Advertisement
“ಕಿಮ್ ಜಾಂಗ್‌ನ ಆದೇಶದ ಮೇರೆಗೆ ನಾವು ಆಡಳಿತದ ಹಲವು ರಹಸ್ಯಗಳನ್ನು ಸೋರಿಕೆಯಾಗದಂತೆ ರಕ್ಷಿಸಿದ್ದೇವೆ, ಕೊಲೆ ಮಾಡಿದ್ದೇವೆ, ಅಕ್ರಮ ಮಾದಕದ್ರವ್ಯಗಳ ಪ್ರಯೋಗಾಲಯಗಳನ್ನೇ ತೆರೆದಿದ್ದೇವೆ.
Related Articles
ಲಕ್ನೋ/ಲಖೀಂಪುರಖೇರಿ: ಲಖೀಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕೇಂದ್ರ ಸಚಿವ ಅಜಯ ಕುಮಾರ್ ಮಿಶ್ರಾ ಪುತ್ರ ಅಶಿಶ್ ಮಿಶ್ರಾ ಅವರನ್ನು 3 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ಸ್ಥಳೀಯ ಕೋರ್ಟ್ ಸೋಮವಾರ ಆದೇಶ ನೀಡಿದೆ. ಹೀಗಾಗಿ ಅ.15 ರಂದು ಪೊಲೀಸ್ ವಶದ ಅವಧಿ ಮುಕ್ತಾಯವಾಗಲಿದೆ.
Advertisement
ಶನಿವಾರ ರಾತ್ರಿ ಆಶಿಶ್‌ರನ್ನು ಬಂಧಿಸಲಾಗಿತ್ತು ಅವರನ್ನು 14 ದಿನಗಳ ಕಾಲ ಪೊಲೀಸ್ ಕಸ್ಟ ಡಿಗೆ ನೀಡಬೇಕೆಂದು ಪೊಲೀಸರು ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿಯನ್ನು ಅ.12ರಿಂದ ಅ.15ರವ ರೆಗೆ ಪೊಲೀಸ್ ವಶಕ್ಕೆ ನೀಡಿದೆ.
ಈ ಸಮಯದಲ್ಲಿ ಅವರಿಗೆ ಯಾವುದೇ ರೀತಿಯಲ್ಲಿ ಹಿಂಸೆ ಮಾಡುವಂತಿಲ್ಲ ಹಾಗೂ ಅವರ ಪರ ವಕೀಲರ ಸಮ್ಮುಖದಲ್ಲೇ ವಿಚಾರಣೆ ನಡೆಸಬೇಕೆಂಬ ಷರತ್ತನ್ನು ನ್ಯಾಯಾಲಯ ಹಾಕಿದೆ.
ಮೌನ ಪ್ರತಿಭಟನೆ: ಅ.3ರ ಘಟನೆ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟದಿಂದ ಅಜಯ ಕುಮಾರ್ ಮಿಶ್ರಾರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಲಕ್ನೋದಲ್ಲಿ ಮೌನ ಪ್ರತಿಭಟನೆ ನಡೆಸಿದರು. ಅದಕ್ಕೆ ಪೂರಕವಾಗಿ ದೇಶಾದ್ಯಂತ ಕಾಂಗ್ರೆಸ್ ಮುಖಂಡರು, ಕಾರ್ಯ ಕರ್ತರು “ಮೌನ ಪ್ರತಿಭಟನೆ ನಡೆಸಿದ್ದಾರೆ.