Advertisement
ಪಾರ್ಟಿಗಳಲ್ಲಿ ಪಾಲ್ಗೊಳ್ಳುವವರು ಯಥೇತ್ಛವಾಗಿ ಡ್ರಗ್ಸ್ ಸೇವಿಸಬಹುದು ಎಂಬ ನಿರೀಕ್ಷೆಯಲ್ಲಿ ಡ್ರಗ್ಸ್ ಪೆಡ್ಲರ್ಗಳು (ಮಾದಕ ವಸ್ತು ಮಾರಾಟ, ಪೂರೈ ಎಕ ಜಾಲ) ಮಂಗಳೂರು ನಗರ, ಮಣಿಪಾಲ ಸಹಿತ ವಿದ್ಯಾರ್ಥಿ, ಯುವ ಸಮುದಾ ಯಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಗಳನ್ನು ಕೇಂದ್ರೀಕರಿಸಿರುವ ಕಾರಣ, ಈಗಾಗಲೇ ಕೆಲವು ಪ್ರಕರಣಗಳನ್ನು ಪತ್ತೆ ಹಚ್ಚಿ ಪೆಡ್ಲರ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದಿವೆ ಪೊಲೀಸ್ ಮೂಲಗಳು.
ಗಾಂಜಾ ಮಾತ್ರವಲ್ಲದೆ ಎಂಡಿ ಎಂಎ, ಕೊಕೇನ್ ಮೊದಲಾದ ಪಾರ್ಟಿ ಡ್ರಗ್ಸ್/ಸಿಂಥೆಟಿಕ್ ಡ್ರಗ್ಸ್ ಗಳೂ ಪೂರೈಕೆಯಾಗು ತ್ತಿವೆ. ಹೆಚ್ಚಾಗಿ ಬೆಂಗಳೂರು ಮತ್ತು ಗೋವಾದಿಂದ ಮಂಗಳೂರು, ಉಡುಪಿ ನಗರಕ್ಕೆ ಡ್ರಗ್ಸ್ ಪೂರೈಸುತ್ತಿರುವ ಮಾಹಿತಿ ಈ ಹಿಂದೆಯೂ ಪೊಲೀಸರಿಗೆ ಸಿಕ್ಕಿತ್ತು. ಅದರಂತೆ ಕಾರ್ಯಾಚರಣೆ ನಡೆಸಿ ಕೆಲವು ಪೆಡ್ಲರ್ಗಳನ್ನು ವಶಕ್ಕೆ ಪಡೆದಿದ್ದರು. ಆದರೆ ಈಗ ಮತ್ತೆ ಹೊಸವರ್ಷದ ಆಚರಣೆ ವೇಳೆ ಪಾರ್ಟಿ ಡ್ರಗ್ಸ್ ಗಳಿಗೆ ಬೇಡಿಕೆ ಹೆಚ್ಚಳವಾ ಗುವ ನಿರೀಕ್ಷೆಯಿಂದ ಹೊರ ರಾಜ್ಯದ ಪೆಡ್ಲರ್ಗಳು ಕರಾವಳಿ ಭಾಗದಲ್ಲಿ ಹೆಚ್ಚಿನ ಗಿರಾಕಿಗಳನ್ನು ಕುದುರಿಸಲು ಮುಂದಾಗಿದ್ದಾರೆ.
Related Articles
ಪಾರ್ಟಿಗಳಲ್ಲಿ ಪಾಲ್ಗೊಳ್ಳುವವರು ಸೇವಿಸುವ ಡ್ರಗ್ಸ್ಗೆ ಪಾರ್ಟಿ ಡ್ರಗ್ಸ್ ಎನ್ನಲಾ ಗುತ್ತದೆ. ಇದರಲ್ಲಿ ಎಲ್ಎಸ್ಡಿ ಸ್ಟಾಂಪ್, ಎಕ್ಸ್ಟೆಸಿ, ಎಂಡಿಎಂಎ ಮೊದಲಾದ ಡ್ರಗ್ಸ್ಗಳು ಸೇರಿವೆ. ಕೆಲವು ಡ್ರಗ್ಸ್ಗಳಿಗೆ ಡ್ರಾಪ್ಸ್ ಲೆಕ್ಕದಲ್ಲಿ ದರ ವಿಧಿಸಲಾಗುತ್ತದೆ. ಇಂತಹ ಡ್ರಗ್ಸ್ಗಳು ಪಾರ್ಟಿಗಳಲ್ಲಿ ಮ್ಯೂಸಿಕ್ಗೆ ತಕ್ಕಂತೆ ಹುಚ್ಚೆದ್ದು ಕುಣಿಸುವ ಉತ್ಸಾಹ ನೀಡುತ್ತದೆ. ಹಾಗಾಗಿ ಇವುಗಳನ್ನು ಪಾರ್ಟಿಗಳಲ್ಲಿ ಬಳಸಲಾಗುತ್ತದೆ. ಕೆಲವು ಪಾರ್ಟಿಗಳಲ್ಲಿ ಮದ್ಯಕ್ಕಿಂತಲೂ ಇಂತಹ ಡ್ರಗ್ಸ್ಗಳಿಗೆ ಬೇಡಿಕೆ ಇರುತ್ತದೆ ಎನ್ನುತ್ತಾರೆ ಡ್ರಗ್ಸ್ ಡಿಎಡಿಕ್ಷನ್ ಸೆಂಟರ್ನ ಆಪ್ತ ಸಮಾಲೋಚಕರು. ಇಂತಹ ಪಾರ್ಟಿಗಳಲ್ಲಿ ಯುವತಿಯರ ದುರ್ಬಳಕೆ, ಇತರ ಅಪರಾಧ ಕೃತ್ಯಗಳ ಅಪಾಯ ಕೂಡ ಅಧಿಕ. ಈ ಡ್ರಗ್ಸ್ಗಳು ಮಿದುಳಿನ ಮೇಲೆ ದೀರ್ಘಕಾಲಿಕ ದುಷ್ಪರಿಣಾಮ ಉಂಟು ಮಾಡುತ್ತದೆ ಎನ್ನುತ್ತಾರೆ ಅವರು.
Advertisement
58 ಮಂದಿಯ ಬಂಧನ ಈ ವರ್ಷ ಇದುವರೆಗೆ ದ.ಕ.ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮಾದಕ ವಸ್ತು ವಶ ಮತ್ತು ಸೇವನೆಗೆ ಸಂಬಂಧಿಸಿ ಒಟ್ಟು 43 ಪ್ರಕರಣಗಳು ದಾಖಲಾಗಿವೆ. ಮಾದಕ ವಸ್ತು ವಶಪಡಿಸಿಕೊಂಡ 12 ಪ್ರಕರಣಗಳಲ್ಲಿ 14 ಮಂದಿ ಆರೋಪಿಗಳನ್ನು ಬಂಧಿಸಿ 4 ಕೆಜಿ 196 ಗ್ರಾಂ ಗಾಂಜಾ, 25.33 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತು ಸೇವನೆಗೆ ಸಂಬಂಧಿಸಿ 31 ಪ್ರಕರಣಗಳು ದಾಖಲಾಗಿದ್ದು, 44 ಮಂದಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಯತೀಶ್
ಎನ್. ತಿಳಿಸಿದ್ದಾರೆ. ಡ್ರಗ್ಸ್ ಬಳಸಿದರೆ ಕಠಿನ ಕ್ರಮ
ಹೊಸ ವರ್ಷವನ್ನು ಕಾನೂನು, ನಿಯಮಾನುಸಾರವೇ ಆಚರಿಸಬೇಕು. ಕಾನೂನು ಉಲ್ಲಂ ಸಿದರೆ ಕ್ರಮ ಅನಿವಾರ್ಯ. ಮುಖ್ಯವಾಗಿ ಡ್ರಗ್ಸ್ ಬಳಕೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಡ್ರಗ್ಸ್ ಸ್ಕ್ವಾಡ್ ಹಾಗೂ ಪೊಲೀಸರ ಇತರ ತಂಡಗಳು ನಿಗಾ ವಹಿಸಲಿವೆ. ಯುವಜನತೆ ಎಲ್ಲ ರೀತಿಯ ಡ್ರಗ್ಸ್, ಅಮಲು ಪದಾರ್ಥಗಳಿಂದ ದೂರವಿರಬೇಕು.
-ಅನುಪಮ್ ಅಗರ್ವಾಲ್, ಪೊಲೀಸ್ ಆಯುಕ್ತರು, ಮಂಗಳೂರು
-ಡಾ| ಕೆ ಅರುಣ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ