Advertisement

ಡ್ರಗ್ಸ್‌ ನಿಷ್ಪ್ರಯೋಜಕ: ಬಾಲಿವುಡ್‌ ನಟ ಸಂಜಯ್‌ ದತ್‌

10:03 PM Oct 30, 2022 | Team Udayavani |

“ಡ್ರಗ್ಸ್‌ ನಿಷ್ಪ್ರಯೋಜಕ ವಸ್ತುವಾಗಿದೆ. ಜೀವನ ಕುರಿತ ಅಮಲು ಮಾತ್ರ ಅತ್ಯುತ್ತಮವಾದದು,’ ಎಂದು ಬಾಲಿವುಡ್‌ ನಟ ಸಂಜಯ್‌ ದತ್‌ ಹೇಳಿದರು.

Advertisement

“ದಸ್‌ ಕಾ ದಮ್‌’ ಶೋದಲ್ಲಿ ಜಾಕಿ ಶ್ರಫ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಒಮ್ಮೆ ಡ್ರಗ್‌ ತೆಗೆದುಕೊಂಡು ಅದೇ ನಶೆಯಲ್ಲಿ ಮನೆಗೆ ಬಂದು ಮಲಗಿದೆ. ನಂತರ ಎಚ್ಚರವಾದಾಗ ತುಂಬ ಹಸಿವಾಗಿತ್ತು. ಆಗ ಹಿರಿಯ ನೌಕರಿನಿಗೆ ಊಟ ತರಲು ಹೇಳಿದೆ.

ಆತ ಗಳಗಳನೆ ಕಣ್ಣೀರು ಹಾಕಿದ. “ನೀವು ಕಳೆದ ಎರಡು ದಿನಗಳಿಂದ ಏನು ತಿನ್ನದೇ ಮಲಗಿದ್ದೀರಿ’ ಎಂದು. ಅಂದೇ ನಿರ್ಧರಿಸಿದೆ, ಡ್ರಗ್ಸ್‌ ಸೇವನೆ ಬಿಡಬೇಕೆಂದು,’ ಎಂದು ಹಳೆಯ ಸಂಗತಿಯನ್ನು ನೆನಪಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next