Advertisement

ಡ್ರಗ್ಸ್‌ ಮಾರಾಟ: ಕಿರುತೆರೆ ನಟ ಸೇರಿ ಮೂವರ ಸೆರೆ

01:10 PM Sep 24, 2022 | Team Udayavani |

ಬೆಂಗಳೂರು: ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಕೇರಳದ ಕಿರುತೆರೆ ನಟ ಸೇರಿ ಮೂವರು ಆರೋಪಿಗಳನ್ನು ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಸಿಹಾಜ್‌ ಮೊಹಮ್ಮದ್‌(26), ಮೊಹಮ್ಮದ್‌ ಸಾಹೀದ್‌(30) ಮತ್ತು ಜೀತಿನ್‌ (32) ಬಂಧಿತರು. ಆರೋಪಿಗಳಿಂದ ಆರು ಲಕ್ಷ ರೂ. ಮೌಲ್ಯದ 101 ಗ್ರಾಂ ಎಂಡಿಎಂಎ ಮಾತ್ರೆಗಳು ಮತ್ತು 1.50 ಲಕ್ಷ ರೂ. ಮೌಲ್ಯದ 2 ಕೆ.ಜಿ. 80 ಗ್ರಾಂ ಗಾಂಜಾ ಹಾಗೂ ಎರಡೂವರೆ ಸಾವಿರ ರೂ. ನಗದು, ಮೊಬೈಲ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

ಆರೋಪಿಗಳು ಸೆ.19 ರಂದು ಠಾಣಾ ವ್ಯಾಪ್ತಿಯ ಕಾಲೇಜೊಂದರ ಬಳಿ ವಿದ್ಯಾರ್ಥಿಗಳಿಗೆ ಡ್ರಗ್ಸ್‌ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ.

ಕೇರಳದಿಂದ ಡ್ರಗ್ಸ್‌ಗಳನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು. ಆರೋಪಿಗಳ ಪೈಕಿ ಸಿಹಾಜ್‌ ಮೊಹಮ್ಮದ್‌ ಕೇರಳದಲ್ಲಿ ಕಿರುತೆರೆ ನಟನಾಗಿದ್ದು, ಮಾದಕ ವಸ್ತು ವ್ಯಸನಿಯಾಗಿದ್ದ. ಜತೆಗೆ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಮೊಬೈಲ್‌ ಅಂಗಡಿ ನಡೆಯುತ್ತಿದ್ದ ಮೊಹಮ್ಮದ್‌ ಸಾಹಿದ್‌ ಜತೆ ಸೇರಿಕೊಂಡು ಡ್ರಗ್ಸ್‌ ದಂಧೆಗೆ ಇಳಿದಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next