Advertisement

ಶ್ರೀಮಂತರ ಮಕ್ಕಳಿಗೆ ಐಸ್ ಕ್ರೀಂ, ಹಣ್ಣಿನಲ್ಲಿ ಡ್ರಗ್ಸ್ ನೀಡುವ ಗುಮಾನಿಯಿದೆ: ಸುರೇಶ್ ಕುಮಾರ್

03:30 PM Sep 07, 2020 | keerthan |

ಚಾಮರಾಜನಗರ: ಶ್ರೀಮಂತರ ಮಕ್ಕಳು ಓದುವ ಶಾಲೆಗಳಲ್ಲಿ ಅವರನ್ನು ಸೆಳೆಯುವುದಕ್ಕೆ, ಅವರಿಗೆ ಆಮಿಷ ಒಡ್ಡುವುದಕ್ಕೆ, ಅವರು ತಿನ್ನುವ ಐಸ್‌ಕ್ರೀಂ, ಹಣ್ಣುಗಳಲ್ಲಿ ಡ್ರಗ್ಸ್ ಸವರಿ ಕೊಡುತ್ತಾರೆ ಎಂಬ ದೊಡ್ಡ ಗುಮಾನಿ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಮೂರು ವರ್ಷದ ಹಿಂದೆಯೇ ಈ ವಿಚಾರವನ್ನು ನಾವು ಬೇರೆ ಸರ್ಕಾರ ಇದ್ದಾಗ ಪ್ರಸ್ತಾಪ ಮಾಡಿದ್ದೆವು. ಅಂದಿನ ಉಪಸಭಾಪತಿಯವರು ವರದಿ ಸಹ ನೀಡಿದ್ದರು. ನಮ್ಮ ಡ್ರಗ್ಸ್ ಮತ್ತು ನಾರ್ಕೊಟಿಕ್ ಸೆಕ್ಷನ್, ಉಗ್ರವಾದ ಕಾಯ್ದೆಯಿದೆ ಇದರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ನಮ್ಮ ಸರ್ಕಾರ ಬಹಳ ಕಠಿಣ ನಿರ್ಧಾರ ಕೈಗೊಂಡಿದೆ. ಈ ವಿಷಯದಲ್ಲಿ ಯಾವುದೇ ಕಾರಣಕ್ಕೆ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಡ್ರಗ್ಸ್ ಪಿಡುಗು ಇದು ಸಮಾಜವನ್ನು, ಯುವ ಜನಾಂಗವನ್ನು ದುರ್ಬಲ ಮಾಡುವ ಪ್ರಯತ್ನ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನಟಿ ರಾಗಿಣಿ ದ್ವಿವೇದಿ

ಇದರ ವಿರುದ್ಧ ಬಹಳ ಮುಂಚೆಯಿಂದಲೂ ಇದರ ಬಗ್ಗೆ ಮಾತನಾಡಿದ್ದೇನೆ. ಈ ಪಿಡುಗಿಗೆ ತಾರ್ಕಿಕ ಅಂತ್ಯ ಹಾಡಬೇಕು. ಬೇರು ಸಮೇತ ಇದನ್ನು ಕಿತ್ತು ಹಾಕಬೇಕು. ವಿದ್ಯಾರ್ಥಿಗಳು, ಯುವಜನರು ಇದಕ್ಕೆ ಬಲಿಯಾಗುವುದನ್ನು ಯಾವುದೇ ಸಮಾಜ ಸಹಿಸುವಂತಿಲ್ಲ. ನಮ್ಮ ಜಿಲ್ಲೆಯಲ್ಲೂ ಸಹ ಮೂಲದವರೆಗೂ ಹೋಗಿ ಹುಡುಕಿ ತನಿಖೆ ನಡೆಸಲಾಗುವುದು ಎಂದರು.

Advertisement

ಯುವ ಜನಾಂಗವನ್ನು ಹಾಳು ಮಾಡುವ ಈ ಚಟುವಟಿಕೆಗೆ ನಾವು ಪ್ರೋತ್ಸಾಹ ಕೊಡಬಾರದು. ಆರೋಪಿಗಳನ್ನು ಒಳಗಡೆ ಹಾಕಬೇಕು. ಜಿಲ್ಲೆಯಲ್ಲಿ 16 ಜನರ ಮೇಲೆ ಗಾಂಜಾ ಬೆಳೆಯುತ್ತಿದ್ದರು ಎಂದು ಪ್ರಕರಣ ದಾಖಲಿಸಲಾಗಿದೆ ಎಂದು ಸುರೇಶ್‌ ಕುಮಾರ್ ತಿಳಿಸಿದರು.

ಇದನ್ನೂ ಓದಿ:  ಮಂಗಳೂರು: ಡ್ರಗ್ ಪೆಡ್ಲರ್ ಗಳ ಪರೇಡ್, ಖಡಕ್ ಎಚ್ಚರಿಕೆ ನೀಡಿದ ಕಮಿಷನರ್

ಪೌರಾಡಳಿತ, ರೇಷ್ಮೆ ಹಾಗೂ ತೋಟಗಾರಿಕೆ ಸಚಿವ ಡಾ. ನಾರಾಯಣಗೌಡ, ಶಾಸಕ ನಿರಂಜನಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಚಿವದ್ವಯರು ನಗರದಲ್ಲಿ ಸೋಮವಾರ ನಡೆದ ನಗರಸಭೆಯ ನೂತನ ವಾಣಿಜ್ಯ ಸಮುಚ್ಛಯ, ನವೀಕೃತ ಖಾಸಗಿ ಬಸ್ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next