಸಹ ನೀಡಲಾಗಿತ್ತು. ಈಕೆಯಿಂದ ಡ್ರಗ್ಸ್ ತುಂಬಿದ್ದ ಬ್ಯಾಗ್ ಪಡೆಯಲು ಬಂದಿದ್ದ ವ್ಯಕ್ತಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.