Advertisement

Drugs case: ಸಂಸದ ಅಮೃತ್‌ಪಾಲ್‌ ಸಿಂಗ್‌ ಸೋದರ ಬಂಧನ

01:02 AM Jul 13, 2024 | Team Udayavani |

ಚಂಡೀಗಢ: ಮಾದಕವಸ್ತು ಪ್ರಕರಣದಲ್ಲಿ ಪ್ರತ್ಯೇಕತಾವಾದಿ ನಾಯಕ, ಸಂಸದ ಅಮೃತ್‌ಪಾಲ್‌ ಸಿಂಗ್‌ ಸೋದರನಾದ ಹರ್‌ಪ್ರೀತ್‌ ಸಿಂಗ್‌ ಹಾಗೂ ಆತನ ಸ್ನೇಹಿತ ಲವ್‌ಪ್ರೀತ್‌ ಸಿಂಗ್‌ನನ್ನು ಜಲಂಧರ್‌ ಗ್ರಾಮಾಂತರ ಪೊಲೀಸರು ಶುಕ್ರವಾರ ಬಂಧಿ ಸಿದ್ದಾರೆ. ಡೋಪ್‌ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಡ್ರಗ್‌ ಸೇವಿಸಿದ್ದು ದೃಢಪಟ್ಟಿದೆ. ಲೂಧಿಯಾನ ಮೂಲದ ಡ್ರಗ್‌ ಪೆಡ್ಲರ್‌ ಅನ್ನು ಸಹ ಬಂಧಿಸಲಾಗಿದೆ. ಫಿಲೌರ್‌ ಬಳಿಯ ರಾಷ್ಟ್ರೀ ಯ ಹೆದ್ದಾರಿಯಲ್ಲಿ ಕಾರು ನಿಂತಿರುವುದು ಕಂಡ ಸಂಚಾರಿ ಪೊಲೀಸ್‌ ಅಧಿಕಾರಿಗಳು ಅನುಮಾನ ಬಂದು ಪರಿಶೀಲಿ ಸಿದಾಗ ಡ್ರಗ್‌ ದೊರೆತಿದೆ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next