ಎರಡು ಔಷಧಗಳ ಪ್ರಯೋಗ 2-3 ತಿಂಗಳುಗಳ ಬಳಿಕ ಪರಿಣಾಮಕಾರಿಯಾಗಿಲ್ಲ ಎಂಬುದಾಗಿ ಶ್ರುತಪಟ್ಟರೆ, ಮುಂದಿನ ಹೆಜ್ಜೆ ತ್ತೈಔಷಧ ಚಿಕಿತ್ಸೆ. ಮೂರನೆಯ ಔಷಧವು ಮಧುಮೇಹ ನಿರೋಧಕ ಔಷಧಗಳ ತೃತೀಯ ವರ್ಗದ್ದಾಗಿರಬಹುದು ಅಥವಾ ಬೇಸಲ್ ಇನ್ಸುಲಿನ್ (ಸಾಮಾನ್ಯವಾಗಿ ಮಲಗುವ ಸಮಯಕ್ಕೆ ತೆಗೆದುಕೊಳ್ಳುವಂಥದ್ದು) ಆಗಿರುತ್ತದೆ.
Advertisement
ಇನ್ಸುಲಿನ್ ಚಿಕಿತ್ಸೆಟೈಪ್ 1 ಮಧುಮೇಹ ಸಂದರ್ಭದಲ್ಲಿ, ಇನ್ಸುಲಿನ್ ಒಂದೇ ಲಭ್ಯ ಚಿಕಿತ್ಸೆಯಾಗಿರುತ್ತದೆ. ಆದರೆ ಟೈಪ್ 2 ಮಧುಮೇಹದ ಸಂದರ್ಭದಲ್ಲಿ, ಬಾಯಿಯ ಮೂಲಕ ತೆಗೆದುಕೊಳ್ಳುವ ಔಷಧಗಳ ಸೇವನೆಯ ಬಳಿಕವೂ ಗ್ಲೆ„ಸೇಮಿಕ್ ಗುರಿಯನ್ನು ರೋಗಿ ಸಾಧಿಸದಾಗ ಇನ್ಸುಲಿನ್ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಬೇಕು. ಚಿಕಿತ್ಸೆಯಿಂದ ಸಲೊ#àನಿಯೂರಿಯಾಸ್ ಅನ್ನು ವರ್ಜಿಸುವುದು ವಿಹಿತ. ಬಳಿಕ ರೋಗಿಗೆ ಇನ್ಸುಲಿನ್ ಚಿಕಿತ್ಸೆಯನ್ನು ಅಳವಡಿಸಬೇಕು. ಇನ್ಸುಲಿನ್ ಇಂಜೆಕ್ಷನ್‌ಗಳನ್ನು ತೊಡೆ, ಪೃಷ್ಠ ಅಥವಾ ಸೊಂಟ ಭಾಗದಲ್ಲಿ ಚುಚ್ಚಬಹುದಾದರೂ ಎಲ್ಲ ಇನ್ಸುಲಿನ್ ಇಂಜೆಕ್ಷನ್‌ಗಳನ್ನು ಹೊಟ್ಟೆಗೆ ಚುಚ್ಚುವುದು ವಿಹಿತ.
ಇನ್ಸುಲಿನ್‌ನ ದೈನಿಕ ಬಹು ಡೋಸಿಂಗ್ ರೋಗಿಗೆ ಅತಿಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ. ದೀರ್ಘಕಾಲ ಕ್ರಿಯಾಶೀಲವಾದ ಇನ್ಸುಲಿನ್ (ಉದಾಹರಣೆಗೆ, ಗ್ಲಾರ್ಗಿನ್, ಡೆಟೆಮಿರ್ ಅಥವಾ ಎನ್‌ಪಿಎಚ್) ಅನ್ನು ಸಾಮಾನ್ಯವಾಗಿ ದಿನಕ್ಕೊಮ್ಮೆ ಬೇಸಲ್ ಇನ್ಸುಲಿನ್ ಆಗಿ ಮತ್ತು ಕ್ಷಿಪ್ರ ಕ್ರಿಯಾಶೀಲ ಇನ್ಸುಲಿನ್ (ಉದಾಹರಣೆಗೆ, ಅಸ್ಪಾರ್ಟ್, ಗುÉಲಿಸಿನ್, ಲಿಸೊø ಅಥವಾ ರೆಗ್ಯುಲರ್) ಅನ್ನು ಪ್ರತೀ ಊಟಕ್ಕೆ ಮುನ್ನ ನೀಡಬೇಕು. ದಿನಕ್ಕೆರಡು ಬಾರಿ
ಪೂರ್ವಮಿಶ್ರಿತ ಇನ್ಸುಲಿನ್
ಪೂರ್ವಮಿಶ್ರಿತ (ಪ್ರಿಮಿಕ್ಸ್) ಇನ್ಸುಲಿನ್ ಇಂಜೆಕ್ಷನ್ ಅನ್ನು ಬೆಳಗ್ಗಿನ ಉಪಾಹಾರಕ್ಕೆ ಮುನ್ನ, ರಾತ್ರಿಯೂಟಕ್ಕೆ ಮುನ್ನ ನೀಡಲಾಗುತ್ತದೆ. ಈ ಔಷಧ ಚಿಕಿತ್ಸೆಯು ಬಹು ಇಂಜೆಕ್ಷನ್‌ಗಳನ್ನು ತೆಗೆದುಕೊಳ್ಳಲು ಹಿಂಜರಿಯುವ ರೋಗಿಗಳಿಗೆ ಸೂಕ್ತ.
Related Articles
ಸತತ ಇನ್ಸುಲಿನ್ ಊಡಿಕೆ
(ಸಿಎಸ್‌ಐಐ) ಅಥವಾ
ಇನ್ಸುಲಿನ್ ಪಂಪ್ ಚಿಕಿತ್ಸೆ
ಟೈಪ್ 1 ಮಧುಮೇಹ ಹೊಂದಿ ರುವ ಅಥವಾ ದಿನಕ್ಕೆ 4 ಅಥವಾ ಅದಕ್ಕಿಂತ ಹೆಚ್ಚು ಇನ್ಸುಲಿನ್ ಇಂಜೆಕ್ಷನ್‌ಗಳನ್ನು ಪಡೆಯುತ್ತಿರುವ ಮತ್ತು ದಿನಕ್ಕೆ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಬಾರಿ ರಕ್ತದ ಗ್ಲುಕೋಸ್ ಪರಿಶೀಲನೆಯನ್ನು ಸ್ವಯಂ ನಡೆಸುತ್ತಿರುವ; ಪ್ರಶಸ್ತ ರಕ್ತ ಗುÉಕೋಸ್ ನಿಯಂತ್ರಣ ಸಾಧಿಸಲು ಪ್ರೇರಣೆ ಹೊಂದಿರುವ, ಈ ಸಂಕೀರ್ಣ ಮತ್ತು ಸಮಯ ತೆಗೆದುಕೊಳ್ಳುವ ಚಿಕಿತ್ಸೆಯ ವಿಧಿ ವಿಧಾನಗಳನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಕೈಗೊಳ್ಳಲು ಒಲವು ಮತ್ತು ಸಾಮರ್ಥ್ಯವುಳ್ಳ ಹಾಗೂ ತನ್ನ ಆರೋಗ್ಯ ಸೇವಾದಾರ ತಂಡದ ಜತೆಗೆ ಸತತ ಸಂಪರ್ಕವನ್ನು ಇರಿಸಿಕೊಳ್ಳುವ ಒಲವುಳ್ಳಟೈಪ್ 2 ಮಧುಮೇಹ ರೋಗಿ ಸಿಎಸ್‌ಐಐ ಚಿಕಿತ್ಸೆಗೆ ಆದರ್ಶ ವ್ಯಕ್ತಿ
ಯಾಗಿರುತ್ತಾರೆ.
Advertisement